ದೊಡ್ಡಬಳ್ಳಾಪುರ: ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬ ಬಹಳ ಅದ್ಧೂರಿಯಿಂದ ಆಚರಿಸುತ್ತಾರೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವರಿಗೆ ಹೆಚ್ಚಿನದಾಗಿ ಆಭರಣಗಳಿಂದಲ್ಲೇ ಅಲಂಕಾರ ಮಾಡಲು ಮುಂದಾಗುತ್ತಾರೆ. ಇದು ಕಳ್ಳರಿಗೆ ಇದೇ ಸುವರ್ಣಾವಕಾಶ. ಆದ್ದರಿಂದ ಎಲ್ಲರೂ ಜಾಗ್ರತೆಯಿಂದ ಇರಬೇಕು ಎಂದು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಮನವಿ ಮಾಡಿದ್ದಾರೆ.
ಹಬ್ಬದ ಪ್ರಯುಕ್ತ ಅರಿಶಿನ- ಕುಂಕುಮ ಪಡೆಯಲು ಬರುವ ಮಹಿಳೆಯರ ಬಗ್ಗೆಯೂ ಎಚ್ಚರ ಇರಲಿ. ಹಬ್ಬದ ದಿನದಂದು ಮೈಮೇಲೆ ಆಭರಣಗಳನ್ನು ಧರಿಸುವುದು ಸಂಪ್ರದಾಯ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಮನೆಯ ಕಿಟಕಿ ಪಕ್ಕದಲ್ಲಿ ದೇವಿಯನ್ನು ಇಟ್ಟಾಗ ಹಣ ಮತ್ತು ಒಡವೆಗಳ ಬಗ್ಗೆ ಮತ್ತು ಅಪರಿಚಿತ ಮಹಿಳೆಯರು ಬಂದಾಗ ಹೆಚ್ಚಿನ ನಿಗಾ ವಹಿಸಿ ಎಂದು ತಿಳಿಸಿದ್ದಾರೆ.