ETV Bharat / state

ಸಿದ್ದರಾಮಯ್ಯ ಪರ 'ಎಸ್​​ಬಿಎಂ' ಟೀಂ ಬ್ಯಾಟಿಂಗ್​​!? - kannadanews

ಕಾಂಗ್ರೆಸ್​ನ ಅತೃಪ್ತ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಲು ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅತೃಪ್ತ ಶಾಸಕರಲ್ಲಿ ಸಿದ್ದು ಪರ ಬ್ಯಾಟಿಂಗ್ ಮಾಡುತ್ತಿರುವ ಎಸ್ ಬಿಎಂ ಟೀಂ
author img

By

Published : Jul 7, 2019, 7:55 PM IST

ಬೆಂಗಳೂರು: ಮುಂಬೈನಲ್ಲಿ ಬೀಡು ಬಿಟ್ಟಿರುವ ಬೆಂಗಳೂರಿನ ಕಾಂಗ್ರೆಸ್ ಅತೃಪ್ತ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡುತ್ತಿದ್ದು, ಸಿದ್ದರಾಮಯ್ಯನವರನ್ನ ಮುಖ್ಯಮಂತ್ರಿ ಮಾಡಲು ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂತೆಗೆದುಕೊಳ್ಳಲು ಅತೃಪ್ತರೆಲ್ಲರೂ ಸೇರಿ ದೋಸ್ತಿ ಸರ್ಕಾರದಲ್ಲಿ ಸಿದ್ದರಾಮಯ್ಯರನ್ನು ಸಿಎಂ ಮಾಡಲು ಎರಡೂ ಪಕ್ಷಗಳ ವರಿಷ್ಠರು ಒಪ್ಪುವಂತೆ ಒತ್ತಡ ಹಾಕಲು ಎಸ್​​ಬಿಎಂ ಶಾಸಕರು ಅತೃಪ್ತರನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಮಂಬೈನ ಖಾಸಗಿ ಹೋಟೆಲ್​ನಲ್ಲಿ ತಂಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಮುಂದೆ ಈ ಪ್ರಸ್ತಾಪವನ್ನು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು ಇಟ್ಟಿದ್ದಾರೆನ್ನಲಾಗಿದೆ. ಬೆಂಗಳೂರಿನಲ್ಲಿ ತಂಗಿರುವ ಎಸ್​ಬಿಎಂ ತಂಡದ ಮತ್ತೊಬ್ಬ ಶಾಸಕ ಮುನಿರತ್ನ ಸಹ ಸಿದ್ದು ಪರ ಶಾಸಕರನ್ನ ಸೆಳೆಯುತ್ತಿದ್ದಾರೆಂದು ಹೇಳಲಾಗುತ್ತಿದೆ.

ಮುಂಬೈ ಹೋಟೆಲ್​​ನಲ್ಲಿ ತಂಗಿರುವ ಹೆಚ್ಚಿನ ಶಾಸಕರು ಬಿಜೆಪಿಗೆ ಬೆಂಬಲ ನೀಡುವ ಒಲವನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ರಮೇಶ್​ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ ಅವರು ಬಿಜೆಪಿಗೆ ಸಹಕಾರ ನೀಡುವ ಅಭಿಲಾಷೆ ಹೊಂದಿದ್ದಾರೆಂದು ಹೇಳಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣದ ವಿರುದ್ಧವೇ ಸಿಡಿದು ಬಂದಿರುವ ವಿಶ್ವನಾಥ್ ಸಿದ್ದರಾಮಯ್ಯ ಸಿಎಂ ಆಗಲು ತಮ್ಮ ಬೆಂಬಲ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಸಿದ್ದರಾಮಯ್ಯ ಸಿಎಂ ಮಾಡಲು ಹೆಚ್ಚಿನ ಒಲವು ಮೂಡಿಬರದ ಕಾರಣ ಎಸ್​​ಬಿಎಂ ತಂಡದ ಪರ ಇರುವ ಶಾಸಕರು ಮುಂಬೈನಲ್ಲಿಯೇ ಇರುತ್ತಾರೋ ಅಥವಾ ಬೆಂಗಳೂರಿಗೆ ವಾಪಸ್​ ಬರುತ್ತಾರಾ ಎನ್ನುವ ಪ್ರಶ್ನೆ ಕಾಡತೊಡಗಿದೆ.

Intro: ಅತೃಪ್ತ ಶಾಸಕರಲ್ಲಿ ಸಿದ್ದು ಪರ ಬ್ಯಾಟಿಂಗ್
ಮಾಡುತ್ತಿರುವ " ಎಸ್ ಬಿ ಎಂ " ಟೀಂ..!

ಬೆಂಗಳೂರು : ಮುಂಬೈನಲ್ಲಿ ಬೀಡು ಬಿಟ್ಟಿರುವ ಬೆಂಗಳೂರಿನ ಕಾಂಗ್ರೆಸ್ ಅತೃಪ್ತ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡುತ್ತಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಸಿದ್ದರಾಮಯ್ಯನವರನ್ನ ಮುಖ್ಯಮಂತ್ರಿ ಮಾಡಲು ಲಾಬಿ ಮಾಡುತ್ತಿದ್ದಾರೆನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂತೆಗೆದುಕೊಳ್ಳಲು ಅತೃಪ್ತರೆಲ್ಲರೂ ಸೇರಿ ದೋಸ್ತಿ ಸರಕಾರದಲ್ಲಿ ಸಿದ್ದರಾಮಯ್ಯ ಸಿಎಂ ಮಾಡಲು ಎರಡೂ ಪಕ್ಷಗಳ ವರಿಷ್ಟರು ಒಪ್ಪುವಂತೆ ಒತ್ತಡಹಾಕಲು ಎಸ್.ಬಿ.ಎಂ ತಂಡದ ಶಾಸಕರು ಅತೃಪ್ತರನ್ನು ಒತ್ತಾಯಿಸುತ್ತಿದ್ದಾರೆನ್ನಲಾಗಿದೆ.

Body: ಮಂಬೈನ ಖಾಸಗಿ ಹೋಟೆಲಿನಲ್ಲಿ ತಂಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಮುಂದೆ ಈ ಪ್ರಸ್ಥಾಪ ವನ್ನು ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜು ಇಟ್ಟಿದ್ದಾರೆನ್ನಲಾಗಿದೆ. ಬೆಂಗಳೂರಿನಲ್ಲಿ ತಂಗಿರುವ ಎಸ್.ಬಿ.ಎಂ ತಂಡದ ಮತ್ತೊಬ್ಬ ಶಾಸಕ ಮುನಿರತ್ನ ಸಹ ಸಿದ್ದು ಪರ ಶಾಸಕರನ್ನ ಸೆಳೆಯುತ್ತಿದ್ದಾರೆಂದು ತಿಳಿದುಬಂದಿದೆ.

ಮುಂಬೈ ಹೋಟೆಲಿನಲ್ಲಿ ತಂಗಿರುವ ಹೆಚ್ಚಿನ ಶಾಸಕರು ಬಿಜೆಪಿಗೆ ಬೆಂಬಲ ನೀಡುವ ಒಲವನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ರಮೇಶ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ ಅವರು ಬಿಜೆಪಿ ಸರಕಾರಕ್ಕೆ ಸಹಕಾರ ನೀಡುವ ಅಭಿಲಾಷೆ ಹೊಂದಿದ್ದಾರೆಂದು ಹೇಳಲಾಗಿದೆ.

ಬೆಂಗಳೂರಿನ ಎಸ್.ಬಿಎಂ . ತಂಡದ ಶಾಸಕರ ಹಿಸ ಪ್ರಸ್ಥಾಪದ ಬಗ್ಗೆ ಜೆಡಿಎಸ್ನ ಹಿರಿಯ ಶಾಸಕ ವಿಶ್ವನಾಥ್ ಸಹ ಬಲವಾದ ವಿರೋಧ ವ್ಯಕ್ಪಡಿಸಿದ್ದಾರೆನ್ನಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣದ ವಿರುದ್ದವೇ ಸಿಡಿದು ಬಂದಿರುವ ವಿಶ್ವನಾಥ್ ಸಿದ್ದರಾಮಯ್ಯ ಸಿಎಂ ಆಗಲು ತಮ್ಮಬೆಙನಲ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

Conclusion: ಅತೃಪ್ತರ ಗುಂಪಿನಲ್ಲಿ ಸೇರಿಕೊಂಡು ಒಳಗೊಳಗೆ ಸಿದ್ದರಾಮಯ್ಯನವರ ಪರ ಲಾಬಿ ಮಾಡುತ್ತಿ ರುವುದಕ್ಕೆ ಕೆಲವರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್ ಬಿ ಎಂ ಶಾಸಕರಿಂದ ರಹಸ್ಯ ವಿಷಯಗಳಲ್ಲಿ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆನ್ನಲಾಗಿದೆ.

ಜೆಡಿಸ್ ಪಾಳಯದ ಅತೃಪ್ತ ಶಾಸಕರಿಂದಲೂ ಸಿದ್ದರಾಮಯ್ಯ ನವರನ್ನು ಸಿಎಂ ಮಾಡಲು ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಸಿಎಂ ಮಾಡಲು ಹೆಚ್ಚಿನ ಒಲವು ಮೂಡಿಬರದ ಕಾರಣ ಎಸ್.ಬಿ .ಎಂ ಶಾಸಕರು ಮುಂಬೈನಲ್ಲಿಯೇ ಇರುತ್ತಾರೋ ಅಥವಾ ಬೆಂಗಳೂರಿಗೆ ವಾಪಾಸು ಬರುತ್ತಾ ರಾ.ಎನ್ನುವ ಪ್ರಶ್ನೆ ಕಾಡತೊಡಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.