ETV Bharat / state

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಸಿಎಂ ಬೊಮ್ಮಾಯಿ ಸನ್ಮಾನ - Yogi met Bommai

ನಿನ್ನೆ ಸಂಜೆ ಬೊಮ್ಮಾಯಿ ಸರ್ಕಾರಿ ನಿವಾಸಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭೇಟಿ ನೀಡಿದರು.

UP CM Yogi visits CM Bommai Govt Residence
ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಿ ನಿವಾಸಕ್ಕೆ ಯುಪಿ ಸಿಎಂ ಯೋಗಿ ಭೇಟಿ
author img

By

Published : Sep 2, 2022, 7:39 AM IST

ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಎಂ ಬೊಮ್ಮಾಯಿ ಸರ್ಕಾರಿ ನಿವಾಸಕ್ಕೆ ನಿನ್ನೆ ಸಂಜೆ ಭೇಟಿ ನೀಡಿದರು.

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರಿ ನಿವಾಸಕ್ಕೆ ಯುಪಿ ಸಿಎಂ ಯೋಗಿ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಸ್ಥೆ ವತಿಯಿಂದ ನೆಲಮಂಗಲ ತಾಲೂಕಿನ ಮಹದೇವಪುರದಲ್ಲಿ ನೂತನವಾಗಿ ನಿರ್ಮಿಸಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ‌ ಜೊತೆಗೂಡಿ ಯೋಗಿ ಆದಿತ್ಯನಾಥ್ ಅವರು ರೇಸ್ ಕೋರ್ಸ್ ನಿವಾಸಕ್ಕೆ ಆಗಮಿಸಿದರು‌. ಸಚಿವರಾದ ಅಶ್ವತ್ಥ್ ನಾರಾಯಣ್, ಸಿ.ಸಿ ಪಾಟೀಲ್, ರಾಜ್ಯಸಭಾ ಸದಸ್ಯರಾದ ಜಗ್ಗೇಶ್, ಲೆಹರ್ ಸಿಂಗ್ ಸೇರಿದಂತೆ ಕೆಲ ಸಂಸದರು, ಶಾಸಕರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಿಎಂ ಪತ್ನಿ ಹಾಗೂ ಕುಟುಂಬಸ್ಥರು ಯೋಗಿ ಆದಿತ್ಯನಾಥ್ ಜೊತೆ ಫೋಟೋ ತೆಗೆಸಿಕೊಂಡರು.

ಬಳಿಕ ಸಿಎಂ ಯೋಗಿ ಹಾಗೂ ಸಿಎಂ ಬೊಮ್ಮಾಯಿ‌ ಭೋಜನ ಸ್ವೀಕರಿಸಿದರು.‌ ಇದೇ ವೇಳೆ ಬೊಮ್ಮಾಯಿ ಅವರ‌ ಜೊತೆ ಯೋಗಿ ಆದಿತ್ಯನಾಥ್ ಕುಶಲೋಪರಿ ವಿಚಾರಿಸಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಬಳಿಕ ರೇಸ್ ಕೋರ್ಸ್ ನಿವಾಸದಿಂದ ಹೆಚ್​ಎಎಲ್​ಗೆ ಹೊರಟ ಆದಿತ್ಯನಾಥ್ ಅವರಿಗೆ ಸಿಎಂ ಬೊಮ್ಮಾಯಿ‌ ಬೀಳ್ಕೊಟ್ಟರು.

ಇದನ್ನೂ ಓದಿ: ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ನಿರೂಪಿಸಿದವರು ಯೋಗಿ​: ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.