ETV Bharat / state

ಮೋದಿ ಬಂದು ಇಲ್ಲಿ ನೀರು ಬಿಡ್ತಾರಾ... ಬೆಂಗಳೂರಲ್ಲಿ ಖಾಲಿ ಕೊಡ ಹಿಡಿದು ಜನರ ಆಕ್ರೋಶ

ಸಿಲಿಕಾನ್​ ಸಿಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರು ಕೊಡದಿದ್ದರೆ ಈ ಬಾರಿ ಮತ ನೀಡಲ್ಲವೆಂದು ಜನಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ
author img

By

Published : Apr 10, 2019, 8:29 AM IST

ಬೆಂಗಳೂರು: ಉರಿಯುವ ಬೇಸಿಗೆ ನಡುವೆ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣವಾಗಿದೆ. ಜನರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜಾಜಿನಗರದ ಲಕ್ಷ್ಮೀನಾರಾಯಣಪುರದ 13 ನೇ ಅಡ್ಡರಸ್ತೆಯ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಬೇಸಿಗೆ ಕಾಲ ಶಾಪವಾಗಿ ಪರಿಣಮಿಸಿದೆ. ರಸ್ತೆಯಲ್ಲಿರುವ ಬೋರ್​ವೆಲ್ ಕೆಟ್ಟಿದ್ದು, ಕಾವೇರಿ ನೀರು ಕೂಡಾ ಸರಿಯಾದ ಸಿಗದೆ ಜನ ಪರದಾಡುತ್ತಿದ್ದಾರೆ. ಸ್ಥಳೀಯ ಕಾರ್ಪೋರೇಟರ್ ಕುಮಾರಿ ಪಳನಿಕಾಂತ್ ಆಗಲಿ, ಶಾಸಕರಾದ ಸುರೇಶ್ ಕುಮಾರ್, ಸಂಸದ ಪಿಸಿ ಮೋಹನ್ ಆಗಲಿ ನಮ್ಮ ಸಮಸ್ಯೆ ಕೇಳೋದಕ್ಕೆ ಬರುತ್ತಿಲ್ಲ. ಹಾಗಾಗಿ ವೋಟ್ ಕೇಳಲು ಬರೋದು ಬೇಡ. ನೀರು ಕೊಡದಿದ್ರೆ ಮತ ಹಾಕೊಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ

ಕಳೆದ ಎರಡು ವರ್ಷದಿಂದ 13, 14 ನೇ ಅಡ್ಡರಸ್ತೆಯಲ್ಲಿರುವ ಜನರಿಗೆ ನೀರನ್ನು ಕೇವಲ ಎರಡು ಗಂಟೆ ಕೊಡುತ್ತಾರೆ. ಪಕ್ಕದ ರಸ್ತೆಗಳಿಗೆ ದಿನವಿಡಿ ನೀರು ಪೂರೈಕೆ ಮಾಡುತ್ತಾರೆ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸುತ್ತಿದ್ದು, ಇತ್ತ ಬೋರ್​ವೆಲ್ ರಿಪೇರಿಯೂ ಮಾಡುತ್ತಿಲ್ಲ. ಬಹುದೂರ ಹೋಗಿ ನೀರು ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರತಿವರ್ಷ ಬೇಸಿಗೆಯಲ್ಲಿ ಈ ರೀತಿಯ ಸಮಸ್ಯೆ ಉಂಟಾಗುತ್ತಿದ್ದು, ಯಾರು ಕೂಡ ಇತ್ತ ಸುಳಿಯುತ್ತಿಲ್ಲ. ಈ ಕುರಿತು ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದರೆ ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡುತ್ತಾರೆ. ಇನ್ನು ಸ್ಥಳೀಯ ಕಾರ್ಪೋರೇಟರ್ ಪತಿ ಪಳನಿಕಾಂತ್ ಅವರನ್ನ ಪ್ರಶ್ನಿಸಿದ್ರೆ ಸರ್ವಿಸ್ ವೇಳೆ ಆ ರಸ್ತೆಗೆ ಬರುವ ನೀರು ನಿಂತು ಹೋಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತೆ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.

Intro:ಕುಡಿಯುವ ನೀರಿಗಾಗಿ ರಾಜಧಾನಿ ಜನರ ಪರದಾಟ- ಖಾಲಿಕೊಡ ಹಿಡಿದು ಹಿರಿಜೀವದ ಮೂಕವೇದನೆ

ಬೆಂಗಳೂರು- ಉರಿಯುವ ಬೇಸಿಗೆ ನಡುವೆ, ಜನ ಒಂದು ಕೊಡ ನೀರಿಗಾಗಿ ಪರದಾಟ ಪಡುವ ಸ್ಥಿತಿ ರಾಜಧಾನಿ ಬೆಂಗಳೂರಲ್ಲಿ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಮಾತು ಬಾರದ ಹಿರಿಜೀವ ಲಕ್ಷ್ಮಮ್ಮ ನೀರು ಕೊಡಿ, ಕುಡಿಯಲು ನೀರಿಲ್ಲ ಎಂದು ಮೂಕವೇದನೆ ವ್ಯಕ್ತಪಡಿಸಿ ಅಸಹಾಯಕತೆ ವ್ಯಕ್ತಪಡಿಸಿದರು.

ರಾಜಾಜಿನಗರದ ಲಕ್ಷ್ಮೀನಾರಾಯಣಪುರದ 13 ನೇ ಅಡ್ಡರಸ್ತೆಯ ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ಬೇಸಿಗೆಕಾಲ ಶಾಪವಾಗಿ ಪರಿಣಮಿಸಿದೆ. ತಮ್ಮ ರಸ್ತೆಯಲ್ಲಿ ಇದ್ದ ಬೋರ್ ವೆಲ್ ಕೆಟ್ಟಿದ್ದು, ಕಾವೇರಿ ನೀರೂ ಕೂಡಾ ಸರಿಯಾದ ಪ್ರಮಾಣದಲ್ಲಿ ಸಿಗದೆ, ಜನ ಪರದಾಡುವಂತಾಗಿದೆ.

ಸ್ಥಳೀಯ ಕಾರ್ಪೋರೇಟರ್ ಕುಮಾರಿ ಪಳನಿಕಾಂತ್ ಆಗಲೀ, ಶಾಸಕರಾದ ಸುರೇಶ್ ಕುಮಾರ್ ಆಗ್ಲಿ ಅಥವಾ ಸಂಸದ ಪಿಸಿ ಮೋಹನ್ ಆಗ್ಲಿ ನಮ್ಮ ಸಮಸ್ಯೆ ಕೇಳೋದಕ್ಕೆ ಬರುತ್ತಿಲ್ಲ. ಹಾಗಾಗಿ ಓಟ್ ಕೇಳಲೂ ಬರೋದು ಬೇಡ. ನೀರು ಕೊಡದಿದ್ರೆ ಓಟ್ ಕೊಡೋದಿಲ್ಲ ಎಂದು ಜನ ಆಕ್ರೋಶಗೊಂಡಿದ್ದಾರೆ.
ಅಲ್ಲದೆ 13, 14 ನೇ ಅಡ್ಡರಸ್ತೆಗೆ ಎರಡು ವರ್ಷದಿಂದ ಕಾವೇರಿ ನೀರು ಪೂರೈಕೆ ಕೇವಲ ಎರಡು ಗಂಟೆ ಕೊಡುತ್ತಾರೆ, ಆದ್ರೆ ಬೇರೆ ಪಕ್ಕದ ರಸ್ತೆಗಳಿಗೆ ದಿನವಿಡೀ ನೀರು ಪೂರೈಕೆ ಮಾಡ್ತಾರೆ ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದರು. ಅಲ್ಲದೆ ಬೋರ್ ವೆಲ್ ರಿಪೇರಿಯೂ ಮಾಡದೆ ಇರೋದ್ರಿಂದ ಬಹುದೂರ ಹೋಗಿ ಮಹಿಳೆಯರು, ಮಕ್ಕಳು ಕೊಡದಲ್ಲಿ ನೀರು ತರಬೇಕಾದ ಪರಿಸ್ಥಿತಿ ಬಂದಿದೆ. ಪ್ರತೀವರ್ಷ ಬೇಸಿಗೆಯಲ್ಲಿ ಇದೇ ಸಮಸ್ಯೆಯಾಗಿದೆ. ಓಟ್ ಕೇಳೋದಕ್ಕೆ ಮಾತ್ರ ಬರ್ತಾರೆ , ನೀರು ಕೊಡೋದಿಲ್ಲ. ನಮಗೆ ಮನೆ, ಬಟ್ಟೆ, ಒಡವೆ, ಊಟ ಬೇಡ ಕೇವಲ ನೀರು ಕೊಡಿ ಎಂದು ಅಂಗಲಾಚಿದರು.
ಈ ಬಗ್ಗೆ ಜಲಮಂಡಳಿ ಅಧಿಕಾರಿಗಳ ಗಮನಕ್ಕೆ ತಂದ್ರೆ ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಕೇವಲ ಭರವಸೆ ನೀಡ್ತಾರೆ. ಇನ್ನು ಸ್ಥಳೀಯ ಕಾರ್ಪೋರೇಟರ್ ಪತಿ ಪಳನಿಕಾಂತ್ ಅವರನ್ನ ಪ್ರಶ್ನಿಸಿದ್ರೆ ಸರ್ವಿಸ್ ವೇಳೆ, ಆ ರಸ್ತೆಗೆ ಬರುವ ನೀರು ನಿಂತು ಹೋಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತೆ ಅಂತ ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ.
ಹೀಗಾಗಿ ನೀರಿಲ್ಲದೆ ಜನ ಪರದಾಡುತ್ತಿದ್ದಾರೆ.
ಸೌಮ್ಯಶ್ರೀ

Body:..

Conclusion:...

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.