ಬೆಂಗಳೂರು: ಅಮಲಿನ ಔಷಧಿಗಳನ್ನು ಅನಧಿಕೃತವಾಗಿ ಮಾರಾಟ ಮಾಡುವ ಔಷಧಾಲಯಗಳ ವಿರುದ್ಧ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳೊಂದಿಗೆ ಕೇಂದ್ರ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದಾರೆ.
ಇತ್ತೀಚೆಗೆ ಮಲ್ಲೇಶ್ವರಂ ಬಳಿ ಅನಧಿಕೃತವಾಗಿ ಹೆಚ್ಚು ಡೋಸೇಜ್ ಹೊಂದಿದ್ದ ಔಷಧಿಗಳನ್ನ ಮಾರಾಟ ಮಾಡಿದ ಕಾರಣ ವಿದ್ಯಾರ್ಥಿಗಳು ಮೃತ ಹೊಂದಿದ್ದ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗ ಪೊಲೀಸರು ಕಾರ್ಯಾಚರಣೆಗೆ ಇಳಿದು ಆಸ್ಟಿನ್‌ಟೌನ್, ವಿವೇಕನಗರ, ನೀಲಸಂದ್ರ, ಈಜಿಪುರ, ಆನೇಪಾಳ್ಯ, ವಸಂತನಗರ, ವೈಯಾಲಿಕಾವಲ್, ಶೇಷಾದ್ರಿಪುರಂ ಪ್ರದೇಶಗಳಲ್ಲಿನ ಸುಮಾರು 24 ಮೆಡಿಕಲ್ ಗಳನ್ನು ಡ್ರಗ್ ಇನ್ಸ್‌ಪೆಕ್ಟರ್‌ಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ವೈದ್ಯರ ಸಲಹಾ ಚೀಟಿ ಇಲ್ಲದೇ ಯುವಕರಿಗೆ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಎಸ್.ಟಿ.ಮೆಡಿಕಲ್ ಹಾಗೂ ಸೌಭಾಗ್ಯ ಮೆಡಿಕಲ್ ಮಾಲೀಕರ ವಿರುದ್ಧ ಡ್ರಗ್ ಮತ್ತು ಕಾಫೈಟಿಕ್ ಆಕ್ಸ್ ಉಲ್ಲಂಘನೆ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.