ETV Bharat / state

ನಾವು ಕೂಡ ಹಿಂದುಗಳೇ, ಬಿಜೆಪಿಗರಷ್ಟೇ ಹಿಂದುಗಳಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್ - ಸಂಸದ ಪ್ರತಾಪ್ ಸಿಂಹ

ಇಂಡಿಯಾ ಮೈತ್ರಿಕೂಟಗಳು ರಾಮಮಂದಿರ ಉದ್ಘಾಟನೆ ಹೋಗುವ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್​ ನಿರ್ಧಾರ ಮಾಡುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್​ ಹೇಳಿದ್ದಾರೆ.

we-are-also-hindus-not-just-bjps-hindus-home-minister-dr-g-parameshwar
ನಾವು ಕೂಡ ಹಿಂದುಗಳೇ, ಬಿಜೆಪಿಗರಷ್ಟೇ ಹಿಂದುಗಳಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್
author img

By ETV Bharat Karnataka Team

Published : Jan 1, 2024, 6:42 PM IST

ನಾವು ಕೂಡ ಹಿಂದುಗಳೇ, ಬಿಜೆಪಿಗರಷ್ಟೇ ಹಿಂದುಗಳಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್

ಬೆಂಗಳೂರು : ನಾವು ಕೂಡ ಹಿಂದುಗಳೇ. ಬಿಜೆಪಿ ಅವರಷ್ಟೇ ಹಿಂದುಗಳಲ್ಲ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹೋಗಬೇಕೋ ಬೇಡವೋ ಎಂಬುದನ್ನು ನಮ್ಮ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದರು.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮ ರಾಜ್ಯ ಅನ್ನೋದು ಎಲ್ಲರಿಗೂ ಇದೆ. ಬಿಜೆಪಿಗಷ್ಟೇ ಅಲ್ಲ. ಇಂಡಿಯಾ ಮೈತ್ರಿಕೂಟಗಳು ರಾಮ ಮಂದಿರ ಉದ್ಘಾಟನೆಗೆ ಹೋಗುವ ಬಗ್ಗೆ ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.

ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, ''ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಮರ ಕಡಿದಿದ್ದಾರೆ, ಹಾಗಾಗಿ ಅವರ ವಿರುದ್ಧ ಕ್ರಮ ಆಗಿದೆ. ಸಿಎಂ ಮಾಡಿಸಿದ್ದಾರೆ ಅನ್ನೋದು ಸರಿಯಲ್ಲ. ಯಾರೇ ಆದರೂ ಕಾನೂನು ಕ್ರಮ ಆಗಲಿದೆ. ಸಂಸದ ಪ್ರತಾಪ್ ಸಿಂಹ ಅವರ ತಮ್ಮ ಆದರೂ ಸರಿ ಬೇರೆಯವರು ಆದರೂ ಸರಿ. ಈ ನೆಲದ ಕಾನೂನಿಗೆ ಬೆಲೆ ಕೊಡಬೇಕಾಗುತ್ತದೆ. ಇಲ್ಲಿ ಒತ್ತಡ ಹಾಕುವುದು ಏನಿದೆ'' ಎಂದು ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್​ ಕುಟುಂಬಕ್ಕೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದು ಇಲಾಖಾವಾರು ಕೆಲಸವಾಗಿದೆ. ಸಿಬಿಐ ಅವರು ಅವರ ಕೆಲಸ ಮಾಡ್ತಾ ಇದ್ದಾರೆ. ನಾವು ನಮ್ಮ ಕೆಲಸ ಮಾಡ್ತೀವಿ. ಅವರಿಗೆ ಯಾಕೆ ನೋಟಿಸ್ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.‌ ದೆಹಲಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್​ ಹೋಗುವ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಹೈಕಮಾಂಡ್ ಸಿಎಂ, ಡಿಸಿಎಂ ಅವರನ್ನು ಕರೆದಿದ್ದಾರೆ‌. ಹಾಗಾಗಿ ಅವರು ದೆಹಲಿಗೆ ಹೋಗ್ತಾ ಇದ್ದಾರೆ. ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಲು ಹೋಗ್ತಿದ್ದಾರೆ. ನಾವು ನಮ್ಮ ಅಭಿಪ್ರಾಯವನ್ನು ಇವರಿಗೆ ಹೇಳಿದ್ದೇವೆ. ಹಾಗಾಗಿ ನಮಗೆ ಕರೆಯುವ ಅವಶ್ಯಕತೆ ಇಲ್ಲ ಎಂದರು.

ಹೊಸ ವರ್ಷಾಚರಣೆ ಶಾಂತಿಯುತವಾಗಿ ನಡೆದಿದೆ : ನಗರದಲ್ಲಿ ನಿನ್ನೆ ನಡೆದ ಹೊಸ ವರ್ಷದ ಸಂಭ್ರಮಾಚರಣೆ ಶಾಂತಿಯುತವಾಗಿ ಆಗಿದೆ.‌ ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂತ ಅಂದುಕೊಂಡಿದ್ದೆವು. ಅದರಂತೆ ಪೊಲೀಸ್​ ಸಿಬ್ಬಂದಿ, ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸುತ್ತೇನೆ. ಇದಕ್ಕೆ ಇಡೀ ರಾಜ್ಯದ ಜನ ಸಹಕರಿಸಿದ್ದಾರೆ. ಅವರಿಗೂ ಧನ್ಯವಾದವನ್ನು ಅರ್ಪಿಸುತ್ತೇನೆ. ಕೆಲವೊಂದು ಕಡೆ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಎಲ್ಲಾ ಕಡೆ ಹೊಸ ವರ್ಷಾಚರಣೆ ಶಾಂತಿಯುತವಾಗಿ ನಡೆದಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಸಿಬಿಐ ನನ್ನ ಕುಟುಂಬದವರಿಗೆಲ್ಲ ನೋಟಿಸ್ ನೀಡಿದೆ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ: ಡಿಕೆಶಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.