ETV Bharat / state

ಅನಧಿಕೃತವಾಗಿ ಕುದುರೆ ರೇಸ್ ಮೇಲೆ ಬೆಟ್ಟಿಂಗ್ ​: ಮೂವರ ಬಂಧನ - ಬೆಟ್ಟಿಂಗ್​​ ನಡೆಸುತ್ತಿದ್ದ ಮೂವರನ್ನು ಬಂಧಿಸಿದ ಸಿಸಿಬಿ ಪೊಲೀಸರು

ಅನಧಿಕೃತವಾಗಿ ಕುದುರೆ ರೇಸ್​ ಮೇಲೆ ಬೆಟ್ಟಿಂಗ್​ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪರವಾನಿಗೆ ಹೊಂದಿರುವ ರೇಸ್‌ಕೋರ್ಸ್​ಗೆ ಮಾತ್ರವೇ ಬೆಟ್ಟಿಂಗ್ ನಡೆಸುವ ಅವಕಾಶವಿದೆ..

Three Arrested by CCB
ಮೂವರ ಬಂಧನ
author img

By

Published : Mar 20, 2022, 5:17 PM IST

ಬೆಂಗಳೂರು : ಕುದುರೆ ರೇಸ್ ಮೇಲೆ ಅನಧಿಕೃತವಾಗಿ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನ ಹರೀಶ್, ವಿಕಾಸ್ ಶೆಣೈ ಹಾಗೂ ರಘುನಂದನ್ ಎಂದು ಗುರುತಿಸಲಾಗಿದೆ. ಪರವಾನಿಗೆ ಹೊಂದಿರುವ ರೇಸ್‌ಕೋರ್ಸ್​ಗೆ ಮಾತ್ರವೇ ಕುದುರೆ ರೇಸ್ ಮೇಲೆ ಬೆಟ್ಟಿಂಗ್ ನಡೆಸುವ ಅವಕಾಶವಿದೆ.

ಇದನ್ನೂ ಓದಿ: ಪೊಲೀಸ್​ ಠಾಣೆ ಮೆಟ್ಟಿಲೇರಿದ 6ರ ಪೋರ.. ಕಾರಣ ಏನ್​ ಗೊತ್ತಾ?

ಆದರೆ, ಸಾಯಿ ಸಾಫ್ಟ್‌ವೇರ್ ಎಂಬ ವೆಬ್‌ಸೈಟ್‌ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳು ರೇಸ್‌ಕೋರ್ಸ್​ಗೆ ಸಮಾನವಾಗಿ ಬೆಟ್ಟಿಂಗ್ ನಡೆಸುತ್ತಿದ್ದರು. ಸದ್ಯ ಮೂವರನ್ನೂ ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ 5.50 ಲಕ್ಷ ರೂ. ಲ್ಯಾಪ್‌ಟಾಪ್ ಹಾಗೂ 10 ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.