ETV Bharat / state

'WE ARE WITH YOU YADIYURAPPA' : ಐ ಯಾಮ್​​ ವಿಥ್ ಯಡಿಯೂರಪ್ಪ ಎಂದ ಸಚಿವ ಆರ್. ಅಶೋಕ್ - ಐ ಯಾಮ್ ವಿತ್ ಯಡಿಯೂರಪ್ಪ

ಸಂಚಾರಿ ವಿಜಯ್ ಪರಿಸರ ಕಾಳಜಿಯುಳ್ಳ ನಟ, 20 ವರ್ಷಗಳ ನಂತರ ಕನ್ನಡ ಚಿತ್ರೋದ್ಯಮಕ್ಕೆ ರಾಷ್ಟ್ರ ಪ್ರಶಸ್ತಿ ತಂದವರು. ಅವರು ಸತ್ತ ಮೇಲು ಮಾನವೀಯತೆ ಮೆರೆದಿದ್ದಾರೆ, ಅವರ ಅಂಗಾಂಗಳನ್ನ ದಾನ ಮಾಡುವ ಮೂಲಕ 5 ಜನರಿಗೆ ಜೀವ ನೀಡಿದ್ದಾರೆ, ದೇವರ ಸಮಾನರಾದ ಸಂಚಾರಿ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಕಂದಾಯ ಸಚಿವ ಆರ್​ ಅಶೋಕ್ ಹೇಳಿದರು.

ashok
ashok
author img

By

Published : Jun 15, 2021, 8:43 PM IST

Updated : Jun 15, 2021, 9:54 PM IST

ದೊಡ್ಡಬಳ್ಳಾಪುರ : ಕಂದಾಯ ಸಚಿವ ಆರ್ ಅಶೋಕ್ ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನೋ ಚೇಂಜ್, ವಿ ಆರ್ ವಿತ್ ಯಡಿಯೂರಪ್ಪ, ಐ ಯಾಮ್ ವಿತ್ ಯಡಿಯೂರಪ್ಪ ಎಂದರು. ನಾಯಕತ್ವ ಬದಲಾವಣೆ ಹಿನ್ನೆಲೆ ಮಾತನಾಡಿದ ಅಶೋಕ್, ನಾಯಕತ್ವ ಬದಲಾವಣೆಯಾಗುವುದಿಲ್ಲ. ಎಲ್ಲ ಸಹಜವಾಗಿಯೇ ಇದೆ, ನಾಯಕತ್ವ ಬದಲಾವಣೆ ಬಗ್ಗೆ ಎಲ್ಲಾ ಪಕ್ಷದಲ್ಲೂ ಗೊಂದಲ ಇದ್ದೇ ಇರುತ್ತೆ. ಗೊಂದಲ ಇದ್ದಾಗಲೇ ರಾಜಕೀಯ ಅನಿಸೋದು. ಇದೆಲ್ಲಾ ಪಕ್ಷದ ಆಂತರಿಕ ವಿಚಾರ. ಅದನ್ನು ನಾಲ್ಕು ಗೋಡೆಯ ಮಧ್ಯೆ ಬಗೆಹರಿಸಿಕೊಳ್ಳುವುದಾಗಿ ​ಹೇಳಿದರು.

ಸಂಚಾರಿ ವಿಜಯ್​ ನಿಧನಕ್ಕೆ ಸಂತಾಪ

ದೊಡ್ಡಬಳ್ಳಾಪುರ ನಗರದ ಡಾ.ರಾಜಕುಮಾರ್ ಕಲಾ ಮಂದಿರದಲ್ಲಿ ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ ಕೋವಿಡ್ ವಾರಿಯರ್​​ಗಳಿಗೆ ತರಕಾರಿ ಕಿಟ್ ಮತ್ತು ಮೆಡಿಕಲ್​​ ಕಿಟ್ ವಿತರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್, ವಿನಯ್ ಗುರೂಜಿ ಭಾಗವಹಿಸಿದರು. ನಂತರ ಮಾತನಾಡಿದ ಆರ್ ಅಶೋಕ್, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

ಸಚಿವ ಆರ್. ಅಶೋಕ್ ಹೇಳಿಕೆ

ಸಂಚಾರಿ ವಿಜಯ್ ಪರಿಸರ ಕಾಳಜಿಯುಳ್ಳ ನಟ, 20 ವರ್ಷಗಳ ನಂತರ ಕನ್ನಡ ಚಿತ್ರೋದ್ಯಮಕ್ಕೆ ರಾಷ್ಟ್ರ ಪ್ರಶಸ್ತಿ ತಂದವರು. ಅವರು ಸತ್ತ ಮೇಲು ಮಾನವೀಯತೆ ಮೆರೆದಿದ್ದಾರೆ, ಅವರ ಅಂಗಾಂಗಳನ್ನ ದಾನ ಮಾಡುವ ಮೂಲಕ 5 ಜನರಿಗೆ ಜೀವ ನೀಡಿದ್ದಾರೆ, ದೇವರ ಸಮಾನರಾದ ಸಂಚಾರಿ ವಿಜಯ್ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ನಾಳೆ ಬೆಂಗಳೂರಿಗೆ ಅರುಣ್​ ಸಿಂಗ್​ ಬರ್ತಾರೆ!

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಾಳೆ ಬೆಂಗಳೂರಿಗೆ ಆಗಮಿಸಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು​, ಶಾಸಕರ ಸಮಸ್ಯೆ, ಮುಖ್ಯಮಂತ್ರಿಗಳ ಮೇಲೆ ಅವರಿಗಿರುವ ಕೋಪ ಹಿನ್ನೆಲೆ ಅವರನ್ನು ಕರೆದು ನಾಳೆ ಮಾತನಾಡುತ್ತೇವೆ. ಈಗಾಗಲೇ ಬಿಜೆಪಿ ವರ್ಚಸ್ಸನ್ನು ಜಾಸ್ತಿ ಮಾಡಲು ಒಂದು ಸಮಿತಿ ರಚನೆಯಾಗಿದೆ. ಆ ಸಮಿತಿಯಲ್ಲಿ ನಾನೂ ಇದ್ದೇನೆ. ನಾನು ಕೂಡ ಭೇಟಿ ಮಾಡಿ ಬಿಜೆಪಿ ವರ್ಚಸ್ಸು ಹೆಚ್ಚು ಮಾಡುವ ಕೆಲಸ ಮಾಡುತ್ತೇನೆ, ಈಗ ರಾಜ್ಯದಲ್ಲಿರುವ ಸಮಸ್ಯೆಯನ್ನು ಅಲ್ಲಿಯೇ ಬಗೆಹರಿಸಲಾಗುವುದು.

ಐ ಆಮ್​ ವಿಥ್​ ಯಡಿಯೂರಪ್ಪ!

ಜೂನ್ 18ರಂದು ಕೋರ್ ಕಮಿಟಿ ಸಭೆ ಇದೆ. ಅಷ್ಟರಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ಮಂಗಳಕರವಾದ ಅಂತ್ಯ ಆಗುತ್ತದೆ ಎಂದ್ರು. ಮುಖ್ಯಮಂತ್ರಿಗಳು ಜೆಡಿಎಸ್ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ನಮಗೆ ಜೆಡಿಎಸ್, ಕಾಂಗ್ರೆಸ್ ಯಾರ ಅವಶ್ಯಕತೆ ಇಲ್ಲ. ನಮಗೆ ಪೂರ್ಣ ಬಹುಮತ ಇದೆ. ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ನೋ ಚೇಂಜ್, ವಿ ಆರ್ ವಿಥ್ ಯಡಿಯೂರಪ್ಪ, ಐ ಯಾಮ್ ವಿಥ್​ ಯಡಿಯೂರಪ್ಪ ಎಂದರು .

Last Updated : Jun 15, 2021, 9:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.