ETV Bharat / state

ವಿದೇಶಿಗರಿಗೆ ಮನೆ ಬಾಡಿಗೆ ಕೊಡುವ ಮುನ್ನ ಹುಷಾರಾಗಿರಿ..: ಮಾಲೀಕರಿಗೂ ಎದುರಾಗಲಿದೆ ಬಂಧನ ಭೀತಿ

author img

By

Published : Jul 9, 2021, 3:58 PM IST

ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಬಾಂಗ್ಲಾ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮನೆ ಮಾಲೀಕರು‌ ಬಾಡಿಗೆದಾರರ ಪೂರ್ವಾಪರ ಪರಿಶೀಲನೆ ನಡೆಸದೆ ಮನೆ ಬಾಡಿಗೆ ನೀಡಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿದೇಶಿಗರಿಗೆ ಬಾಡಿಗೆ ಕೊಡುವ ಮನೆ ಮಾಲೀಕರನ್ನ ಕರೆಯಿಸಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

warning-to-house-owners-those-who-give-rent-for-foreigners
ಮಾಲೀಕರಿಗೂ ಎದುರಾಗಲಿದೆ ಬಂಧನ ಭೀತಿ

ಬೆಂಗಳೂರು: ವಿದ್ಯಾಭ್ಯಾಸ, ಉದ್ಯೋಗದ ಸೋಗಿನಲ್ಲಿ ವೀಸಾ ಪಡೆದುಕೊಂಡು ಬೆಂಗಳೂರಿಗೆ ಆಗಮಿಸುವ ವಿದೇಶಿಯರು ವೀಸಾ ಅವಧಿ ಮುಗಿದರೂ ಇಲ್ಲಿಯೇ ನೆಲೆಸುತ್ತಿರುವುದು ಪತ್ತೆಯಾಗುತ್ತಿದೆ. ಇದಲ್ಲದೆ ಅನೇಕ ಅಪರಾಧ ಕೃತ್ಯಗಳಲ್ಲೂ ಭಾಗಿಯಾಗಿರುವುದು ದೃಢವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಹ ವಿದೇಶಿ ಪ್ರಜೆಗಳು ನೆಲೆಸಿರುವ ಬಾಡಿಗೆ ಮನೆ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದೆ.

ಹಣದಾಸೆಗಾಗಿ ವಿದೇಶಿಯರಿಗೆ ಬಾಡಿಗೆ ನೀಡುವ ಮೂಲಕ ಕಾನೂನನ್ನು ಗಾಳಿಗೆ ತೂರಿ ಕ್ರಿಮಿನಲ್​ಗಳಿಗೆ ಪರೋಕ್ಷವಾಗಿ ಸಾಥ್ ನೀಡಿರುವ ಮನೆ ಮಾಲೀಕರಿಗೆ ಬಂಧನ ಭೀತಿ ಎದುರಾಗಿದೆ. ವಿದೇಶಿ ಬಾಡಿಗೆದಾರರ ಬಗ್ಗೆ ಸೂಕ್ತ ದಾಖಲೆ ನೀಡದ ಮನೆ ಮಾಲೀಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಚುರುಕುಗೊಳಿಸಿದ್ದು, ನಗರ ಪೂರ್ವ ವಿಭಾಗದಲ್ಲಿ 15 ಮಂದಿ ಮನೆ ಮಾಲೀಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ‌.

ವಿದೇಶಿಗರಿದ್ದ ಮನೆ ಸೀಜ್​​​​

ಈ ಪೈಕಿ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ವಿದೇಶಿಯರಿಗೆ ನೀಡಿದ್ದ ಒಂದು ಮನೆಯನ್ನ ಸೀಜ್ ಮಾಡಲಾಗಿದೆ. ಹೆಣ್ಣೂರು, ಬಾಣಸವಾಡಿ, ರಾಮಮೂರ್ತಿ‌ನಗರ, ಸಂಪಿಗೆ ಹಳ್ಳಿ, ಕೊತ್ತನೂರು, ಗೋವಿಂದಪುರ ಠಾಣಾ ವ್ಯಾಪ್ತಿಗಳಲ್ಲಿ ನೈಜೀರಿಯಾ ಸೇರಿದಂತೆ ಅಫ್ರಿಕಾ ಪ್ರಜೆಗಳು ನೆಲೆಸಿದ್ದಾರೆ. ಅಕ್ರಮವಾಗಿ ನೆಲೆಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಪ್ರಜೆಗಳಿಗೆ ಕಾನೂನುಬಾಹಿರವಾಗಿ ಆಶ್ರಯ ಕೊಟ್ಟವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದ್ದಾರೆ.

ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಬಾಂಗ್ಲಾ ಯುವತಿ ಮೇಲೆ ನಡೆದ ದೌರ್ಜನ್ಯ ಪ್ರಕರಣ ಸಂಬಂಧ ಮನೆ ಮಾಲೀಕರು‌ ಬಾಡಿಗೆದಾರರ ಕುರಿತು ಪೂರ್ವಾಪರ ಪರಿಶೀಲನೆ ನಡೆಸದೆ ಬಾಡಿಗೆಗೆ ನೀಡಿದ್ದರು. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿದೇಶಿಗರಿಗೆ ಬಾಡಿಗೆ ಕೊಡುವ ಮನೆ ಮಾಲೀಕರನ್ನ ಕರೆಯಿಸಿ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

ಮನೆ ಬಾಡಿಗೆಗೆ ನೀಡುವ ಮುನ್ನ ಈ ಸಂಗತಿಗಳು ನಿಮಗೆ ತಿಳಿದಿರಲಿ..

ವಿದೇಶಿಗರಿಗೆ ಬಾಡಿಗೆ ನೀಡಿದ್ದರೆ ಕಡ್ಡಾಯವಾಗಿ ಈ ನಿಯಮ ಪಾಲಿಸಬೇಕು. ಸಮೀಪದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಗುವ ಫಾರಂ 'ಸಿ'ನಲ್ಲಿ ದಾಖಲೆ ಉಲ್ಲೇಖಿಸಬೇಕು. ಯಾರಿಂದ ಯಾರಿಗೆ ಮನೆ ಬಾಡಿಗೆ ನೀಡಲಾಗಿದೆ ಎಂಬ ಬಗ್ಗೆ ಉಲ್ಲೇಖಿಸಬೇಕು.‌ ಜೊತೆಗೆ ಸಿ ಫಾರಂ ಮಾಹಿತಿ ಸ್ಥಳೀಯ ಪೊಲೀಸರಿಗೂ ನೀಡಬೇಕು.

ವೀಸಾ, ಪಾಸ್ ಪೋರ್ಟ್ ಸೇರಿದಂತೆ ವಿದೇಶಿಗರ ಸೂಕ್ತ ದಾಖಲೆಗಳ ಮಾಹಿತಿ ಪಡೆಯಬೇಕು. ಒಂದು ವೇಳೆ ವಿದೇಶಿ ಬಾಡಿಗೆದಾರರನ ವೀಸಾ ಅವಧಿ ಮುಗಿದು, ಆತ ಕ್ರಿಮಿನಲ್ ಆರೋಪದಲ್ಲಿ ಸೇರಿದ್ದರೆ ಮನೆ ಮಾಲೀಕರಿಗೂ ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ: ಹೈಕೋರ್ಟ್‌ ತಳಮಹಡಿ ಕಚೇರಿಗಳ ಸ್ಥಳಾಂತರ: 2 ವಾರದಲ್ಲಿ ಸರ್ಕಾರದ ನಿಲುವು ತಿಳಿಸಲು ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.