ETV Bharat / state

ಬೆಂಗಳೂರಿಗೆ ಪ್ರತ್ಯೇಕ ಕಾನೂನು ಸಿಎಂ ಎದುರು ಅಶೋಕ್​ ಬೇಡಿಕೆ... ಈ ಡಿಮ್ಯಾಂಡ್​ ಯಾಕೆ?

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಇಂದು ನಮಗೆ ಮಾತುಕತೆಗೆ ಅವಕಾಶ ಸಿಕ್ಕಿದ್ದರಿಂದ ಸಂಸದರು, ಶಾಸಕರು ಮತ್ತು ಬೆಂಗಳೂರು ನಗರ ವ್ಯಾಪ್ತಿಯ ಮುಖಂಡರು ಭೇಟಿ ಕೊಟ್ಟು ಚರ್ಚಿಸಿದ್ದೇವೆ ಎಂದರು.

ಆರ್ ಅಶೋಕ್
author img

By

Published : Aug 14, 2019, 5:01 PM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ, ಅವ್ಯವಹಾರದ ಬಗ್ಗೆ ಚರ್ಚೆ ಮಾಡಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿಗಳಿಂದ ಕಾಲಾವಕಾಶ ಕೋರಿದ್ದೆ, ಈ ಸಂಬಂಧ ಇಂದು ಸಭೆ ನಡೆಸಿ ಮಾತುಕತೆ ನಡೆಸಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಇಂದು ನಮಗೆ ಮಾತುಕತೆಗೆ ಅವಕಾಶ ಸಿಕ್ಕಿದ್ದರಿಂದ ಸಂಸದರು, ಶಾಸಕರು ಮತ್ತು ಬೆಂಗಳೂರು ನಗರ ವ್ಯಾಪ್ತಿಯ ಮುಖಂಡರು ಭೇಟಿಕೊಟ್ಟು ಚರ್ಚಿಸಿದ್ದೇವೆ. ಅತ್ಯಂತ ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಮಳೆಯಿಂದಾಗುವ ಹಾನಿಯ ಕುರಿತು ಚರ್ಚಿಸಿದ್ದೇವೆ. ಇದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಅದಕ್ಕೆ ಸಿಎಂ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಆರ್ ಅಶೋಕ್

ನಗರಕ್ಕೆ ಹೊಸ ಕಾನೂನು: ಬೆಂಗಳೂರಿಗೆ ವಿಶೇಷವಾದ ಕಾನೂನಾಗಬೇಕು. ಸದ್ಯ ನಗರಸಭೆಗಳಿಗೆ ಇರುವ ಕಾನೂನು ಇಲ್ಲಿಯೂ ಜಾರಿಯಲ್ಲಿದೆ. ಆದರೆ ವಿಶ್ವದ ಗಮನ ಸೆಳೆಯುತ್ತಿರುವ ಬೆಂಗಳೂರಿಗೆ ಪ್ರತ್ಯೇಕ ಕಾನೂನು ಬೇಕು ಎಂಬ ಮನವಿಯನ್ನು ಮಾಡಿದ್ದೇವೆ. ಕೆಎಂಸಿ ಕಾಯ್ದೆ ಅಡಿ ಸದ್ಯ ನಾವು ನಡೆದುಕೊಂಡು ಸಾಗಿದ್ದೇವೆ. ಇದರಿಂದ ನಮಗೆ ಪ್ರತ್ಯೇಕ ಕಾನೂನು ರಚಿಸುವ ಅಗತ್ಯ ಇದೆ ಎಂದು ಸಿಎಂಗೆ ಮನವರಿಕೆ ಮಾಡಿದ್ದೇವೆ ಎಂದರು.

ವೈಟ್ ಟ್ಯಾಪಿಂಗ್ ಪ್ರಸ್ತಾಪ: ವೈಟ್ ಟ್ಯಾಪಿಂಗ್​ ಆರೋಪವನ್ನು ತಿಳಿಸಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೈಟ್ ಟ್ಯಾಪಿಂಗ್ ಬಳಸುವ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಬೆಂಗಳೂರು ನಗರದ ಒಳಗಿನ ವೈಟ್ ಟ್ಯಾಪಿಂಗ್ ಕಾಮಗಾರಿಗೆ ನಿಗದಿಪಡಿಸಲಾಗಿದೆ. ಅನಗತ್ಯ ಸ್ಥಳಗಳಲ್ಲಿ ವೈಟ್​ ಟ್ಯಾಪಿಂಗ್​​ ಮಾಡಲಾಗಿದೆ. ಇದಕ್ಕೆ ಒಂದು ಬೋಗಸ್ ಬಿಲ್ ಸಿದ್ಧಪಡಿಸಬೇಕು. ಕಳಪೆ ಕಾಮಗಾರಿಯನ್ನು ಗಮನಿಸಿದರೆ ಇದೊಂದು ದೊಡ್ಡ ಅವ್ಯವಹಾರದಂತೆ ಗೋಚರಿಸುತ್ತಿದೆ ಎಂದು ನಾವು ಮಾಹಿತಿ ನೀಡಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಸಮಗ್ರವಾದ ವರದಿ ಸಲ್ಲಿಸುವಂತೆ ಸಿಎಂ ಸೂಚಿಸಿದ್ದಾರೆ.

ಫೋನ್ ಟ್ಯಾಪಿಂಗ್: ನಾನೇ ಪ್ರಸ್ತಾಪ ಮಾಡಿರುವಂತಹ ವಿಚಾರ. ನಾನು ಕೂಡ ಗೃಹ ಸಚಿವನಾಗಿದ್ದೆ. ಫೋನ್ ಗಳನ್ನು ಹೇಗೆ ಟ್ಯಾಪ್ ಮಾಡುತ್ತಾರೆ ಎಂಬುದು ನನಗೆ ಅರಿವಿದೆ. ತಪ್ಪು ಕೆಲಸವನ್ನು ಮಾಡುವ ಕ್ರಿಮಿನಲ್​​​ ದೇಶ ದ್ರೋಹಿಗಳನ್ನು ಪತ್ತೆ ಹಚ್ಚುವುದಕ್ಕೆ ಇಂಥ ಉಪಯೋಗ ಮಾಡಬೇಕು ಎಂದು ಕಾನೂನು ಇದೆ. ಆದರೆ, ಇದನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿತ್ತು. ಇದಕ್ಕೆ ತಕ್ಕ ಪಾಠ ಕಲಿಸುವ ರೀತಿಯ ಕ್ರಮ ಜರುಗಬೇಕು. ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರವನ್ನು ಗಮನಹರಿಸುತ್ತೇನೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಬಜೆಟ್: ಬಿಬಿಎಂಪಿ ಬಜೆಟ್ ವಿಚಾರ ಮಾತನಾಡಿ, ಹಿಂದಿನ ಸರ್ಕಾರ 13 ಸಾವಿರ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆ ಮಾಡಿತ್ತು. ಈ ಬಜೆಟ್​ಗೆ ಹಣಕಾಸು ಇಲಾಖೆ ಒಪ್ಪಿಗೆ ಕೊಡಬೇಕಿತ್ತು. ಆದರೆ, ಅದನ್ನು ನೀಡಿಲ್ಲ. ಕೇವಲ 9 ಸಾವಿರ ಕೋಟಿ ರೂಪಾಯಿಗೆ ಮಾತ್ರ ಅನುಮೋದನೆ ನೀಡಿತ್ತು. ಆದರೆ, ಪಾಲಿಕೆಯಲ್ಲಿ 13 ಸಾವಿರ ಕೋಟಿ ರೂಪಾಯಿಗೆ ಅನುಮೋದನೆ ನೀಡುವಂತೆ ಪ್ರಸ್ತಾಪ ತರಲಾಗಿತ್ತು.

Intro:newsBody:ಬೆಂಗಳೂರಿನ ಅಭಿವೃದ್ಧಿ ಹಾಗೂ ಸಮಸ್ಯೆಯ ಕುರಿತು ಸಿಎಂ ಜೊತೆ ಚರ್ಚಿಸಿದ್ದೇವೆ: ಆರ್ ಅಶೋಕ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ, ಅವ್ಯವಹಾರದ ಬಗ್ಗೆ ಚರ್ಚೆ ಮಾಡಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿಗಳಿಂದ ಕಾಲಾವಕಾಶ ಕೋರಿದ್ದೆ. ಈ ಸಂಬಂಧ ಇಂದು ಸಭೆ ನಡೆಸಿ ಮಾತುಕತೆ ನಡೆಸಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ತಿಳಿಸಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಇಂದು ನಮಗೆ ಮಾತುಕತೆಗೆ ಅವಕಾಶ ಸಿಕ್ಕಿದ್ದರಿಂದ ಸಂಸದರು, ಶಾಸಕರು ಮತ್ತು ಬೆಂಗಳೂರು ನಗರ ವ್ಯಾಪ್ತಿಯ ಮುಖಂಡರು ಭೇಟಿಕೊಟ್ಟು ಚರ್ಚಿಸಿದ್ದೇವೆ. ಅತ್ಯಂತ ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಮಳೆ ಬಂದ ಸಂದರ್ಭ ಉಂಟಾಗುವ ನೆರೆ ಹಾಗೂ ಮುಳುಗಡೆ ಸಮಸ್ಯೆಯ ಕುರಿತು ವಿವರಿಸಿದ್ದೇವೆ. ಇದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇವೆ ಅದಕ್ಕೆ ಸಿಎಂ ಸ್ಪಂದಿಸಿದ್ದಾರೆ ಎಂದು ಹೇಳಿದರು.
ನಗರಕ್ಕೆ ಹೊಸ ಕಾನೂನು
ಬೆಂಗಳೂರಿಗೆ ವಿಶೇಷವಾದ ಕಾನೂನಾಗಬೇಕು. ಸದ್ಯ ನಗರಸಭೆಗಳಿಗೆ ಇರುವ ಕಾನೂನು ಇಲ್ಲಿಯೂ ಜಾರಿಯಲ್ಲಿದೆ. ಆದರೆ ವಿಶ್ವದ ಗಮನ ಸೆಳೆಯುತ್ತಿರುವ ಬೆಂಗಳೂರಿಗೆ ಪ್ರತ್ಯೇಕ ಕಾನೂನು ಬೇಕು ಎಂಬ ಮನವಿಯನ್ನು ಮಾಡಿದ್ದೇವೆ. ಕೆಎಂಸಿ ಕಾಯ್ದೆ ಅಡಿ ಸದ್ಯ ನಾವು ನಡೆದುಕೊಂಡು ಸಾಗಿದ್ದೇವೆ. ಇದರಿಂದ ನಮಗೆ ಪ್ರತ್ಯೇಕ ಕಾನೂನು ರಚಿಸುವ ಅಗತ್ಯ ಇದೆ ಎಂದು ಸಿಎಂಗೆ ಮನವರಿಕೆ ಮಾಡಿದ್ದೇವೆ ಎಂದರು.
ವೈಟ್ ಟ್ಯಾಪಿಂಗ್ ಪ್ರಸ್ತಾಪ
ವೈಟ್ ಟಾಪಿಂಗ್ ಅವ್ಯವಹಾರ ನಡೆದಿದೆ ಎಂಬ ಆರೋಪ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೈಟ್ ಟ್ಯಾಪಿಂಗ್ ಗೆ ಬಳಸುವ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಬೆಂಗಳೂರು ನಗರದ ಒಳಗಿನ ವೈಟ್ ಟ್ಯಾಪಿಂಗ್ ಕಾಮಗಾರಿಗೆ ನಿಗದಿಪಡಿಸಲಾಗಿದೆ. ಅನಗತ್ಯ ಸ್ಥಳಗಳಲ್ಲಿ ವೈಟ್ಟಾಪಿಂಗ್ ಮಾಡಲಾಗಿದೆ. ಇದಕ್ಕೆ ಒಂದು ಬೋಗಸ್ ಬಿಲ್ ಸಿದ್ಧಪಡಿಸುವುದು. ಕಳಪೆ ಕಾಮಗಾರಿ ಗುಣಮಟ್ಟ ಇಲ್ಲದಿರುವುದು ಗಮನಿಸಿದರೆ ಇದೊಂದು ದೊಡ್ಡ ವ್ಯವಹಾರದಂತೆ ಗೋಚರಿಸುತ್ತಿದೆ ಎಂದು ನಾವು ಮಾಹಿತಿ ನೀಡಿದ ಹಿನ್ನೆಲೆ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಸಮಗ್ರವಾದ ವರದಿ ಸಲ್ಲಿಸುವಂತೆ ಸಿಎಂ ಸೂಚಿಸಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ ಎಂದರು.
ಮಳೆಗಾಲದ ಸಂದರ್ಭದಲ್ಲಿ ಒಳಚರಂಡಿ ನೀರು ಸಂಗ್ರಹ ಹೆಚ್ಚಾಗಿ ಉಂಟಾಗುವ ಸಮಸ್ಯೆ ನಿವಾರಣೆ ಆಗಬೇಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಹಣದ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಈ ಹಿಂದೆ ಈ ವಿಚಾರವಾಗಿ ನಡೆದ ಕಾಮಗಾರಿಗಳಲ್ಲಿ ಪಾರದರ್ಶಕತೆ ಕರೆಯುವ ಕಾರ್ಯ ಆಗಿಲ್ಲ ಎಂಬುದನ್ನು ನಮ್ಮ ಶಾಸಕರು ಗಮನಕ್ಕೆ ತಂದಿದ್ದಾರೆ.
ಟೆಲಿಫೋನ್ ಕದ್ದಾಲಿಕೆ ನಾನೇ ಹೇಳಿದ್ದೆ
ಫೋನ್ ಟ್ಯಾಪಿಂಗ್ ನಾನೇ ಪ್ರಸ್ತಾಪ ಮಾಡಿರುವಂತಹ ವಿಚಾರ. ನಾನು ಕೂಡ ಗೃಹ ಸಚಿವನಾಗಿದ್ದೆ. ಫೋನ್ ಗಳನ್ನು ಹೇಗೆ ಟ್ಯಾಪ್ ಮಾಡುತ್ತಾರೆ ಎಂಬುದು ನನಗೆ ಅರಿವಿದೆ. ತಪ್ಪು ಕೆಲಸವನ್ನು ಮಾಡುವ ಕ್ರಿಮಿನಲ್ಗಳನ್ನು ದೇಶದ್ರೋಹಿಗಳನ್ನು ಪತ್ತೆ ಹಚ್ಚುವುದಕ್ಕೆ ಇಂಥ ಉಪಯೋಗ ಮಾಡಬೇಕು ಎಂದು ಕಾನೂನು ಇದೆ ಆದರೆ ಇದನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿತ್ತು. ರಾಜಕಾರಣಿಗಳನ್ನು ತಮ್ಮ ವಿರೋಧಿಗಳನ್ನು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡಂತೆ ಹಲವರ ಮಾಹಿತಿ ಕಲೆಹಾಕಲು ಫೋನ್ ಟ್ಯಾಪಿಂಗ್ ಮಾಡಿದ್ದು ಒಳ್ಳೆಯ ಕ್ರಮ ಅಲ್ಲ. ಇದೊಂದು ದೊಡ್ಡ ಮಟ್ಟದ ಅಪರಾಧ ಇದನ್ನು ಯಾರು ಮಾಡಬಾರದು ಇದಕ್ಕೆ ತಕ್ಕ ಪಾಠ ಕಲಿಸುವ ರೀತಿಯ ಕ್ರಮ ಜರುಗಬೇಕು. ಹಿಂದೆ ರಾಮಕೃಷ್ಣ ಹೆಗಡೆ ಅವರ ಅಧಿಕಾರ ಇದ್ದ ಸಂದರ್ಭ ಇಂಥದ್ದೊಂದು ಪ್ರಕರಣ ದೊಡ್ಡ ಸುದ್ದಿಯಾಗಿ ಸರ್ಕಾರವೇ ಬೀಳುವ ಪರಿಸ್ಥಿತಿ ಎದುರಾಗಿತ್ತು. ಹಿಂದಿನ ಸರ್ಕಾರ ಈಗಲೂ ಅಧಿಕಾರದಲ್ಲಿದ್ದರೆ ಇಂಥದ್ದೊಂದು ವಿಚಾರ ಪ್ರಕಟವಾದ ತಕ್ಷಣ ಸರ್ಕಾರ ಬಿದ್ದು ಹೋಗುತ್ತಿತ್ತು ಎಂದರು.
ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಈ ವಿಚಾರವನ್ನು ಗಮನಹರಿಸುತ್ತೇನೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ನಾವು ಇದನ್ನು ವಿಶ್ವಾಸದಿಂದ ಸ್ವೀಕರಿಸುತ್ತೇವೆ ಎಂದರು.
ಬಿಬಿಎಂಪಿ ಬಜೆಟ್
ಬಿಬಿಎಂಪಿ ಬಜೆಟ್ ವಿಚಾರ ಮಾತನಾಡಿ, ಹಿಂದಿನ ಸರ್ಕಾರ 13 ಸಾವಿರ ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆ ಮಾಡಿತ್ತು. ಈ ಬಜೆಟ್ಗೆ ಹಣಕಾಸು ಇಲಾಖೆ ಒಪ್ಪಿಗೆ ಕೊಡಬೇಕಿತ್ತು. ಆದರೆ ಅದನ್ನು ನೀಡಿಲ್ಲ. ಕೇವಲ 9 ಸಾವಿರ ಕೋಟಿ ರೂಪಾಯಿಗೆ ಮಾತ್ರ ಅನುಮೋದನೆ ನೀಡಿತ್ತು. ಆದರೆ ಪಾಲಿಕೆಯಲ್ಲಿ 13 ಸಾವಿರ ಕೋಟಿ ರೂಪಾಯಿಗೆ ಅನುಮೋದನೆ ನೀಡುವಂತೆ ಪ್ರಸ್ತಾಪ ತರಲಾಗಿತ್ತು. ಈ ರೀತಿ ಅಕ್ರಮವಾಗಿ ಬಜೆಟ್ ಅನುಮೋದನೆಗೆ ಪಡೆಯುವುದನ್ನು ನಾವು ತಡೆದಿದ್ದೇವೆ. ಸದ್ಯ ಸರ್ಕಾರ ನಡೆಯುತ್ತಿರುವ ಯಾವುದೇ ಕಾಮಗಾರಿಯನ್ನು ಬೆಂಗಳೂರಿನಲ್ಲಿ ನಿಲ್ಲಿಸಿಲ್ಲ. ಸರ್ಕಾರ ಬೀಳುವ ಆತಂಕ ಎದುರಾದ ಸಂದರ್ಭ ತರಾತುರಿಯಲ್ಲಿ ಅಕ್ರಮವಾಗಿ ನೀಡಿದ ಕೆಲ ಪರವಾನಗಿಯನ್ನು ಈಗಿನ ಸರ್ಕಾರ ರದ್ದುಪಡಿಸಿದೆ. ಕಾಮಗಾರಿ ನಡೆಯುತ್ತಿರುವ ಯಾವ ಕೆಲಸವು ನಿಂತಿಲ್ಲ. ನೈಸರ್ಗಿಕ ನ್ಯಾಯದ ಪ್ರಕಾರ ನಡೆಯುವ ಕಾಮಗಾರಿಗೆ ನಮ್ಮ ವಿರೋಧ ಇಲ್ಲ. ಸಾಕಷ್ಟು ಅಕ್ರಮ ಕೆಲಸಗಳಿಗೆ ಪರವಾನಿಗೆ ನೀಡಲಾಗಿದ್ದು ಅದನ್ನು ತಡೆಹಿಡಿದಿದ್ದಾರೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.