ಹೊಸಪೇಟೆ(ವಿಜಯನಗರ) : ತಾಲೂಕಿನ ಮಲಪಣಗುಡಿಯ ವಿಜಯಶ್ರೀ ರೆಸಾರ್ಟ್ ಹಾಗೂ ಹೆರಿಟೇಜ್ ವಿಲೇಜ್ಗೆ ಪ್ರತಿಷ್ಠಿತ ಬೆಸ್ಟ್ ನ್ಯೂ ವೆಡ್ಡಿಂಗ್ ಡೆಸ್ಟೀನೇಷನ್ ಇನ್ ಇಂಡಿಯಾ(BEST NEW WEDDING DESTINATION IN INDIA) ಅವಾರ್ಡ್ ಲಭಿಸಿದೆ.
ಇಂದು ಈ ಬಗ್ಗೆ ಜಯಶ್ರೀ ರೆಸಾರ್ಟ್ ಹಾಗೂ ಹೆರಿಟೇಜ್ ವಿಲೇಜ್ ನಿರ್ದೇಶಕ ರಾಜು ಭೂರಟ್ ಮಾತನಾಡಿದಾರೆ. ದೆಹಲಿಯ ವರ್ಲ್ಡ್ ವೈಡ್ ಅಚೀವರ್ಸ್ ಎಂಬ ಸಂಸ್ಥೆ ವತಿಯಿಂದ ಬೆಸ್ಟ್ ನ್ಯೂ ವೆಡ್ಡಿಂಗ್ ಡೆಸ್ಟೀನೇಷನ್ ಇನ್ ಇಂಡಿಯಾ ಎಂಬ ಪ್ರಶಸ್ತಿ ದೊರಕಿದೆ. ದಕ್ಷಿಣ ಭಾರತದಲ್ಲಿನ ಹಾಗೂ ಹಂಪಿಯ ಭಾಗದಲ್ಲಿರುವ ರೆಸಾರ್ಟ್ ಆಯ್ಕೆ ಮಾಡಲಾಗಿದೆ. ಆ.27ರಂದು ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿನ ಪುದುಚೆರಿ ಹಾಗೂ ಹಂಪಿ ಭಾಗದ ವಿಜಯಶ್ರೀ ರೆಸಾರ್ಟ್ ಹಾಗೂ ಹೆರಿಟೇಜ್ ವಿಲೇಜ್ ಆಯ್ಕೆಗೊಂಡಿವೆ. ಆಯ್ಕೆ ಮಾಡುವ ತಂಡದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವರಾದ ಎಸ್ ಪಿ ಭಗೇಲ್, ಎಸ್.ಪ್ರಕಾಶ್, ಪದ್ಮಶ್ರೀ ಪುರಸ್ಕೃತ ಹಾಗೂ ಬಾಲಿವುಡ್ ಗಾಯಕ ಕುಮಾರಸಾನು, ಬಾಲಿವುಡ್ ಮನೋಜ ಜೋಶಿ ಇದ್ದರು ಎಂದು ಮಾಹಿತಿ ನೀಡಿದರು.
ಈ ಪ್ರಶಸ್ತಿಗಾಗಿ 22 ದೇಶಗಳು ಭಾಗವಹಿಸಿದ್ದವು. 7 ಲಕ್ಷ ಚದರ ಅಡಿಯಲ್ಲಿ ರೆಸಾರ್ಟ್ ಇದೆ. 12 ವರ್ಷದಲ್ಲಿ 350 ವಿವಾಹಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.