ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಈ ಸಡಗರದಲ್ಲಿ ಸುರಕ್ಷತೆ ಕಡೆಗೆ ಗಮನ ಹರಿಸುವುದಿಲ್ಲ. ಪರಿಣಾಮ, ಪಟಾಕಿಯಿಂದ ಅನಾಹುತಗಳು ನಡೆಯುತ್ತವೆ. ಅದರಲ್ಲೂ ಮಕ್ಕಳೇ ಹೆಚ್ಚಾಗಿ ತೊಂದರೆಗೆ ಒಳಗಾಗುತ್ತಾರೆ.
ವರ್ಷದಿಂದ ವರ್ಷಕ್ಕೆ ಪಟಾಕಿ ಕುರಿತು ಜಾಗೃತಿ ಮೂಡಿರುವುದರಿಂದ ಮಕ್ಕಳು ಪಟಾಕಿ ಹೊಡೆಯುವ ಪ್ರಮಾಣ ಕಡಿಮೆಯಾಗಿದೆ. ಈ ನಡುವೆ ಅಲ್ಲೊಂದು ಇಲ್ಲೊಂದು ಪಟಾಕಿ ಅನಾಹುತ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ಬಾರಿಯೂ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಪಟಾಕಿ ಸಿಡಿದು ಅಪಾಯಕ್ಕೆ ಒಳಗಾಗಿದ್ದಾರೆ.
ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಈವೆರೆಗೆ 7 ಪ್ರಕರಣಗಳು ವರದಿಯಾಗಿದ್ದು, 11 ವರ್ಷದೊಳಗಿನ ಬಾಲಕರೆ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಇದರಲ್ಲಿ ತಾವೇ ಪಟಾಕಿ ಹೊಡೆಯಲು ಹೋಗಿ ಕೆಲವರು ಹಾನಿ ಮಾಡಿಕೊಂಡಿದ್ದರೆ, ಮತ್ತೆ ಕೆಲವು ಪ್ರಕರಣಗಳಲ್ಲಿ ಬೇರೆಯವರು ಹೊಡೆದ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿದೆ. ಆಸ್ಪತ್ರೆಯಲ್ಲಿ 6 ವರ್ಷದ ಇಬ್ಬರು ಮಕ್ಕಳು ಕೂಡ ಇದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 3 ಪ್ರಕರಣ ದಾಖಲು:
ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಹಾನಿ ಹಿನ್ನೆಲೆಯಲ್ಲಿ 30 ವರ್ಷದ ಮಹಿಳೆ, 11 ವರ್ಷದ ಬಾಲಕ ಹಾಗು 8 ವರ್ಷದ ಬಾಲಕಿ ಆಸ್ಪತ್ರೆಗೆ ದೌಡಯಿಸಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಸದ್ಯ ಸಣ್ಣಪುಟ್ಟ ಗಾಯಗಳಾಗಿರುವುದರಿಂದ ಕಣ್ಣುಗಳಿಗೆ ಹೆಚ್ಚಿನ ಹಾನಿ ಆಗಿಲ್ಲ. ಹೀಗಾಗಿ ಎಲ್ಲರನ್ನೂ ಡಿಸ್ಚಾರ್ಜ್ ಮಾಡಲಾಗಿದೆ.
ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ವಿವರ:
1) ಪಾದರಾಯನಪುರ- 11 ವರ್ಷದ ಬಾಲಕ- ಆಟಂ ಬಾಂಬ್ ಸಿಡಿದು ಕಣ್ಣಿಗೆ ಹಾನಿ
2) ಬಸವನಗುಡಿ- 9 ವರ್ಷದ ಬಾಲಕ - ಹೂ ಕುಂಡ ಪಟಾಕಿ ಸಿಡಿದು ಕಣ್ಣಿನ ರೆಪ್ಪೆ, ಸುತ್ತಲೂ ಹಾನಿ
3) ದೊಡ್ಡತಲಸಂದ್ರ- 6 ವರ್ಷದ ಬಾಲಕ - ಹೂ ಕುಂಡ ಪಟಾಕಿ ಸಿಡಿದು ಸಣ್ಣ ಹಾನಿ
4) ಕನಕಪುರದ- 9 ವರ್ಷದ ಬಾಲಕ- ಬಿಜಿಲಿ ಪಟಾಕಿ ಯಿಂದ ಕಣ್ಣಿಗೆ ಹಾನಿ
5) ನಾಗರಬಾವಿ- 6 ವರ್ಷದ ಬಾಲಕನಿಗೆ ಪಟಾಕಿಯಿಂದ ಹಾನಿ
6) ರಾಮನಗರದ- 11 ವರ್ಷದ ಬಾಲಕನಿಗೆ ಪಟಾಕಿಯಿಂದ ಹಾನಿ
7) ಚಾಮರಾಜಪೇಟೆ 7 ವರ್ಷದ ಬಾಲಕನಿಗೆ ಪಟಾಕಿಯಿಂದ ಹಾನಿಯಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.