ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಪ್ರೀಯ ವಿಮಾನ ನಿಲ್ದಾಣದ ಸುತ್ತ ದಟ್ಟ ಮಂಜು ಮತ್ತು ಹಿಮಮಳೆಯಿಂದಾಗಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳಿಗೆ ಹಿಮದಿಂದ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ಇನ್ನು 13 ವಿಮಾಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಸುಮಾರು 2-3 ಘಂಟೆ ತಡವಾಗಿ ವಿಮಾನಗಳು ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಇದರಿಂದ ಕೆಐಎಲ್ನಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು, ಟೇಕಾಫ್ ಆಗಬೇಕಿದ್ದ ವಿಮಾನಗಳ ಹಾರಾಟಕ್ಕೂ ದಟ್ಟ ಹಿಮದಿಂದ ತೊಂದರೆಯಾಗಿದೆ.