ETV Bharat / state

ಇನ್ಮುಂದೆ ಸಚಿವರ ಕಚೇರಿಗಳಲ್ಲೂ ಇ-ಕಚೇರಿ ತಂತ್ರಾಂಶ ಬಳಕೆ ಕಡ್ಡಾಯ

ಬಹುತೇಕ ಸಚಿವರ ಕಚೇರಿಗಳಲ್ಲಿ ಇ-ಕಚೇರಿ ತಂತ್ರಾಂಶ ಬಳಕೆಯಾಗದೇ ಇರುವುದು ಮತ್ತು ಇಲಾಖೆಗಳು ಭೌತಿಕವಾಗಿ ಕಡತಗಳನ್ನು ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆ ಕಚೇರಿಗಳಲ್ಲೂ ಇನ್ನು ಮುಂದೆ ಇ-ಕಚೇರಿ ತಂತ್ರಾಂಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ.

use of e-office technology is also mandatory in ministerial offices
ಇನ್ಮುಂದೆ ಸಚಿವರ ಕಚೇರಿಗಳಲ್ಲೂ ಇ-ಕಚೇರಿ ತಂತ್ರಾಂಶ ಬಳಕೆ ಕಡ್ಡಾಯ
author img

By

Published : May 29, 2020, 11:19 PM IST

ಬೆಂಗಳೂರು: ಸಚಿವಾಲಯದಲ್ಲಿನ ಎಲ್ಲಾ ಕೆಲಸ‌ ಕಾರ್ಯಗಳನ್ನು ಸರ್ಕಾರ ಡಿಜಿಟಲೀಕರಣಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವರ ಕಚೇರಿಗಳಲ್ಲೂ ಇನ್ನು ಮುಂದೆ ಇ-ಕಚೇರಿ ತಂತ್ರಾಂಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ.

ಈ ಸಂಬಂಧ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಇನ್ನು ಮುಂದೆ ಎಲ್ಲಾ ಸಚಿವರ ಕಚೇರಿಗಳಿಗೆ ಕಡತವನ್ನು ಭೌತಿಕವಾಗಿ ಸಲ್ಲಿಸುವುದನ್ನು ತಡೆಹಿಡಿದು, ಇ-ಕಚೇರಿ ಮೂಲಕ ಸಲ್ಲಿಸುವಂತೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು‌ ಕ್ರಮ ಕೈಗೊಳ್ಳಲಿದ್ದಾರೆ.

ಮೇ 22ರಂದು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸಚಿವರ ಕಚೇರಿಗಳಲ್ಲಿ ಇ-ಕಚೇರಿ ತಂತ್ರಾಂಶ ಬಳಕೆಯಾಗದೇ ಇರುವುದು ಮತ್ತು ಇಲಾಖೆಗಳು ಭೌತಿಕವಾಗಿ ಕಡತಗಳನ್ನು ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆ ಇ-ಕಚೇರಿ ತಂತ್ರಾಂಶ ಬಳಕೆ ಸಂಬಂಧ ಸಚಿವರ ಗಮನಕ್ಕೆ ತಂದು, ಇಲಾಖೆಗಳಿಂದ ಸ್ವೀಕೃತಗೊಳ್ಳುವ ಕಡತ, ಸ್ವೀಕೃತಿಗಳ ಸಂಬಂಧ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಚಿವರ ಆಪ್ತ ಕಾರ್ಯದರ್ಶಿಗಳ ಗಮನಕ್ಕೆ ತರಲು ಸೂಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.