ETV Bharat / state

ನಾಳೆಯಿಂದ ಹೈಕೋರ್ಟ್​ನಲ್ಲಿ ವಿಡಿಯೋ ಕಾನ್ಪರೆನ್ಸ್ ಪುನರಾರಂಭ

Video conference in High Court: ವೀಡಿಯೊ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಲು ಹೈಕೋರ್ಟ್ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಹೈಕೋರ್ಟ್​
ಹೈಕೋರ್ಟ್​
author img

By ETV Bharat Karnataka Team

Published : Dec 10, 2023, 8:08 AM IST

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ಹೈಕೋರ್ಟ್​ನ ಎಲ್ಲಾ ಪೀಠಗಳಲ್ಲಿ ಸ್ಥಗಿತಗೊಂಡಿದ್ದ ವೀಡಿಯೊ ಕಾನ್ಫರೆನ್ಸ್ ಸೇವೆ ಡಿ.​11 ಸೋಮವಾರದಿಂದ ಪುನಾರಂಭವಾಗಲಿದೆ. ವಿಚಾರಣೆ ವೇಳೆ ವೀಡಿಯೊ ಕಾನ್ಫರೆನ್ಸ್​ನಲ್ಲಿ ಭಾಗಿಯಾಗಲು ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರಿಗೆ ಹೈಕೋರ್ಟ್ ಕಂಪ್ಯೂಟರ್ಸ್ ವಿಭಾಗ ಸುಧಾರಿತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಮಾರ್ಗಸೂಚಿಗಳು ಹೀಗಿವೆ:

  • ಜೂಮ್ ಅಪ್ಲಿಕೇಶನ್​ನಲ್ಲಿ ಸೈನ್ಅಪ್ ಪ್ರಕ್ರಿಯೆ ಮೂಲಕ ಒಂದು ಬಾರಿಯ ಕ್ರಮದ ಭಾಗವಾಗಿ ಎಲ್ಲಾ ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರು, ಮಾಧ್ಯಮದವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
  • ಜೂಮ್​ ಆ್ಯಪ್​ನಲ್ಲಿ ನೋಂದಾಣಿ ಮಾಡಿಕೊಳ್ಳುವುದಕ್ಕೂ ಮುನ್ನ ಪ್ರತಿಯೊಬ್ಬ ವಕೀಲ, ಪಾರ್ಟಿ ಇನ್ ಪರ್ಸನ್, ದಾವೆದಾರರು, ಸರ್ಕಾರಿ ಇಲಾಖೆಗಳು ಕಡ್ಡಾಯವಾಗಿ ಹೈಕೋರ್ಟ್​ನ ಆನ್ಲೈನ್ ಡಿಜಿಟಲ್ ಕೇಸ್ ಡೈರಿ ಪೋರ್ಟಲ್‌ ನಲ್ಲಿ (https://karnatakajudiciary.kar.nic.in/advreg/) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.
  • ಕಡ್ಡಾಯ ನೋಂದಣಿಯಾದರೆ ಮಾತ್ರ ಇ-ಮೇಲ್ ಐಡಿಗಳನ್ನು ವೈಟ್ಲಿಸ್ಟ್ ಮಾಡಲು ಸಾಧ್ಯ.
  • ಸೈಬರ್ ಭದ್ರತಾ ದೃಷ್ಟಿಯಿಂದ ಈ ಕ್ರಮ ಅಗತ್ಯವಾಗಿದೆ.
  • ಆನ್ಲೈನ್ ಡಿಜಿಟಲ್ ಕೇಸ್ ಡೈರಿ ಪೋರ್ಟಲ್​ನಲ್ಲಿ ನೋಂದಣಿ ಮಾಡುವಾಗ ಬಳಕೆ ಮಾಡಲಾದ ಇ- ಮೇಲ್ ಐಡಿ ಸೈನ್ಅಪ್/ಲಾಗಿನ್ ಐಡಿಯಾಗಿ ಜೂಮ್ ವೀಡಿಯೊ ಕಾನ್ಫರೆನ್ಸ್ ವೇದಿಕೆಯಲ್ಲಿ ಬಳಕೆಯಾಗಲಿದೆ.
  • ಈಗಾಗಲೇ ಆನ್ಲೈನ್ ಡಿಜಿಟಲ್ ಕೇಸ್ ಡೈರಿ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಂಡಿರುವ ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರು, ಸರ್ಕಾರಿ ಇಲಾಖೆಯವರು ಅಲ್ಲಿ ಬಳಕೆ ಮಾಡಿರುವ ಇ-ಮೇಲ್ ಐಡಿಯನ್ನು ಜೂಮ್​ನಲ್ಲಿ ಬಳಕೆ ಮಾಡಬೇಕು.
  • ವಕೀಲರು, ಪಾರ್ಟಿ ಇನ್ ಪರ್ಸನ್ಸ್, ದಾವೆದಾರರು ಕಾಸ್ಲಿಸ್ಟ್ ಪಟ್ಟಿ, ಪ್ರಕರಣದ ಸಂಖ್ಯೆ ಮತ್ತು ಹೆಸರನ್ನು ಉಲ್ಲೇಖಿಸಬೇಕು.
  • ಅಕ್ರಿಡಿಟೇಷನ್ ಪಟ್ಟಿಯಲ್ಲಿ ಉಲ್ಲೇಖಿತವಾಗಿರುವ ಮಾಧ್ಯಮ ಪ್ರತಿನಿಧಿಗಳು ತಮ್ಮ ಇ-ಮೇಲ್ ಐಡಿಗಳನ್ನು ಹೈಕೋರ್ಟ್​ನ ಕಂಪ್ಯೂಟರ್ಸ್ ರಿಜಿಸ್ಟ್ರಾರ್ ಅವರಿಗೆ ವೈಟ್ಲಿಸ್ಟ್ ಮಾಡಲು ಇ- ಮೇಲ್ ಕಳುಹಿಸಬೇಕು. ಮಾಧ್ಯಮ ಪ್ರತಿನಿಧಿಗಳು ತಮ್ಮ ಹೆಸರು, ಸಂಸ್ಥೆಯ ಹೆಸರನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕು.
  • ಕೋರ್ಟ್ ಹಾಲ್​ಗಳಲ್ಲಿ ಕಾಯ್ದಿರಿಸುವ ರೂಮ್​ಗಳು ಇರಲಿದ್ದು, ಸರಿಯಾದ ಪ್ರಕರಣದ ಸಂಖ್ಯೆ ಹೊಂದಿರುವವರನ್ನು ಮಾತ್ರ ವೀಡಿಯೊ ಕಾನ್ಫರೆನ್ಸ್​ನಲ್ಲಿ ಭಾಗವಹಿಸಲು ಅನುಮತಿಸಲಾಗುವುದು.
  • ವಿದೇಶಗಳಿಂದ ವಿಚಾರಣೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ವೀಡಿಯೊ ಕಾನ್ಫರೆನ್ಸ್​ನಲ್ಲಿ ಭಾಗವಹಿಸಲು ಅನುಮತಿ ಪಡೆದುಕೊಳ್ಳಬೇಕು.
  • ಈ ರೀತಿಯಲ್ಲಿ ನೋಂದಾಯಿತ ಬಳಕೆದಾರರನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಕಲಾಪಕ್ಕೆ ಅನುಮತಿಸಲು ನಿರ್ಧರಿಸಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ: 2019-23ರಲ್ಲಿ ನಡೆದ ವಿವಿಧ ಕಾಮಗಾರಿಗಳ ತನಿಖೆಗೆ ಸಮಿತಿ ರಚನೆ: ಮಧ್ಯಂತರ ತಡೆ ನೀಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.