ETV Bharat / state

ಗಂಭೀರ ತನಿಖೆಗೆ ಒಳಗಾಗಿರುವ ಭೂಗತ ಪಾತಕಿ ರವಿ ಪೂಜಾರಿ! - ravi poojary latest news

ಭೂಗತ ಲೋಕದ ಅನಾವರಣ ಬಿಚ್ಚಿಟ್ಟ ರವಿ ಪೂಜಾರಿಯನ್ನ ಸದ್ಯ ಸಿಸಿಬಿ ಹಿರಿಯ ಅಧಿಕಾರಿಗಳು ಗಂಭೀರ ತನಿಖೆ ಕೈಗೊಂಡಿದ್ದು, ಹಲವು ಮಾಹಿತಿ ತಿಳಿದು ಬಂದಿದೆ.

underworld criminal Ravi Poojary is under serious investigation!
ಭೂಗತ ಪಾತಕಿ ರವಿ ಪೂಜಾರಿ
author img

By

Published : Feb 27, 2020, 6:11 PM IST

ಬೆಂಗಳೂರು: ಭೂಗತ ಲೋಕದ ಅನಾವರಣ ಬಿಚ್ಚಿಟ್ಟ ರವಿ ಪೂಜಾರಿಯನ್ನ ಸದ್ಯ ಸಿಸಿಬಿ ಹಿರಿಯ ಅಧಿಕಾರಿಗಳು ಗಂಭೀರ ತನಿಖೆ ಕೈಗೊಂಡಿದ್ದಾರೆ.

ಆತನ ಹೇಳಿಕೆಯನ್ನ ವಿಡಿಯೋ ಚಿತ್ರೀಕರಣ ಮಾಡ್ತಿದ್ದು, ಪ್ರತೀ ಹಂತದ ಮಾಹಿತಿ ಕಲೆ ಹಾಕ್ತಿದ್ದಾರೆ. ರವಿ ಪೂಜಾರಿ ಮಲ್ಪೆಯಿಂದ ಸೆನೆಗಲ್​ವರೆಗೆ ಹೋಗಿ ಅದರ ನಡುವೆ ಯಾರಿಗೆಲ್ಲ ಬೆದರಿಕೆ ಹಾಕಿದ್ದಾನೆ, ಯಾವುದೆಲ್ಲಾ ಕೊಲೆ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಅನ್ನೋ ವಿಚಾರ ತಿಳಿಸಿದ್ದಾನೆ. ಇನ್ನು, ರವಿ ಪೂಜಾರಿ ತಾಯಿ ಮಲ್ಪೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದಾರೆ, ಹೆಂಡತಿ ಸೆನಗಲ್ ಬಳಿ‌ ಇರುವ‌ ಮಾಹಿತಿ ತಿಳಿಸಿದ್ದಾನೆ.

ಅಲ್ಲದೇ, ಎಲ್ಲೆಲ್ಲಿ ಆಸ್ತಿ ಪಾಸ್ತಿಗಳನ್ನು ಹೊಂದಿದ್ದಾನೆ ಅನ್ನೋದರ ಮಾಹಿತಿಯನ್ನ ಕೂಡಾ ಸಿಸಿಬಿ ಅಧಿಕಾರಿಗಳು ಪಡೆಯುತ್ತಿದ್ದಾರೆ. ರವಿ‌ ಪೂಜಾರಿ ಹಲವು ಮಂದಿಯಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ, ಹೀಗಾಗಿ ಆಸ್ತಿಯ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಆತನ ಆರೋಗ್ಯದಲ್ಲಿ ಏರು-ಪೇರು ಇದೆ ಎಂದು ವಕೀಲರು ನ್ಯಾಯಾಲಯಕ್ಕೆ ಹೇಳಿರುವ ಹಿನ್ನೆಲೆ ಮಡಿವಾಳದ ಎಫ್​ಎಸ್​ಎಲ್​ ಕಚೇರಿ ಬಳಿ ಸಕ್ಕರೆ ಕಾಯಿಲೆ ಹಾಗೂ ಹೃದಯ ಸಂಬಂಧಿ ಸಮಸ್ಯೆಯ ಕುರಿತು ಚಿಕಿತ್ಸೆಗೊಳಪಡಿಸಿದ್ದಾರೆ. ಸದ್ಯ ರವಿ ಪೂಜಾರಿ ಹಲವರಿಗೆ ಬೆದರಿಕೆ ಹಾಕಿರುವ ಕಾರಣ ಮಡಿವಾಳದ ಎಫ್​ಎಸ್ಎಲ್​ನಲ್ಲಿ ಧ್ವನಿ ಪರೀಕ್ಷೆಯನ್ನ ಕೂಡ ನಡೆಸಲಾಗಿದೆಯೆಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.