ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ಉಗ್ರರು ನಡೆಸಿರುವ ಬಾಂಬ್ ದಾಳಿಯನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಉಗ್ರರ ಪ್ರತಿಕೃತಿ ದಹಿಸಲಾಯಿತು.ಈ ಮೂಲಕ ಕರಾಳ ದಿನಾಚರಣೆ ಆಚರಿಸಲಾಯಿತು.
ವಾಟಾಳ್ ನಾಗರಾಜ್ ಮಾತನಾಡಿ,ವಿಶ್ವವನ್ನೇ ಬುಡಮೇಲು ಮಾಡುವಂತಹ ಕುಕೃತ್ಯ, ಇದು ಖಂಡನೀಯ. ಉಗ್ರರ ದಮನ ಮೊದಲ ಕರ್ತವ್ಯ. ಪ್ರತಿಯೊಬ್ಬರು ಸೈನಿಕನಾಗಿ ದೇಶವನ್ನು ಕಾಪಾಡಬೇಕಿದೆ. ಶ್ರೀಲಂಕಾದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.