ETV Bharat / state

40% ಬರಹವುಳ್ಳ ಮಾಸ್ಕ್ ಧರಿಸಿ ಬಂದ ಕಾಂಗ್ರೆಸ್ ಸದಸ್ಯರು: ಪರಿಷತ್​​ನಲ್ಲಿ ಗದ್ದಲ - etv bharat kannada

ವಿಧಾನಪರಿಷತ್ ಕಲಾಪಕ್ಕೆ ಕಾಂಗ್ರೆಸ್ ಸದಸ್ಯರು ಮಾಸ್ಕ್ ಮೇಲೆ 40% ಸರ್ಕಾರ ಎಂದು ಬರೆದುಕೊಂಡು ಬಂದ ಹಿನ್ನೆಲೆಯಲ್ಲಿ ಗದ್ದಲ ಏರ್ಪಟ್ಟಿತು. ಉಭಯ ಸದಸ್ಯರ ವಾಕ್ಸಮರ ಹಿನ್ನೆಲೆಯಲ್ಲಿ ಕೆಲ ನಿಮಿಷಗಳ ಕಾಲ ಕಲಾಪ ಮುಂದೂಡಲಾಗಿತ್ತು.

uproar-in-council-session-congress-mlcs-masks
40% ಬರಹವುಳ್ಳ ಮಾಸ್ಕ್ ಧರಿಸಿ ಬಂದ ಕಾಂಗ್ರೆಸ್ ಸದಸ್ಯರು: ಪರಿಷತ್​​ನಲ್ಲಿ ಗದ್ದಲ, ಕಲಾಪ ಮುಂದೂಡಿಕೆ
author img

By

Published : Sep 22, 2022, 12:12 PM IST

Updated : Sep 22, 2022, 5:02 PM IST

ಬೆಂಗಳೂರು: ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಮಾಸ್ಕ್ ಮೇಲೆ 40% ಸರ್ಕಾರ ಎಂದು ಬರೆದುಕೊಂಡು ಕಾಂಗ್ರೆಸ್ ಸದಸ್ಯರು ಸದನಕ್ಕೆ ಬಂದ ಹಿನ್ನೆಲೆಯಲ್ಲಿ ಪರಿಷತ್ ಕಲಾಪದಲ್ಲಿ ಗದ್ದಲ ಎದ್ದಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ವಾಕ್ಸಮರದಿಂದ ಸದನವು ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು10 ನಿಮಿಷ ಮುಂದೂಡಲಾಯಿತು.

ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪರಿಷತ್​​ನಲ್ಲಿ 40 ಪರ್ಸೆಂಟ್ ಕಮಿಷನ್ ಎಂದು ಮಾಸ್ಕ್ ಮೇಲೆ ಬರೆಸಿಕೊಂಡು ಕಾಂಗ್ರೆಸ್ ಸದಸ್ಯರು ಸದನಕ್ಕೆ ಆಗಮಿಸಿದರು. ಸಿಎಂಗೆ ಮುಜುಗರ ಮಾಡಲು ಮಾಸ್ಕ್ ಹಾಕಿದ ಪರ್ಸಂಟೇಜ್ ಸರ್ಕಾರ ಎನ್ನುವ ಬರಹ ಹಾಕಿಕೊಂಡು ಬಂದಿದ್ದರು. ಇದು ಆಡಳಿತ ಪಕ್ಷ ಸದಸ್ಯರನ್ನು ಕೆರಳಿಸಿದ್ದು, ಪ್ರತಿಪಕ್ಷದ ವಿರುದ್ಧ ಬಿಜೆಪಿ ಸದಸ್ಯರು ಹರಿಹಾಯ್ದರು.

40% ಬರಹವುಳ್ಳ ಮಾಸ್ಕ್ ಧರಿಸಿ ಬಂದ ಕಾಂಗ್ರೆಸ್ ಸದಸ್ಯರು: ಪರಿಷತ್​​ನಲ್ಲಿ ಗದ್ದಲ

ಇದನ್ನೂ ಓದಿ: PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಈ ವೇಳೆ ಮಾತನಾಡಿದ ಪ್ರತಿಪಕ್ಷ ಸದಸ್ಯರು ಸರ್ಕಾರ ಏಕ ಪಕ್ಷೀಯವಾಗಿ ಕ್ರಮ ತೆಗದುಕೊಂಡಿದೆ. ರಾತ್ರೋರಾತ್ರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನು ಬಂಧನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದು ಸದನಕ್ಕೆ ಬಾವಿಗಿಳಿದು ಧರಣಿ ನಡೆಸಿದರು.

ಇದು ಹೇಡಿಗಳು ಮಾಡುವ ಕೆಲಸ ಎಂದು ಕಂದಾಯ ಸಚಿವ ಅಶೋಕ್ ಟೀಕಿಸಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಸಭಾಪತಿಗಳು ಮುಂದೂಡಿದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಕಮಿಷನ್ ಆರೋಪದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ: ಚರ್ಚೆಗೆ ಸರ್ಕಾರ ಸಿದ್ಧ ಎಂದ ಸಿಎಂ ಬೊಮ್ಮಾಯಿ

Last Updated : Sep 22, 2022, 5:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.