ETV Bharat / state

ಕಾಂಗ್ರೆಸ್ ಸರ್ಕಾರದ ವೈಫಲ್ಯ, ವಂಚನೆಯನ್ನು ಬಿಎಸ್​ವೈ ನೇತೃತ್ವದಲ್ಲಿ ಬಯಲಿಗೆಳೆಯುತ್ತೇವೆ: ಅಶ್ವತ್ಥನಾರಾಯಣ್

ಮಾಜಿ ಸಿಎಂ ಯಡಿಯೂರಪ್ಪ ನ. 3ರಂದು ಬೆಂಗಳೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರಿನಲ್ಲಿ ಆಗ್ತಿರೋ ಪ್ರಸ್ತುತ ಸಮಸ್ಯೆ, ರಾಜ್ಯ ಸರ್ಕಾರದ ವೈಫಲ್ಯ ತೋರಿಸುವ ಕೆಲಸ ಮಾಡಲಿದ್ದೇವೆ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಹೇಳಿದರು.

Former DCM Ashwathnarayan spoke at the news conference.
ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Oct 31, 2023, 10:36 PM IST

Updated : Oct 31, 2023, 10:49 PM IST

ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಕೇವಲ ಚರ್ಚೆಗೆ ಮೀಸಲಾಗಿದ್ದು, ಬ್ಯಾಡ್ ಬೆಂಗಳೂರು ಆಗಿದೆ. ಶಾಸಕರಿಗೆ ಅನುದಾನ ನೀಡದೇ ಸಂಪೂರ್ಣವಾಗಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದನ್ನು ಬಯಲಿಗೆಳೆಯಲು ನಮ್ಮ ನಾಯಕರಾದ ಯಡಿಯೂರಪ್ಪ ಸಿದ್ದರಾಗಿದ್ದಾರೆ. ಅದಕ್ಕಾಗಿ ನವೆಂಬರ್ 2ರಂದು ಯಡಿಯೂರಪ್ಪ ಸುದ್ದಿಗೋಷ್ಟಿ ನಡೆಸಲಿದ್ದು 3ರಂದು ಬೆಂಗಳೂರಿನಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 17 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ ನಾಯಕರ ನೇಮಕ ಆಗಿದೆ.17 ಬಿಜೆಪಿ ತಂಡಗಳು ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ ಎಂದು ಹೇಳಿದರು.

ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಸರ್ಕಾರ ವಿಫಲ: ಬೆಂಗಳೂರು ನಗರಕ್ಕೆ ಸಂಬಂಧಿಸಿದ ಸಮಸ್ಯೆ ಇದೆ. ಈ ಸಮಸ್ಯೆಗಳ ಪರಿಹಾರ ಸಂಬಂಧ ಹೋರಾಟ ಕೈಗೆತ್ತಿಕೊಳ್ಳುವ ವಿಚಾರದಲ್ಲಿ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಶಾಸಕರು ಭಾಗಿಯಾಗಿದ್ದೇವೆ.ಸರ್ಕಾರದ ನ್ಯೂನತೆ ಏನಿದೆ‌ ಎಂದು ಚರ್ಚಿಸಿದ್ದೇವೆ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಹೇಗೆ ವಿಫಲವಾಗಿದೆ. ರಸ್ತೆ ರಸ್ತೆಗಳಲ್ಲಿ ಪಾಟ್ ಹೋಲ್, ಕಸ ವಿಲೇವಾರಿ ಆಗುತ್ತಿಲ್ಲ, ಪಾರ್ಕ್, ಕೆರೆ ನಿರ್ವಹಣೆ ಆಗ್ತಿಲ್ಲ. ಕೊಟ್ಟಿರೋ ಕಾಮಗಾರಿ, ಟೆಂಡರ್ ನಿಂತಿದೆ.ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಹಿಡಿದು ಬಿಜೆಪಿ ಶಾಸಕರಿರೋ ಕ್ಷೇತ್ರದಲ್ಲಿ ಕೊಟ್ಟಿರೋ ಹಣವನ್ನು ವಾಪಸ್ ಪಡೆದು ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಕ್ಕೆ ಹಣ ಕೊಡಲಾಗಿರುವ ಕುರಿತಾಗಿ ಚರ್ಚಿಸಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ಸಿಎಂ, ಡಿಸಿಎಂ ಅವರು ಬಜೆಟ್‌ನಲ್ಲಿ ಹಣವನ್ನು ಕೊಡದೆ ಸಂಪೂರ್ಣವಾಗಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಪ್ರಧಾನಮಂತ್ರಿ ವಿರುದ್ಧವಾಗಿ ಹಾಗೂ 15 ನೇ ಹಣಕಾಸು ಆಯೋಗದ ಬಗ್ಗೆ ನಿರಾಧಾರವಾದ ಆರೋಪಗಳನ್ನು ಸಿಎಂ ಮಾಡಿದ್ದಾರೆ, ಬರದ ಬಗ್ಗೆಯೂ ಮಾತಾಡ್ತಿದ್ದಾರೆ. ಇದೆಲ್ಲವನ್ನೂ ಬಯಲಿಗೆಳೆಯಲು ನಮ್ಮ ನಾಯಕರಾದ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಹೇಳಿದ್ದೇವೆ.ಅದಕ್ಕೆ ಪೂರಕವಾಗಿ ನವೆಂಬರ್ 2ರಂದು ಯಡಿಯೂರಪ್ಪ ಅವರು ಸುದ್ದಿಗೋಷ್ಟಿ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

3ರಂದು ಯಡಿಯೂರಪ್ಪ ಬೆಂಗಳೂರಿನಲ್ಲಿ ಪ್ರವಾಸ ಮಾಡಲಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಲಿದ್ದಾರೆ.ಮಾಧ್ಯಮದ ಜೊತೆ ಹೋಗಿ ಬೆಂಗಳೂರಿನ ಪರಿಸ್ಥಿತಿ ತೋರಿಸಲಾಗುತ್ತದೆ, ಸರ್ಕಾರದ ವೈಫಲ್ಯ ತೋರಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡಲಿದ್ದೇವೆ. ಬೆಂಗಳೂರಿನಲ್ಲಿ ಆಗ್ತಿರೋ ಸಮಸ್ಯೆ ಬಗ್ಗೆ ಪ್ರಾಮಾಣಿಕವಾಗಿ ತೋರಿಸಲಿದ್ದೇವೆ ಎಂದರು.

ನಮಗೆ ಕೊಟ್ಟಿರೋ ಹಣವನ್ನು ಹಿಂಪಡೆದಿದ್ದಾರೆ. ಕಾಂಗ್ರೆಸ್ ಪ್ರತಿನಿಧಿಸುವ ಶಾಸಕರ ಕ್ಷೇತ್ರಕ್ಕೆ ಹಣ ಕೊಟ್ಟಿದ್ದಾರೆ.ಈ ರೀತಿ ಮೋಸ ಮಾಡಿ ಬಿಜೆಪಿ ಶಾಸಕರಿಗೆ ಅನ್ಯಾಯ ಮಾಡ್ತಿರೋದು ಸಿದ್ದರಾಮಯ್ಯ ಸರ್ಕಾರ.ದಲಿತರ ಎಸ್ಸಿಪಿ ಟಿಎಸ್ಪಿಯ 11 ಸಾವಿರ ಕೋಟಿ ಹಣ ಉಚಿತ ಭಾಗ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ.ಈ ಮೂಲಕ ದಲಿತರಿಗೆ ಅನ್ಯಾಯ ಮಾಡಿದ್ದಾರೆ.ರೈತರ ಯೋಜನೆ ಹಿಂಪಡೆದು ಅನ್ಯಾಯ ಆಗುತ್ತಿದೆ. ಇದೆಲ್ಲದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

ಆಪರೇಷನ್ ಕಮಲ ವಿಚಾರವಾಗಿ ಸಿಎಂ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ವಿಚಾರ ನಿಮಗೆ ಗೊತ್ತಿದೆ. ಬಿಜೆಪಿ ಯಾವ ಆಪರೇಷನ್ ಕೂಡ ಮಾಡ್ತಿಲ್ಲ. ಕಾಂಗ್ರೆಸ್​​ನವರು ಅವರಿಗವರೇ ಆಪರೇಷನ್ ಮಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರವರೇ ಷಡ್ಯಂತ್ರ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ ಅನ್ನೋದು ಗೊತ್ತಾಗ್ತಿದೆ. ಐದು ಡಿಸಿಎಂ ಬೇಕು ಅನ್ನೋದು ಅವರಲ್ಲೇ ಗೊಂದಲ‌ ಇದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಗಮನ ಬೇರೆಡೆ ಸೆಳೆಯಲು ಅವರ ಫೇಲ್ಯೂರ್ ಡೈವರ್ಟ್ ಮಾಡೋಕೆ ಮುಂದಾಗಿದ್ದಾರೆ. ಅವರೇ ಹೇಳಬೇಕು ಸರ್ಕಾರ ಹೇಗೆ ಬೀಳಿಸಲು ಆಗುತ್ತದೆ ಅಂತ. ನಾವು ಕೇವಲ 65 ಜನ ಮಾತ್ರ ಇದ್ದೇವೆ.ಆರು ತಿಂಗಳಲ್ಲಿ ಗಟ್ಟಿಯಾಗಿ ಒಂದೇ ಒಂದು ಅಭಿವೃದ್ಧಿ ಮಾಡಲಾಗಿಲ್ಲ. ಬೇಜವಾಬ್ದಾರಿಯುತವಾಗಿ ಹೇಳಿಕೆ ನೀಡುತ್ತಿದ್ದಾರೆ. ಕೀಳು ಮಟ್ಟದ ಸುಳ್ಳು ಹೇಳಿಕೆ ಕೊಡ್ತಿದ್ದಾರೆ. ಅವರ ಹಿರಿತನಕ್ಕೆ ಆಪರೇಷನ್ ಕಮಲ ಅಂತ ಹೇಳೋದು ಸರಿಯಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: ಬಿಜೆಪಿಯವರಿಂದ 40 ಶಾಸಕರ ಆಪರೇಷನ್​ ಸಾಧ್ಯವಿಲ್ಲ, ತಿರುಕನ ಕನಸು: ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್​

Last Updated : Oct 31, 2023, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.