ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಈಗಾಗಲೇ ಬಹಳ ವಿಳಂಬವಾಗಿದೆ ನಾವು ಅಧಿವೇಶನಕ್ಕೂ ಮೊದಲೇ ಸಂಪುಟಕ್ಕೆ ಸೇರುವ ನಿರೀಕ್ಷೆಯಲ್ಲಿದ್ದು, ನಾಳೆ ಮಧ್ಯಾಹ್ನ ಸಂಪುಟ ವಿಸ್ತರಣೆ ಮಾಡಬಹುದು ಎನ್ನುವ ವಿಶ್ವಾಸದಲ್ಲಿರುವುದಾಗಿ ಎಂಎಲ್ಸಿ ಆರ್.ಶಂಕರ್ ಹೇಳಿದ್ದಾರೆ.
ಕುಮಾರ ಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಬೆಳಗಾವಿಯಿಂದ ಸಿಹಿ ಸುದ್ದಿ ತರುವ ನಿರೀಕ್ಷೆ ಹೊಂದಿದ್ದೇವೆ. ಅಧಿವೇಶನದ ಒಳಗೆ ಸಚಿವರಾಗುವ ನಿರೀಕ್ಷೆ ನಮ್ಮದಾಗಿದೆ. ಸಿಎಂ ಮಾತಿನ ಮೇಲೆ ನಂಬಿಕೆ ಇಟ್ಟು ನಾವೆಲ್ಲ ಕಾಯುತ್ತಿದ್ದೇವೆ ಎಂದರು.
ಇನ್ನು ನಾಳೆ ಮಧ್ಯಾಹ್ನವೇ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿರ್ಧಾರ ಮಾಡಬಹುದು ಎನ್ನುವ ನಂಬಿಕೆಯಲ್ಲಿದ್ದೇವೆ ಎಂದರು.