ETV Bharat / state

ರಾಜ್ಯಪಾಲರದ್ದು ದೂರದೃಷ್ಟಿ ಇಲ್ಲದ, ಕಂಡು ಕೇಳರಿಯದ ಬೇಸರದ ಭಾಷಣ: ಎಂ.ನಾಗರಾಜ್ - ಬೆಂಗಳೂರಿನ ಕೊಳಚೆ ಕೋಲಾರ ಕೆರೆಗಳಿಗೆ

ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣವನ್ನು ಕಾಂಗ್ರೆಸ್ ಸದಸ್ಯ ಎಂ.ನಾಗರಾಜ್ ಟೀಕಿಸಿದರು.

Vidhāna pariṣat 13 / 5,000 Translation results Translation result Legislative Council
ವಿಧಾನ ಪರಿಷತ್
author img

By

Published : Feb 16, 2023, 9:26 PM IST

ಬೆಂಗಳೂರು:ರಾಜ್ಯಪಾಲರ ಭಾಷಣದ ಮೇಲೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಸದಸ್ಯ ಎಂ.ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಎಂದೂ ಕಂಡುಕೇಳರಿಯದ ಬೇಸರದಾಯಕ ಭಾಷಣ ಇದಾಗಿದೆ. ಬಹಳ ನೀರಸವಾಗಿದ್ದು, ನಿರಾಸೆಯಿಂದ ಕೂಡಿದೆ. ಬಿಜೆಪಿ ಸರ್ಕಾರ ಸತ್ಯಕ್ಕೆ ದೂರವಾದ ಕಾರ್ಯ ಮಾಡಿದೆ. ತಮ್ಮ ಕೆಲ ಕೆಲಸದ ಬಗ್ಗೆ ವಿವರಿಸಿಕೊಂಡ ದೂರದೃಷ್ಟಿ ಇಲ್ಲದ ಭಾಷಣ ಮಾಡಿಸಲಾಗಿದೆ. ಕೆಲ ಸ್ವಾಗತಾರ್ಹ ವಿಚಾರಗಳಿವೆ, ಆದರೆ ಉತ್ತಮ ಅಂಶಗಳು ಕಡಿಮೆ ಇದೆ ಎಂದು ಟೀಕಿಸಿದರು.

ರೈತರ ಸಂಕಷ್ಟಕ್ಕೆ ಬೆಲೆ ಸಿಕ್ಕಿಲ್ಲ. ರೈತರು, ಬಡವರು, ಅಶಕ್ತರ ಪರವಾಗಿದ್ದೀರಿ ಎಂದು ಏಕೆ ಹೇಳುತ್ತೀರಿ. ಸಾಕಷ್ಟು ತಪ್ಪು ಇದೆ. ಸರ್ಕಾರ ಎಲ್ಲಾ ವರ್ಗದ ಜನರ ಬಗ್ಗೆ ಅಸಡ್ಡೆ ಹೊಂದಿದೆ. ಜೀವವಿಮೆ ವಿಚಾರ ಪ್ರಸ್ತಾಪವಾಗಿಲ್ಲ. ಚುನಾವಣೆ ದೃಷ್ಟಿಯಿಂದ ಮಾತ್ರ ಕೆಲ ಘೋಷಣೆ ಮಾಡುವುದು ಸರಿಯಲ್ಲ.

ಗೋ ಸಂರಕ್ಷಣೆ ಚುನಾವಣೆ ಗಿಮಿಕ್: ಗೋ ಸಂರಕ್ಷಣೆ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ್ದೀರಿ. ಹಸುವಿಗೆ ಆಹಾರ ಒದಗಿಸಲು ಸಾಧ್ಯವಾಗದವರು ಗೋಶಾಲೆ ಯಾಕೆ ಮಾಡಿದಿರಿ. ಗೋ ಸಂರಕ್ಷಣೆ ಚುನಾವಣೆ ಗಿಮಿಕ್ ಆಗಿದೆ. ಪಠ್ಯ ಪುಅ್ತಕ ಸರಿಯಾದ ಸಮಯಕ್ಕೆ, ಸಮವಸ್ತ್ರ ಸರಿಯಾಗಿ ಪೂರೈಸದಿದ್ದರೆ ಇಂತಹ ಸರ್ಕಾರದ ಅಗತ್ಯವೇನು ಎಂದು ಪ್ರಶ್ನಿಸಿದರು.

ಸಚಿವ ಬಿ.ಸಿ.ನಾಗೇಶ್ ಮಧ್ಯಪ್ರವೇಶಿಸಿ, ನಾವು ಕೆಲ ಸಂಸ್ಥೆಗೆ ಗುತ್ತಿಗೆ ನೀಡಿದ್ದೇವೆ. ಕಳಪೆ ಗುಣಮಟ್ಟದ ಸಾಧನೆ ವಿತರಿಸಿದರೆ ಅದನ್ನು ವಾಪಸ್ ಪಡೆದಿದ್ದೇವೆ ಎಂದಾಗ, ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಒಬ್ಬರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ನಾಗರಾಜ್ ಒತ್ತಾಯಿಸಿದರು.

ಪ್ರಾಧ್ಯಾಪಕರ ನೇಮಕದಲ್ಲಿ ಅಕ್ರಮ: ಶಿಕ್ಷಕರ ನೇಮಕ ಆಗಿಲ್ಲ. ಕೊರತೆ ನಿವಾರಿಸಬೇಕು. ರಾಜ್ಯಪಾಲರ ಮೂಲಕ ಅಸತ್ಯ ಹೇಳಿಸಲಾಗಿದೆ. ಪ್ರಾಧ್ಯಾಪಕರು, ಕುಲಪತಿ ನೇಮಕದಲ್ಲಿ ಅಕ್ರಮ ಆಗಿದೆ. ಇದನ್ನು ರಾಜ್ಯಪಾಲರು ಪ್ರಶ್ನಿಸಬೇಕಿತ್ತು. ನಮ್ಮ ಕ್ಲಿನಿಕ್ ವಿಚಾರದಲ್ಲಿ ಸರ್ಕಾರದ ಕ್ರಮ ಏನು? ಉತ್ತಮ ವೈದ್ಯಕೀಯ ಸೇವೆ ಸರ್ಕಾರ ನೀಡುತ್ತಿಲ್ಲ. ಖಾಸಗಿಯವರ ದುಬಾರಿ ವೆಚ್ಚ ನಿಯಂತ್ರಿಸಿಲ್ಲ. 40% ಕಮೀಷನ್ ನಿಂದಾಗಿಯೇ ನಗರದ ರಸ್ತೆಗಳು ಇಷ್ಟೊಂದು ಕಳಪೆಯಾಗಿದೆ. ಕಳಪೆ ಕಾಮಗಾರಿಗೆ ನಗರ ರಸ್ತೆ ಸಾಕ್ಷಿ. 25ಕ್ಕೂ ಹೆಚ್ಚು ಜನರು ರಸ್ತೆ ಗುಂಡಿಗೆ ಬಲಿಯಾಗಿದ್ದು ಸಾಕ್ಷಿ. ನಾಗರಿಕ ಜೀವನದ ಬಗ್ಗೆ ಇವರಿಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಸಚೇತಕ ಗೋವಿಂದರಾಜು ಮಾತನಾಡಿ, ಎಲ್ಲ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಎಲ್ಲ ಸಮುದಾಯದವರನ್ನು ಮೆಚ್ಚಿಸಲು 35 ಸಮುದಾಯದ ನಾಯಕರ ಜಯಂತಿ ಆಚರಿಸುತ್ತಿದ್ದೇವೆ. ಇದಕ್ಕೆ ಪೂರ್ವಭಾವಿ ಸಭೆ, ನಾಡ ಹಬ್ಬ ಸಿದ್ಧತೆ ಸೇರಿದಂತೆ ಹಲವು ಕೆಲಸಕ್ಕೆ ಸಭೆ ಆಗಲಿದೆ. ಶೇ.25 ರಷ್ಟು ಸಮಯ ಅಧಿಕಾರಿಗಳ ಕಾಲಾವಧಿ ಇದರಲ್ಲೇ ವ್ಯಯವಾಗಲಿದೆ. ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಸಮಿತಿ ರಚನೆಯಾಗಿ ವರದಿ ಸಲ್ಲಿಕೆಯಾಗಿದೆ. ಅದು ಏನಾಗಿದೆ ಅಂತ ಗೊತ್ತಾಗುತ್ತಿಲ್ಲ. ಉಸ್ತುವಾರಿ ಸಚಿವರು ನಮಗೆ ನಮ್ಮ ಜಿಲ್ಲೆಯವರು ಸಿಗುತ್ತಿಲ್ಲ. ಶಾಸಕರಾಗಿ ಬರುವುದೇ ದುಸ್ತರ, ನನಗಂತೂ ಬೇಸರ ಎನಿಸುತ್ತಿದೆ.

ಬೆಂಗಳೂರಿನ ಕೊಳಚೆ ಕೋಲಾರ ಕೆರೆಗಳಿಗೆ: ಹೈನುಗಾರಿಕೆಗೆ ಕೋಲಾರ ಹೆಸರುವಾಸಿ. ಆದರೆ ಇಂದು ಎಲ್ಲಾ ನಾಶವಾಗುತ್ತಿದೆ. ಬೆಂಗಳೂರಿನ ಕೊಳಚೆ ನೀರನ್ನು ಕೋಲಾರದ ಕೆರೆಗಳಿಗೆ ತುಂಬಲಾಗುತ್ತಿದೆ. ಕೆಸಿ ವ್ಯಾಲಿ ನೀರು ಮೂರನೇ ಹಂತದಲ್ಲಿ ಶುದ್ಧೀಕರಣ ಆಗುತ್ತಿಲ್ಲ. ಇದರಿಂದ ವಾತಾವರಣ ಕೆಡುತ್ತಿದೆ. ಇದನ್ನು ಸರ್ಕಾರ ಸರಿಪಡಿಸಿದರೆ ಉಪಕಾರ ಆಗುತ್ತದೆ ಎಂದರು.

ಕಾಂಗ್ರೆಸ್ ಸದಸ್ಯ ಅರವಿಂದ್ ಕುಮಾರ್ ಅರಳಿ ಮಾತನಾಡಿ, ರಾಜ್ಯಪಾಲರಾಗುವ ಮುನ್ನ ನಾನು ಥಾವರ್ ಚಂದ್ ಗೆಹ್ಲೋಟ್ ಜತೆ ಕಾರ್ಯನಿರ್ವಹಿಸಿದ್ದೆ. ಕಾಳಜಿ ಇದ್ದ ವ್ಯಕ್ತಿ. ಆದರೆ ಈ ಭಾಷಣದಲ್ಲಿ ಸತ್ಯಕ್ಕೆ ದೂರವಾದ ಮಾಹಿತಿ ಭಾಷಣ ಮಾಡಿಸಲಾಗಿದೆ. ಎಸ್ಸಿಪಿ ಟಿಎಸ್ಪಿ ವಿಚಾರದಲ್ಲಿ ಅನ್ಯಾಯವಾಗಿದೆ. ಸರಿಪಡಿಸುವ ಕಾರ್ಯ ಆಗಬೇಕು.

ಜಲಜೀವನ್ ಮಷಿನ್ ಯೋಜನೆ ವಿಫಲ: ಬಾಲ್ಯ ವಿವಾಹ ನಿಂತಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ತಿಳಿಸಲಾಗಿದೆ, ಆದರೆ ವಸ್ತು ಸ್ಥಿತಿ ಹಾಗೆ ಇಲ್ಲ. ಹಿಂದಿನ ಸರ್ಕಾರದ ಸಾಧನೆ ನಮ್ಮದು ಎನ್ನುತ್ತೀರಿ. ಆದರೆ ಯಾವುದೇ ಉತ್ತಮ ಕೆಲಸ ಮಾಡಿಲ್ಲ. ಜಲಜೀವನ್ ಮಷಿನ್ ಯೋಜನೆ ವಿಫಲವಾದೆ, ರಾಜ್ಯಪಾಲರಿಂದ ಸಾಧನೆ ಎಂದು ಹೇಳಿಸುತ್ತೀರಿ. ಅಚ್ಚೇದಿನ್ ಅಂಬಾನಿ, ಅದಾನಿಗೆ ಬಂದಿದೆ.

ಅಡುಗೆ ಅನಿಲ, ತರಕಾರಿ ಬೆಲೆ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಅನುದಾನ ಘೋಷಣೆ ಆಗಿದೆ. ಆದರೆ ಹಣ ಪೂರ್ಣ ಬಿಡುಗಡೆ ಆಗಿಲ್ಲ. ಜಾಹೀರಾತು ಮಾಡುವ ಯಂತ್ರ ಇರಿಸಿಕೊಂಡ ಬೂಟಾಟಿಕೆಯ ಸರ್ಕಾರ ಇದು. ಸುಳ್ಳು ಉತ್ತರ ಕೊಡುವುದು ರೂಢಿಯಾಗಿದೆ.

ರಾಜ್ಯಪಾಲರ ಭಾಷಣಕ್ಕೆ ಸಹಮತವಿಲ್ಲ. ಸಂಪೂರ್ಣ ವಿರೋಧಿಸುತ್ತೇನೆ. ರಾಜ್ಯದ ಸಚಿವರು, ಸಂಸದರೊಬ್ಬರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಅಂಬೇಡ್ಕರ್ ಬಗ್ಗೆ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅವಹೇಳನ ಮಾಡಿದ್ದಾರೆ. ಈ ವಿವಿ ಮಾನ್ಯತೆ ಹಿಂಪಡೆಯಬೇಕು ಎಂದು ತಿಳಿಸಿದರು.

ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಅನಗತ್ಯವಾಗಿ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಲೋಕಾಯುಕ್ತ ಮುಚ್ಚಿ ಎಸಿಬಿ ತಂದು ಕಾಂಗ್ರೆಸ್ ಸರ್ಕಾರ ತಮ್ಮ ಮೇಲೆ ಬಂದ 60 ಪ್ರಕರಣ ಮುಚ್ಚಿಹಾಕಿಕೊಂಡಿರಿ. ಇಂದು ನಾವು ಮತ್ತೆ ಲೋಕಾಯುಕ್ತ ತಂದಿದ್ದೇವೆ. ಗಾಳಿಯಲ್ಲಿ ಗುಂಡು ಹೊಡೆಯುವ ರೀತಿ ಆರೋಪ ಮಾಡುತ್ತಾರೆ.

ಅಭಿವೃದ್ಧಿ ದೃಷ್ಟಿಯಿಂದ ಮಾತನಾಡಲು ಬರುವುದಿಲ್ಲ. ರಾಜ್ಯ ಸ್ವಾತಂತ್ರ್ಯ ಬಂದ 60 ವರ್ಷ ಕಾಣದ ಅಭಿವೃದ್ಧಿಯನ್ನು ಈಗ ಕಂಡಿದೆ. ಜನಧನ್ ಖಾತೆ ಮೂಲಕ ಜನರನ್ನು ಬ್ಯಾಂಕ್ ಮೆಟ್ಟಿಲೇರುವಂತೆ ಮಾಡಿದೆವು. 21 ನೇ ಶತಮಾನ ಭಾರತದ ಶತಮಾನ. ವಿಶ್ವಗುರು ಆಗುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರುವುದೇ ಅಜೆಂಡಾ, ಬೆಳೆಯುತ್ತಿರುವ ಭಾರತವನ್ನು ಗಮನಿಸುತ್ತಿಲ್ಲ.

ಜೆಡಿಎಸ್ ಸ್ಥಿತಿ ಈಗ ಒಂದು ಪರಿವಾರಕ್ಕೆ ಸೀಮಿತವಾಗಿದೆ. ಎಲ್ಲಿ ಗೆಲ್ಲಲು ಸಾಧ್ಯವೋ ಅಲ್ಲಿ ಕುಟುಂಬದವರಿಗೆ ಟಿಕೆಟ್, ಎಲ್ಲಿ ಗೆಲ್ಲುವುದಿಲ್ಲವೋ ಅಲ್ಲಿ ಬೇರೆಯವರಿಗೆ ಟಿಕೆಟ್. ಸದ್ಯ ಜೆಡಿಎಸ್ ಸ್ಥಿತಿ ಮುಂದಿನ ಸ್ಥಿತಿ ಅತಂತ್ರ ಸ್ಥಿತಿ ಆದರೆ ಸಾಕು ಅನ್ನುವಂತಾಗಿದೆ. ದೇಶ ಬದಲಾಗುತ್ತಿದೆ. ಕಾಶ್ಮೀರ ಇದಕ್ಕೆ ಸಾಕ್ಷಿ. ದೇಶಕ್ಕೆ ಒಬ್ಬ ಸರಿಯಾದ ನೇತಾರ ಸಿಕ್ಕಿರುವುದು ಇದಕ್ಕೆಲ್ಲಾ ಕಾರಣ ಎಂದು ತಿಳಿಸಿದರು.

ದಲಿತರ ಪಾಲಿಗೆ‌ ಕಾಂಗ್ರೆಸ್ ಸುಡುವ ಮನೆ: ಬಿಜೆಪಿ ಸದಸ್ಯ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಾಧನೆಗಳು ಪ್ರತಿಪಕ್ಷಕ್ಕೆ ವೇದನೆಯಾಗಿ ಕಾಡುತ್ತಿದೆ. ಆರೋಪ ಮಾಡುವುದು ತಪ್ಪಲ್ಲ. ಆಧಾರ ಇಟ್ಟು ಮಾಡಬೇಕು. ಬಡವರನ್ನು ಸದೃಢ ಮಾಡುವ ಕಾರ್ಯ ಸರ್ಕಾರದಿಂದ ಆಗಿದೆ. ದಲಿತರ ಪಾಲಿಗೆ‌ ಕಾಂಗ್ರೆಸ್ ಸುಡುವ ಮನೆ ಎಂದು ಹೇಳಿದ್ದಾರೆ.

ಸಂವಿಧಾನ ಕೊಟ್ಟ ಆ ಪಿತಾಮಹನನ್ನು ಕಾಂಗ್ರೆಸ್ ಸರ್ಕಾರ ಹೇಗೆ ನಡೆಸಿಕೊಂಡಿತು. ಅವರಿಗೆ ಭಾರತ ರತ್ನ ಕೊಟ್ಟಿಲ್ಲ. ಅವರ ಸಮಾದಿಗೆ ಜಾಗ ಕೊಟ್ಟಿಲ್ಲ. 150 ದೇಶದವರು ಕೊಂಡಾಡುತ್ತಾರೆ, ಅವರಿಗೆ ಸಮಾಧಿಗೆ ಜಾಗ ಸಿಕ್ಕಿಲ್ಲ. ರಾಜ್ಯ ಸರ್ಕಾರ ಅಂಬೇಡ್ಕರ್ ಆಗಮಿಸಿದ್ದ ಸ್ಥಳವನ್ನು ಸ್ಮಾರಕವಾಗಿಸುವ ಕಾರ್ಯ ಈ ಸರ್ಕಾರ ಮಾಡಿದೆ.

ತಳ ಸಮುದಾಯ ಯಾರಿಗೂ ಬೇಕಿಲ್ಲ.ಸಫಾಯಿ ಕರ್ಮಚಾರಿಗಳು ಸ್ವಚ್ಛ ಮಾಡುತ್ತದೆ. ಇವರು ತಮ್ಮ ಕೆಲಸ ಕಾಯಂಗೊಳಿಸಿ ಎಂದು ಬೇಡುತ್ತಿದ್ದರು. ಅದನ್ನು ಬೊಮ್ಮಾಯಿ ಸರ್ಕಾರ ಮಾಡಿದೆ. ಪ್ರನಾಳಿಕೆಯಲ್ಲಿ ಇರುವ ಕೆಲಸ ಮಾಡುವುದು ಮಾತ್ರ ಸಾಧನೆಯಲ್ಲ. ಇಲ್ಲದಿರುವುದನ್ನು ಮಾಡುವುದು ಸಾಧನೆ ಎಂದು ವಿವರಿಸಿದರು. ಬಿಜೆಪಿ ಸದಸ್ಯ ತಳವಾರ್ ಸಾಬಣ್ಣ ಸಹ ರಾಜ್ಯಪಾಲರ ಭಾಷಣದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ:1,250 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ಶೀಘ್ರ: ಸಚಿವ ಡಾ.ಅಶ್ವತ್ಥನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.