ETV Bharat / state

ಲಾಕ್​ಡೌನ್​​ನಲ್ಲಿ ತಂಬಾಕು ಸಿಗದಿರುವುದು ವ್ಯಸನಮುಕ್ತರಾಗಲು ಸೂಕ್ತ ಸಮಯ: ಮನೋವೈದ್ಯ - lockdown

ಕೊರೊನಾ ಲಾಕ್​ಡೌನ್​ ಹಿನ್ನೆಲೆ ತಂಬಾಕು ಮತ್ತಿತರ ವ್ಯಸನಿಗಳಿಗೆ ಅವುಗಳ ಅಲಭ್ಯತೆ ಎದುರಾಗಿದೆ. ಹೀಗಾಗಿ ಇದು ವ್ಯಸನಮುಕ್ತರಾಗಬೇಕು ಎಂಬುವವರಿಗೆ ಸೂಕ್ತ ಸಮಯ ಎಂದು ಮನೋವೈದ್ಯ ಡಾ. ಜಗದೀಶ್ ಹೇಳಿದ್ದಾರೆ.

tobbacco
tobbacco
author img

By

Published : May 31, 2021, 3:29 PM IST

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಲಾಕ್​ಡೌನ್​​ ಇರುವ ಹಿನ್ನೆಲೆಯಲ್ಲಿ ಸಿಗರೇಟ್ ಹಾಗೂ ಇನ್ನಿತರ ವ್ಯಸನ ಪದಾರ್ಥಗಳು ಲಭ್ಯತೆ ಕಷ್ಟವಾಗಿದೆ. ಹೀಗಾಗಿ ಇದು ವ್ಯಸನ ಮುಕ್ತರಾಗಲು ಸೂಕ್ತ ಸಮಯ ಎಂದು ಮನೋವೈದ್ಯ ಡಾ. ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಂಬಾಕು ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ವ್ಯಾಸನಿಗಳಿಗೂ ಗೊತ್ತಿರುವ ವಿಷಯ, ಆದರೂ ತಂಬಾಕು ಮತ್ತಿತರ ವ್ಯಸನಗಳನ್ನು ತ್ಯಜಿಸಲು ನಿರಾಕರಿಸುತ್ತಾರೆ. ನಾನು ಕಡಿಮೆ ಸಿಗರೇಟ್​ ಸೇದುತ್ತೇನೆ ಅಥವಾ ನನಗೆ ಅಷ್ಟು ವ್ಯಸನವಿಲ್ಲ ಎಂಬ ತಪ್ಪು ಭಾವನೆಯಲ್ಲಿ ಇರುತ್ತಾರೆ. ಹೀಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ವ್ಯಸನದಿಂದ ಮುಕ್ತಿ ಹೊಂದಲು ಈಗ ಅವುಗಳ ಕೊರತೆ ಉಂಟಾಗಿರುವುದು ಸುವರ್ಣಾವಕಾಶ ಎನ್ನುತ್ತಾರೆ ಮನೋವೈದ್ಯರು.

ಅವುಗಳನ್ನು ತ್ಯಜಿಸಿದ ಮೇಲೆ ಆರೋಗ್ಯದ ಮೇಲೆ ಏನಾದ್ರು ಪರಿಣಾಮ ಆಗಲಿದೆಯೇ?

ಈ ಪ್ರಶ್ನೆಗೆ ಡಾ ಜಗದೀಶ್ ಉತ್ತರಿಸಿ, ಮದ್ಯಪಾನ ಬಿಟ್ಟ ನಂತರ ಕೆಲ ಪರಿಣಾಮ ದೇಹದಲ್ಲಿ ಕಾಣಬಹುದು, ಆದರೆ, ತಂಬಾಕು ವ್ಯಸನ ಬಿಟ್ಟ ನಂತರ ಯಾವುದೇ ಪರಿಣಾಮ ಇರುವುದಿಲ್ಲ. ತಂಬಾಕು ಬೇಕು ಎಂಬ ಬಯಕೆ ಬರಬಹುದು. ಆದರೆ, ದೇಹದಲ್ಲಿ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಆ ರೀತಿ ಪರಿಣಾಮ ಆದರೆ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆಗೆ ಹೋಗಬಹುದು ಎಂದು ಇವರು ಸಲಹೆ ನೀಡಿದರು.

ಒಟ್ಟಾರೆ ₹5 - 6 ಸಿಗರೇಟ್ ಹಾಗೂ ₹10 ರೂಪಾಯಿ ಗುಟ್ಕಾ ಬೆಲೆ ಉತ್ಪನ್ನಗಳ ಮೇಲೆ ಹೆಚ್ಚಾಗಿವೆ. ಲಾಕ್​ಡೌನ್ ಆರ್ಥಿಕ ಪರಿಸ್ಥಿತಿ ಸುಧಾರಣೆ ಹಾಗೂ ಆರೋಗ್ಯದ ಮೇಲೆ ಕಾಳಜಿಗೆ ತಂಬಾಕು ವ್ಯಸನದಿಂದ ಮುಕ್ತರಾಗಬೇಕು ಎಂಬುದೇ ನಮ್ಮ ಕಳಕಳಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.