ETV Bharat / state

ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅವಧಿ ಕಡಿತ ; ಎನ್​ಹೆಚ್​ಎಂನಿಂದ ಆದೇಶ

author img

By

Published : Jun 15, 2021, 5:35 PM IST

ಈಗಾಗಲೇ ಮೊದಲನೇ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‌ಪೋರ್ಟ್ ನಂಬರ್ ಅನ್ನು‌ ಬಳಸದೇ ಲಸಿಕೆ ಪಡೆದಿದ್ದರೆ, ಅಂತಹವರು ಕೋವಿಶೀಲ್ಡ್​ನ ಎರಡನೇ ಡೋಸ್ ಪ್ರಮಾಣ ಪತ್ರವನ್ನು ನೀಡುವಂತೆ ಆದೇಶ ಹೊರಡಿಸಲಾಗಿದೆ..

new
new

ಬೆಂಗಳೂರು : ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ಅಂತರವನ್ನು 12 ರಿಂದ 16 ವಾರಗಳಿಗೆ (84 ದಿನಗಳು) ಪರಿಷ್ಕರಿಸಲಾಗಿತ್ತು. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದಂತೆ, ಕೆಲ ಗುಂಪುಗಳಿಗೆ ಮಾತ್ರ ಲಸಿಕೆ ಅವಧಿ ಕಡಿತ ಮಾಡಿ ಆದೇಶ ಹೊರಡಿಸಿದೆ.

-ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು

-ನೌಕರಿಗಾಗಿ ವಿದೇಶಕ್ಕೆ ತೆರಳುವವರು

-ಅಂತಾರಾಷ್ಟ್ರೀಯ ಮಟ್ಟದ ಒಲಂಪಿಕ್ಸ್‌ಗಾಗಿ ಟೋಕಿಯೋಗೆ ತೆರಳುವ ಆಟಗಾರರು

ಇವರಿಗೆ 2ನೇ ಡೋಸ್​ ಲಸಿಕಾ ಅವಧಿ ಕಡಿತಗೊಳಿಸಲಾಗಿದೆ. ಈ ಕಾರ್ಯಚರಣೆಗಾಗಿ ರಾಜ್ಯವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯ ಆಯುಕ್ತರನ್ನು ಸಮರ್ಥ ಅಧಿಕಾರಿಗಳೆಂದು (Competent Authority) ಗುರುತಿಸಿದೆ. ಇವರು ಅರ್ಹ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ ಲಸಿಕಾಕರಣಕ್ಕಾಗಿ ಅನುಮತಿ ನೀಡಬಹುದು. ಅದು ಕೂಡ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಈ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಬೇಕು.

ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಯಾವುದಾದರೂ ಆಯ್ದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಈ ಗುಂಪಿನ ಫಲಾನುಭವಿಗಳ ಲಸಿಕಾಕರಣವನ್ನು ಆಯೋಜಿಸಬೇಕು.. ಅರ್ಹ ಫಲಾನುಭವಿಗಳು ಒದಗಿಸುವ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ 84 ದಿನಗಳ ಮೊದಲು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ ಲಸಿಕಾಕರಣಕ್ಕಾಗಿ ಅನುಮತಿ ನೀಡುವುದು.

ರಾಜ್ಯವು ನೀಡಿರುವ ಮಾದರಿ ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ (Self declaration certificate) ಅಭ್ಯರ್ಥಿಯು ನೀಡುವ ಮಾಹಿತಿಯನ್ನು ಪಡೆದು, ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರವನ್ನು ನೀಡುವುದು. ಈ ದೃಢೀಕರಣ ಪತ್ರವನ್ನು ಕೋವಿಡ್ ಪೋರ್ಟಲ್​ನಲ್ಲಿ SOPಯಂತೆ ಅಪ್‌ಲೋಡ್ ಮಾಡಿ ಲಸಿಕಾಭಿಯಾನ ನಡೆಸಬೇಕು.

ಈಗಾಗಲೇ ಮೊದಲನೇ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‌ಪೋರ್ಟ್ ನಂಬರ್ ಅನ್ನು‌ ಬಳಸದೇ ಲಸಿಕೆ ಪಡೆದಿದ್ದರೆ, ಅಂತಹವರು ಕೋವಿಶೀಲ್ಡ್​ನ ಎರಡನೇ ಡೋಸ್ ಪ್ರಮಾಣ ಪತ್ರವನ್ನು ನೀಡುವಂತೆ ಆದೇಶ ಹೊರಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.