ಬೆಂಗಳೂರು: ಜನವರಿ 13ರಂದು ಇಸ್ಕಾನ್ ದೇಗುಲದಲ್ಲಿ ವೈಕುಂಠ ಏಕಾದಶಿ ಆಚರಣೆ ನಡೆಯಲಿದೆ. ಆದರೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಮತ್ತು ಸರ್ಕಾರ ಹೊರಡಿಸಿರುವ ಮುನ್ನೆಚ್ಚರಿಕೆ ಕ್ರಮಗಳ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ದೇಗುಲದಲ್ಲಿ ವಿಶೇಷ ಆಹ್ವಾನಿತರಿಗೆ ಮಾತ್ರ ದರ್ಶನದ ಅವಕಾಶವಿರುತ್ತದೆ. ಸುರಕ್ಷತೆಯ ಎಲ್ಲ ನಿಯಮಗಳನ್ನು ಪಾಲಿಸಿ ಸ್ಥಾನಿಕ ಭಕ್ತವೃಂದ ಉತ್ಸವ ಆಚರಿಸಲಿದೆ. ಇಡೀ ಉತ್ಸವದ ನೇರಪ್ರಸಾರ ದೇವಸ್ಥಾನದ ಅಧಿಕೃತ ಜಾಲತಾಣ (www.iskconbangalore.org) ಮತ್ತು ಇಸ್ಕಾನ್ ಬೆಂಗಳೂರು ಯೂಟ್ಯೂಬ್ ಚಾನೆಲ್ನಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: ಚೇತರಿಸಿಕೊಂಡ ಸಿದ್ದರಾಮಯ್ಯ.. ನಾಳೆಯಿಂದ ಮತ್ತೆ ಪಾದಯಾತ್ರೆಗೆ ಸಜ್ಜು
ಕಾರ್ಯಕ್ರಮದ ವೇಳಾಪಟ್ಟಿ:
ಬೆಳಗ್ಗೆ 3:45 ರಿಂದ 5:00 ಕ್ಕೆ ಶ್ರೀನಿವಾಸ ಗೋವಿಂದ ಮಹಾಭಿಷೇಕ
ಬೆಳಗ್ಗೆ 5:45 ರಿಂದ 6:30ಕ್ಕೆ ವೈಕುಂಠ ದ್ವಾರ ಅನಾವರಣ
ಬೆಳಗ್ಗೆ 8:30 ರಿಂದ ಲಕ್ಷಾರ್ಚನ ಸೇವೆ
ಬೆಳಗ್ಗೆ 11:00 ಮತ್ತು ಸಂಜೆ 6:00 ಕ್ಕೆ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಾ ಕಲ್ಯಾಣೋತ್ಸವ