ETV Bharat / state

ಬೆಂಗಳೂರಿನಲ್ಲಿ ವಿಶ್ವಕುಂದಾಪ್ರಕನ್ನಡ ಹಬ್ಬ.. ಕುಂದಾಪುರದ ಗ್ರಾಮೀಣ ಬದುಕಿನ ಸೊಗಡು ಅನಾವರಣ.. - ಹೋಟೆಲ್ ಉದ್ಯಮದಲ್ಲಿ ಕುಂದಕನ್ನಡಿಗರು

ಬೆಂಗಳೂರಿನಲ್ಲಿ ನಡೆದ ವಿಶ್ವಕುಂದಾಪ್ರಕನ್ನಡ ಹಬ್ಬದ ಪ್ರಯುಕ್ತ ಗ್ರಾಮೀಣ ಮಣ್ಣಿನ ಸೊಬಗು ಸಂಸ್ಕೃತಿ ಬಿಂಬಿಸುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕುಂದಾಪುರ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Vishwakundapra Kannada festival was celebrated in Bangalore.
ಬೆಂಗಳೂರಿನಲ್ಲಿ ವಿಶ್ವಕುಂದಾಪ್ರ ಕನ್ನಡ ಹಬ್ಬವನ್ನು ಆಚರಿಸಲಾಯಿತು.
author img

By

Published : Jul 23, 2023, 5:53 PM IST

ಬೆಂಗಳೂರು:ಕುಂದಾಪುರ ಕನ್ನಡ ಭಾಷೆ ಮಾತನಾಡುವವರು ರಾಜ್ಯ ಮಾತ್ರವಲ್ಲ ಪ್ರಪಂಚದ ಮೂಲೆ ಮೂಲೆಯಲ್ಲೂ ನೆಲೆಸಿದ್ದಾರೆ. ಕುಂದಗನ್ನಡ ಎಂದು ಪ್ರಖ್ಯಾತಿಯ ಗ್ರಾಮೀಣ ಸೊಗಡಿನ ಭಾಷೆಗೆ ತನ್ನದೇ ಅಸ್ತಿತ್ವ ಕೊಡಬೇಕು. ಈ ಭಾಷೆ ಕೇವಲ ಹಾಸ್ಯಕ್ಕೆ ಸೀಮಿತವಾಗದೇ ಇದು ಕುಂದಾಪುರದ ಜನರ ಬದುಕಿನ ಭಾಷೆಯಾಗಿದೆ ಎನ್ನುವುದನ್ನು ತಿಳಿಸುವುದಕ್ಕಾಗಿಯೇ ವಿಶ್ವಕುಂದಾಪ್ರಕನ್ನಡ ದಿನಾಚರಣೆ ನಗರದ ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ ನಡೆಯಿತು.

ಇಂದು ಮೊದಲಿಗೆ ಕುಂದಾಪುರದ ರಥವನ್ನು ಶಾಸಕ ಗುರುರಾಜ್ ‌ಗಂಟಿಹೊಳೆ, ಕಿರಣ್ ಕೊಡ್ಗಿ, ಕಂಬಳದ ಧುರೀಣ ಶಾಂತರಾಮ್ ಶೆಟ್ಟಿ ಬಾರ್ಕೂರ್ ಎಳೆದು ಸಂಸ್ಕೃತಿಯನ್ನು ಮೆರೆದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಂಪ್ರದಾಯಿಕವಾಗಿ ಕಂಬಕ್ಕೆ ಕುಂದಾಪುರ ದಿನದ ಲೋಗೋ ಏರಿಸಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಭಾಗವಹಿಸಿದ್ದರು. ಉದ್ಘಾಟನೆ ಬಳಿಕ ಯಕ್ಷಗಾನ, ಹಾಡು, ನಾಟಕಗಳು ಸೇರಿದ್ದ ಜನರ ಮನಸೆಳೆದವು.

ವಿಶ್ವಕುಂದಾಪ್ರಕನ್ನಡ ಹಬ್ಬ: ಚೆಂದದ ಪ್ರಾದೇಶಿಕ ಕನ್ನಡ ಭಾಷೆಯನ್ನು ಅತಿಯಾಗಿ ಪ್ರೀತಿಸುವ ಕುಂದಾಪುರದ ಮನಸ್ಸುಗಳು ಬೆಂಗಳೂರಿನಲ್ಲಿ ವಿಶ್ವಕುಂದಾಪ್ರಕನ್ನಡ ಹಬ್ಬ ನಡೆಸುತ್ತಿವೆ. ಈ ಬಾರಿ ವಿಶ್ವಕುಂದಾಪ್ರಕನ್ನಡ ದಿನದ ಅಂಗವಾಗಿ ಗ್ರಾಮೀಣ ಮಣ್ಣಿನ ಸೊಬಗು, ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ 5 ವರ್ಷಗಳಿಂದ ಆಷಾಢ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತದೆ ಎಂದು ವಿಶ್ವ ಕುಂದಾಪ್ರಕನ್ನಡ ಪ್ರತಿಷ್ಠಾನದ ಅಜಿತ್ ಶೆಟ್ಟಿ ಉಳ್ತೂರು ಸಮಾರಂಭದಲ್ಲಿ ತಿಳಿಸಿದರು.

ನಿರಂತರ 12 ಗಂಟೆಗಳ ಕಾಲ ನೆಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕುಂದಾಪುರ ಮೂಲದ ಸ್ಟಾರ್ ನಟ ನಿರ್ದೇಶಕರು ಸಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕುಂದಗನ್ನಡದ ಕಲರವ, ಬದುಕಿನ ಸೊಗಡು ಅನಾವರಣವಾಗಿದೆ. ಊರಗೌರವ, ಹಾಡು ಹಾಸ್ಯ, ನಗು-ನೃತ್ಯ, ಯಕ್ಷಗಾನ, ನುಡಿ ಚಾವುಡಿ, ಖಾದ್ಯ ವೈವಿಧ್ಯ, ಮರೆತ ಆಟೋಟಗಳ ಮೆರವಣಿಗೆ ಸೇರಿದಂತೆ ಇತರ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಬದುಕಿನ ಬಂಡಿ ಸಾಗಿಸಲು ಬಂದವರು: ಸುಮಾರು ಮೂರು ದಶಕಗಳ ಹಿಂದೆ ಬದುಕಿನ ಬಂಡಿ ಸಾಗಿಸಲು ಬೆಂಗಳೂರಿಗೆ ಬಂದವರು, ಇಂದು ನಗರಾದ್ಯಂತ ಬೃಹತ್‌ ಹೋಟೆಲ್ ಉದ್ಯಮ, ಶಿಕ್ಷಣ, ಸಾಹಿತ್ಯ, ಕಲೆ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆಗೈಯುತ್ತ, ಊರಿನ ಭಾಷೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರಾಗಿ ಬೆಳೆದಿದ್ದಾರೆ ಎಂದು ಹೇಳಿದರು.

ಸ್ವಂತ ಊರನ್ನು ಮರೆಯಯದವರು: 1980ರ ಬಳಿಕ ಹೋಟೆಲ್ ಉದ್ಯಮದಲ್ಲಿ ಕುಂದಕನ್ನಡಿಗರು ವಿಶೇಷ ಛಾಪು ಮೂಡಿಸಿದ್ದಾರೆ. ಕುಂದಾಪುರ ಸೇರಿದಂತೆ ವಿವಿಧ ಕಡೆಗಳಿಂದ ಹೋಟೆಲ್‌ ಕೆಲಸಕ್ಕೆ ಬರುವವರಿಗೆ ಕೆಲಸ ಮಾಡಲು ಶಿಫಾರಸು ಪತ್ರದ ಅಗತ್ಯವಿತ್ತು. 1985ರ ಬಳಿಕ ಗ್ರಾಮೀಣ ಹಾಗೂ ನಗರ ಭಾಗಕ್ಕೆ ಕುಂದಗನ್ನಡಿಗರು ಉದ್ಯೋಗ ಅರಸಿಕೊಂಡು ಬರುವವರ ಪ್ರಮಾಣ ಹೆಚ್ಚಾಯಿತು.

ಜಾಗತೀಕರಣ ಪ್ರಾರಂಭಗೊಂಡ ಬಳಿಕ ಬೇರೆ ಉದ್ಯೋಗಾವಕಾಶಗಳ ಜತೆ ಜತೆಗೆ ಶಿಕ್ಷಣಕ್ಕಾಗಿ ಕುಂದಗನ್ನಡಿಗರು ಬೆಂಗಳೂರಿಗೆ ಕಾಲಿಟ್ಟಿದ್ದರು. ಹಾಗೆಂದು ಸ್ವಂತ ಊರನ್ನು ಮರೆತಿಲ್ಲ, ಊರು ಉತ್ಸವ, ಸಂಭ್ರಮದಲ್ಲಿ ಪಾಲ್ಗೊಳ್ಳುವುದನ್ನು ತೊರೆದಿಲ್ಲ. ಕುಂದಾಪ್ರ ಪ್ರದೇಶ ಹಾಗೂ ಭಾಷೆಯನ್ನು ಮರೆಯದೇ, ಬೆಂಗಳೂರಿನಲ್ಲಿಯೂ ಒಗ್ಗಿಕೊಳ್ಳುತ್ತಾ ಬದುಕು ರೂಪಿಸಿಕೊಂಡಿರುವುದು ಕುಂದ ಕನ್ನಡಿಗರ ವಿಶೇಷತೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನೆಲೆ ನಿಂತ ಕುಂದಾಪುರ ಕನ್ನಡಿಗರು: ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಳಿಕ ಬರುವ ಕುಂದಾಪುರ, ಬೈಂದೂರು ತಾಲೂಕು ಹಾಗೂ ಶಿರೂರಿನಲ್ಲಿ ಕುಂದ ಕನ್ನಡವನ್ನು ಮಾತನಾಡುವವರು ಹೆಚ್ಚಾಗಿ ಕಾಣಸಿಗುತ್ತಾರೆ. ಇವರೆಲ್ಲರ ಮಾತೃ ಭಾಷೆ ಬೇರೆ ಬೇರೆಯಿದ್ದರೂ, ಅವರೆಲ್ಲ ಒಂದೆಡೆ ಸೇರಿದಾಗ ಕುಂದಗನ್ನಡವೇ ಭಾಷೆ. ಹಾಗಾಗಿ ಇವರು ಕುಂದಗನ್ನಡಿಗರು ಎನ್ನಿಸಿಕೊಳ್ಳುತ್ತಾರೆ.

1950ರ ದಶಕದಲ್ಲಿ ಕುಂದಾಪುರ ಬಹಳ ಹಿಂದುಳಿದ ಪ್ರದೇಶವಾಗಿತ್ತು. ಕೃಷಿ ಇವರ ಬದುಕಿನ ಮೂಲ ಆಧಾರವಾಗಿತ್ತು. ಅವಿಭಕ್ತ ಕುಟುಂಬದ ಬಡವರಿಗೆ ಕೃಷಿ ಕೆಲಸದಲ್ಲಿ ಬದುಕು ಕಟ್ಟಿಕೊಳ್ಳಲಾಗದೇ ಉದ್ಯೋಗ ಅರಸಿ ಬೇರೆಡೆಗೆ ತೆರಳತೊಡಗಿದರು. ಅವರಲ್ಲಿ ಬಹಳಷ್ಟು ಮಂದಿ ಬೆಂಗಳೂರಿನಲ್ಲಿ ನೆಲೆ ನಿಂತರು ಎಂದು ಹೇಳಿದರು.

ಇದನ್ನೂಓದಿ: ಹಾವೇರಿಯಲ್ಲೊಂದು ತಾರಾಲಯ.. ಆಸ್ಟ್ರೋ ಫಾರ್ಮ್ ನಿರ್ಮಿಸಿದ ರೈತನ ಮಗ ನಿರಂಜನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.