ETV Bharat / state

ಒಕ್ಕಲಿಗ ಜನಾಂಗ ಉದ್ಯಮಶೀಲ ಸಂಸ್ಕೃತಿ ರೂಪಿಸಿಕೊಳ್ಳಬೇಕು: ಅಶ್ವತ್ಥ್​ ನಾರಾಯಣ್​ - ಒಕ್ಕಲಿಗ ಜನಾಂಗ ಉದ್ಯಮಶೀಲ ಸಂಸ್ಕೃತಿ ರೂಪಿಸಿಕೊಳ್ಳಬೇಕು

ಒಕ್ಕಲಿಗ ಜನಾಂಗವು ಕೇವಲ ಪ್ರೋತ್ಸಾಹ ಭತ್ಯೆಗಳನ್ನು ನೆಚ್ಚಿಕೊಂಡಿರುವ ಕೃಷಿ ಮಾರುಕಟ್ಟೆಯನ್ನು ನಂಬಿ‌ ಕೂರಬಾರದು. ಬದಲಿಗೆ ಮಾರುಕಟ್ಟೆ ಆರ್ಥಿಕತೆ ಆಧರಿಸಿ ನಡೆದರೆ ಪ್ರಗತಿ ಸಾಧ್ಯ ಎಂದು ಸಚಿವ ಅಶ್ವತ್ಥ್​ ನಾರಾಯಣ್ ಹೇಳಿದ್ದಾರೆ.

ಅಶ್ವತ್ಥ್​ ನಾರಾಯಣ್​
ಅಶ್ವತ್ಥ್​ ನಾರಾಯಣ್​
author img

By

Published : Feb 6, 2022, 9:29 AM IST

ಬೆಂಗಳೂರು: ಕೃಷಿಗೆ ಹೆಸರಾಗಿರುವ ಒಕ್ಕಲಿಗ ಜನಾಂಗವು ವ್ಯಾಪಾರ ವಹಿವಾಟು ನಡೆಸುವ ಉದ್ಯಮಶೀಲ ಸಂಸ್ಕೃತಿಯನ್ನು ರೂಪಿಸಿಕೊಳ್ಳುವ ಅಗತ್ಯ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ್​ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರದಂದು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 'ಫಸ್ಟ್ ಸರ್ಕಲ್' ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಉತ್ತಮ ಸಾಧಕರು ಮತ್ತು ಪ್ರತಿಭಾವಂತರು ಸಮಾಜದ ಋಣ ತೀರಿಸಲು ಮೆಟ್ಟಿಲುಗಳಾಗಲು ಸಿದ್ಧರಿದ್ದಾರೆ. ಈ ಸಂಘಟನೆಯ ಉಪಕ್ರಮವು ಒಂದು ಐತಿಹಾಸಿಕ ದಿನವಾಗಿದೆ ಎಂದರು.

ಒಕ್ಕಲಿಗ ಜನಾಂಗವು ಕೇವಲ ಪ್ರೋತ್ಸಾಹ ಭತ್ಯೆಗಳನ್ನು ನೆಚ್ಚಿಕೊಂಡಿರುವ ಕೃಷಿ ಮಾರುಕಟ್ಟೆಯನ್ನು ನಂಬಿ‌ ಕೂರಬಾರದು. ಬದಲಿಗೆ ಮಾರುಕಟ್ಟೆ ಆರ್ಥಿಕತೆ ಆಧರಿಸಿ ನಡೆದರೆ ಪ್ರಗತಿ ಸಾಧ್ಯ ಎಂದು ಹೇಳಿದರು.

ಓದಿ: ಅಘನಾಶಿನಿ‌ ನದಿಯಲ್ಲಿ ಚಿಪ್ಪಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಮೀನುಗಾರರು ಒತ್ತಾಯ

ಸಮುದಾಯ ತನ್ನ ಶಕ್ತಿ ಜಾಣ್ಮೆಯನ್ನು ಪರಿಪೂರ್ಣವಾಗಿ ಬಳಸಿಕೊಂಡಿಲ್ಲ: ಸಮುದಾಯವು ತನ್ನ ಶಕ್ತಿ ಮತ್ತು ಜಾಣ್ಮೆಯನ್ನು ಪರಿಪೂರ್ಣವಾಗಿ ಬಳಸಿಕೊಂಡಿಲ್ಲ. ಉತ್ತಮ ಗುಣಮಟ್ಟದ ಜತೆಗೆ ಮುನ್ನುಗ್ಗಿ ನಡೆದರೆ ಜಯ ಸಾಧಿಸಬಹುದು. ಈ ಸಂಘಟನೆಯು ಆ ನಿಟ್ಟಿನಲ್ಲಿ ಅಗತ್ಯ ರಚನಾತ್ಮಕ ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.

ಕೃಷಿಕಲ್ಪ ಯೋಜನೆ ಆರಂಭ: ಸರ್ಕಾರವು ತೆಂಗು ಮತ್ತು ಮಾವು ಬೆಳೆಗಳಿಗೆ ಮೌಲ್ಯವರ್ಧನೆ ಮಾಡಲು ಕೃಷಿಕಲ್ಪ ಯೋಜನೆಯನ್ನು ಆರಂಭಿಸಿದೆ. ಇದರ ಲಾಭ ರಾಮನಗರ ಜಿಲ್ಲೆಯ ರೈತರಿಗೆ ದೊರಕಿದೆ. ಉಳಿದ ಜಿಲ್ಲೆಗಳ ರೈತರಿಗೂ ಇಂತಹ ಸೂಕ್ತ ಯೋಜನೆಗಳನ್ನು ರೂಪಿಸಬೇಕು ಎಂದು ಅಶ್ವತ್ಥ್​ನಾರಾಯಣ್​ ಪ್ರತಿಪಾದಿಸಿದರು.

ಓದಿ; ಭಾರತದ ಕ್ರಿಕೆಟ್​ ಭವಿಷ್ಯ ಸುರಕ್ಷಿತವಾಗಿದೆ: ಅಂಡರ್​-19 ವಿಶ್ವಕಪ್​ ಗೆಲುವಿಗೆ ಮೋದಿ ಮೆಚ್ಚುಗೆ

ಕಾರ್ಯಕ್ರಮದಲ್ಲಿ ನವೋದ್ಯಮ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ ಪ್ರಕಾಶ್, ಐಆರ್ ಎಸ್ ಅಧಿಕಾರಿ ಜಯರಾಂ ರಾಯಪುರ, ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.