ETV Bharat / state

ಪ್ರಾಚೀನ ಜ್ಞಾನ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ: ನ್ಯಾಕ್ ಅಧ್ಯಕ್ಷ ಡಾ.ಅನಿಲ್ ಸಹಸ್ರಬುದ್ದೆ - Etv Bharat Kannada News

ಚಾಣಕ್ಯ ವಿಶ್ವವಿದ್ಯಾಲಯದಿಂದ ಭಾರತೀಯ ಜ್ಞಾನ ವ್ಯವಸ್ಥೆಗಳ ಕುರಿತು ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜನೆಗೊಂಡಿದೆ.

NAC President Dr Anil Sahasrabudde
ನ್ಯಾಕ್ ಅಧ್ಯಕ್ಷ ಡಾ.ಅನಿಲ್ ಸಹಸ್ರಬುದ್ದೆ
author img

By

Published : Mar 16, 2023, 10:20 PM IST

ಬೆಂಗಳೂರು: ಭಾರತೀಯ ಜ್ಞಾನ ವ್ಯವಸ್ಥೆಗಳಲ್ಲಿ ಹಲವು ಅಂಶಗಳನ್ನು ಒಟ್ಟುಗೂಡಿವೆ. ವಿಭಿನ್ನ ಜನರು ಭಾರತೀಯ ಸಂಸ್ಕೃತಿಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅವರು ಅದನ್ನು ಪ್ರಾಚೀನ ಜ್ಞಾನ ಎಂದೂ ಕರೆಯುತ್ತಾರೆ. ಆದ್ದರಿಂದ ಈ ಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ನ್ಯಾಕ್ ಅಧ್ಯಕ್ಷ ಡಾ.ಡಾ.ಅನಿಲ್ ಸಹಸ್ರಬುದ್ದೆ ಹೇಳಿದರು. ಜಯನಗರದ ಯುವಪಥ ಸಭಾಂಗಣದಲ್ಲಿ ಚಾಣಕ್ಯ ವಿಶ್ವವಿದ್ಯಾಲಯದಿಂದ ಆಯೋಜಿತವಾಗಿರುವ ಭಾರತೀಯ ಜ್ಞಾನ ವ್ಯವಸ್ಥೆಗಳ ಕುರಿತು ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಡಾ.ಅನಿಲ್ ಸಹಸ್ರಬುದ್ದೆ ಭಾರತೀಯ ಜ್ಞಾನ ವ್ಯವಸ್ಥೆ ಬಹಳ ವಿಸ್ತಾರವಾಗಿದೆ. ಇದರ ಬಗ್ಗೆ ಜನರಿಗೂ ತುಂಬಾ ತಿಳಿವಳಿಕೆ ಇದೆ. ಆದ್ದರಿಂದ ಈ ಕುರಿತ ಕೋರ್ಸ್​ಗಳು ಕೂಡ ಬಹು ಆಯಾಮವನ್ನು ಹೊಂದಿ ಶಿಸ್ತುಬದ್ಧವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಮ್ಮೇಳನಕ್ಕೆ ಪ್ರಾರಂಭದಲ್ಲಿ 72 ಪ್ರಬಂಧಗಳು ಮಾತ್ರ ನೋಂದಣಿಯಾಗಿತ್ತು, ಬಳಿಕ 29 ಸಂಶೋಧಕರು 8000 ಪದಗಳನ್ನು ಒಳಗೊಂಡ ಪ್ರಬಂಧಗಳನ್ನು ಕಳುಹಿಸಿದ್ದಾರೆ. ವಿಶ್ವವಿದ್ಯಾನಿಲಯ ಒಂದು ಕೋರ್ಸ್ ಮುಗಿಸುವ ಮುನ್ನ ಪ್ರಾಚೀನ ಸಂಸ್ಕೃತಿಯ ಸಾರವನ್ನು ತಿಳಿಸಲು ಪ್ರಯತ್ನಿಸುತ್ತಿರುವ ಈ ಸಮ್ಮೇಳನವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಿರುವುದೇ ಆಶ್ಚರ್ಯ ಎನಿಸುತ್ತಿದೆ ಎಂದರು.

ಸಂಸ್ಕೃತದಲ್ಲಿ ಲಭ್ಯವಿರುವ ಮಾಹಿತಿಯನ್ನು ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸಲು ಮುಂದಾಗಿರುವ ಈ ಸಮ್ಮೇಳನಕ್ಕೆ ನಾಲ್ಕು ಪ್ರಮುಖ ಸಂಸ್ಥೆಗಳಾದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯ, ಶಿಕ್ಷಣ ಸಚಿವಾಲಯ, ಭಾರತೀಯ ಜ್ಞಾನ ವಿಜ್ಞನಗಳ ವಿಭಾಗ ಎ.ಐ.ಸಿ.ಟಿ.ಇ ಮತ್ತು ಚಾಣಕ್ಯ ವಿಶ್ವವಿದ್ಯಾಲಯ ಕೊಡುಗೆ ನೀಡುತ್ತಿವೆ ಎಂದು ಅವರು ಇದೇ ವೇಳೆ ಹೇಳಿದರು.

ಭಾರತ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಸಮ್ಮೇಳನ ಭಾರಿ ಮಹತ್ವ ಪಡೆದುಕೊಂಡಿದೆ. ಮುಂದಿನ 25 ವರ್ಷಗಳ ಸ್ವಾವಲಂಬನೆಗೆ ದಾಪುಗಾಲಿಟ್ಟಿರುವ ಈ ಅಮೃತಕಾಲದಲ್ಲಿ ಸಂಸ್ಕೃತ ಆಡಳಿತ ಮತ್ತು ಚಾಣಕ್ಯನ ಕುರಿತು ಇನ್ನು ಎರಡು ಸಮ್ಮೇಳನ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಜಿ20 ಮತ್ತು ಶಾಂಘೈ ಕಮಿಟಿಯ ನಾಯಕತ್ವ ಈಗ ಭಾರತ ವಹಿಸುತ್ತಿದೆ. ಈ ಸಂದರ್ಭದಲ್ಲಿ ಚಾಣಕ್ಯ ವಿಶ್ವವಿದ್ಯಾಲಯದ ಉಪಕ್ರಮಗಳು ಸಮಾಜವನ್ನು ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು.

ಈ ಸಮ್ಮೇಳನ ಕುರಿತು ನನಗೆ ಹಲವು ಪ್ರಶ್ನೆಗಳಿದ್ದವು: ಇನ್ನು ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಾಣಕ್ಯ ವಿಶ್ವವಿದ್ಯಾಲಯದ ಉಪಕುಲಪತಿ ಯಶವಂತ ಡೋಂಗ್ರೆ ಅವರು, ನಮ್ಮ ಸಂಸ್ಥೆಯು ಬೆಂಗಳೂರಿನಿಂದ ಸುಮಾರು 30 ಕಿಮೀ ದೂರದಲ್ಲಿದೆ. ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ ಎಂದು ಮಾಹಿತಿ ನೀಡಿದರು. ನಮ್ಮ ಪ್ರಾಚೀನ ಸಂಸ್ಕೃತಿಯ ಜ್ಞಾನವನ್ನು ಹೊರಹಾಕಲು ವಿವಿಧ ನ್ಯೂನತೆಗಳು ಮತ್ತು ಸವಾಲುಗಳಿವೆ. ಕಳೆದ ವರ್ಷ ನಾನು ವಿಶ್ವವಿದ್ಯಾಲಯದ ಕಚೇರಿಯನ್ನು ಪ್ರವೇಶಿಸಿದಾಗ ನಾನು ಭಾರತೀಯ ಜ್ಞಾನ ವ್ಯವಸ್ಥೆಗಳ ಕುರಿತಾದ ಸಮ್ಮೇಳನದ ಪೋಸ್ಟರ್ ನೋಡಿದ್ದು. ಈ ಸಮ್ಮೇಳನವು ಹೇಗೆ ಹೊರಹೊಮ್ಮುತ್ತದೆ, ಮೂಡಿಬರುತ್ತದೆ ಎಂಬುದರ ಕುರಿತು ನನಗೆ ಹಲವು ಪ್ರಶ್ನೆಗಳಿದ್ದವು ಎಂದರು.

ಇದೀಗ ಸಮ್ಮೇಳನವು ಸರಿಯಾದ ರೀತಿಯಲ್ಲಿ ಪ್ರಾರಂಭವಾಗಿದೆ. ಯಾವುದೇ ಉತ್ಪನ್ನ ಅಥವಾ ಪರಿಕಲ್ಪನೆಯು ವ್ಯಾಪಕವಾದ ಸಂಶೋಧನೆಯೊಂದಿಗೆ ಹೊರ ಬರುತ್ತದೆ. ಸಂಶೋಧನೆ ಇಲ್ಲದಿದ್ದರೆ ದೀರ್ಘಕಾಲ ಉಳಿಯುವುದಿಲ್ಲ. ನಮ್ಮ ಪುರಾತನ ಸಂಸ್ಕೃತಿಯು ಹಲವಾರು ಸಂಶೋಧನೆಗಳನ್ನು ಒಳಗೊಂಡಿದೆ. ಈಗ ಚಾಣಕ್ಯ ವಿಶ್ವವಿದ್ಯಾನಿಲಯದಲ್ಲಿ ನಾವು ಅದನ್ನು ಹೊರತರಲು ಪ್ರಯತ್ನಿಸುತ್ತಿದ್ದೇವೆ. ಈ ವಿಷಯಗಳ ಕುರಿತ ಕೋರ್ಸ್‌ಗಳನ್ನು ಸಹ ರೂಪಿಸಲಾಗಿದೆ ಎಂದು ಹೇಳಿದರು.

ಪಠ್ಯಕ್ರಮದ ವಿನ್ಯಾಸವನ್ನು ಭಾರತೀಯ ಜ್ಞಾನ ವ್ಯವಸ್ಥೆಗಳ ಕೇಂದ್ರದಿಂದ ರೂಪಿಸಲಾಗಿದೆ. ಸವಾಲಿರುವುದು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಭೋದಿಸುವುದಾಗಿದೆ. ನಮ್ಮ ವಿಶ್ವವಿದ್ಯಾನಿಲಯವು ಕೇವಲ ಒಂದು ಸೆಮಿಸ್ಟರ್ ಅನ್ನು ಮುಗಿಸುತ್ತಿದೆ. ಆದರೂ ಈಗಾಗಲೇ ವಿವಿಧ ರೀತಿಯ ವಿಮರ್ಶೆಗಳು ಮತ್ತು ಚರ್ಚೆಗಳು ನಿರಂತರವಾಗಿ ನಡೆಸುತ್ತಿದ್ದೇವೆ ಮತ್ತು ಅದನ್ನು ಪ್ರಸ್ತುತವಾಗಿಸಲು ಕಾರ್ಯೋನ್ಮುಖವಾಗಿದ್ದೇವೆ ಎಂದು ಯಶವಂತ ಡೋಂಗ್ರೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಐಕೆಎಸ್ ವಿಭಾಗದ ನಿರ್ದೇಶಕ ಡಾ.ಗಂಟಿ ಸೂರ್ಯನಾರಾಯಣ, ಚಾಣಕ್ಯ ವಿಶ್ವವಿದ್ಯಾಲಯದ ಡೀನ್ (ಸಂಶೋಧನೆ) ಪ್ರೊ.ಹೆಚ್.ಎಸ್.ಅಶೋಕ್ ಉಪಸ್ಥಿತರಿದ್ದರು.

ಇದನ್ನೂ ಓದಿ :ಬೆಂಗಳೂರಿಗೆ 2023ರ ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ ಗರಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.