ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಇಂದೂ ಸಭೆ ನಡೆಸಿ ಅತೃಪ್ತಿ ಶಮನದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನನ್ನ ಸಿಎಂ ಮಾಡುವ ವಿಚಾರ ಚರ್ಚೆ ಆಗಿಲ್ಲ. ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
ಸದ್ಯಕ್ಕೆ ಯಾವುದೇ ಗೊಂದಲ ಬೇಡ ಸರ್ಕಾರ ನಡೆಯುತ್ತಿದೆ, ಬಜೆಟ್ ಸೆಷನ್ಸ್ ನಡೆಯುತ್ತೆ. ಬಜೆಟ್ ಸೆಷನ್ಸ್ ನಡೆಯುತ್ತೆ ಅಂದ್ರೆ ಸರ್ಕಾರ ಸುಭದ್ರವಾಗಿದೆ ಎಂದು ಖರ್ಗೆ ಹೇಳಿದ್ದಾರೆ.