ETV Bharat / state

ವಿಧಾನಸಭಾ ಉಪ ಚುನಾವಣೆ: ಪುತ್ರನ ಪರ ಉಮೇಶ್​ ಜಾಧವ್ ಲಾಬಿ

ಇಂದು ಬೆಳಗ್ಗೆ ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಿದ ಉಮೇಶ್ ಜಾಧವ್, ಪುತ್ರನಿಗೆ ಟಿಕೆಟ್ ಕೊಡಿಸಿದರೆ ಕುಟುಂಬದಲ್ಲಿ ವೈಶಮ್ಯ ಆಗುವ ಭೀತಿ ಇದೆ. ಆದರೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಪುತ್ರ ಅವಿನಾಶ್​ಗೆ ಟಿಕೆಟ್ ಸಿಕ್ಕರೆ ಉತ್ತಮ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ.

author img

By

Published : Apr 26, 2019, 4:42 PM IST

ಮುಂದುವರೆದ ಟಿಕೆಟ್ ಲಾಭಿ

ಬೆಂಗಳೂರು: ಎರಡು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್​ಗೆ ಕಳುಹಿಸಿಕೊಟ್ಟರೂ ಪಕ್ಷದಲ್ಲಿ ಲಾಬಿ ನಿಂತಿಲ್ಲ. ಜಾಧವ್ ಹಾಗೂ ವಲ್ಯಾಪುರೆ ನಡುವೆ ಫೈಟ್ ಇನ್ನೂ ಮುಂದುವರೆದಿದೆ. ಟಿಕೆಟ್​ಗಾಗಿ‌ ಕೊನೆ ಕ್ಷಣದ ಕಸರತ್ತು ನಡೆಸಲಾಗುತ್ತಿದೆ.

ಇಂದು ಬೆಳಗ್ಗೆ ಬಿಎಸ್ವೈ ನಿವಾಸಕ್ಕೆ ಭೇಟಿ ನೀಡಿದ ಉಮೇಶ್ ಜಾಧವ್, ಪುತ್ರನಿಗೆ ಟಿಕೆಟ್ ಕೊಡಿಸಿದರೆ ಕುಟುಂಬದಲ್ಲಿ ವೈಶಮ್ಯ ಆಗುವ ಭೀತಿ ಇದೆ. ಆದರೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಪುತ್ರ ಅವಿನಾಶ್​ಗೆ ಟಿಕೆಟ್ ಸಿಕ್ಕರೆ ಉತ್ತಮ ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ. ಮತ್ತೊಂದೆಡೆ ಸಹೋದರ ರಾಮಚಂದ್ರನ್ ಜಾಧವ್ ಕೂಡ ಇದ್ದಾರೆ. ಹೀಗಾಗಿ ಇಂದು ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಮುಂದುವರೆದ ಟಿಕೆಟ್ ಲಾಭಿ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಜಾಧವ್, ಚಿಂಚೋಳಿ ಉಪ ಚುನಾವಣೆಯಲ್ಲಿ‌ ಅಭ್ಯರ್ಥಿ ಆಯ್ಕೆ ಸಂಬಂಧ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ‌. ಜನರ ಒಲವು ಯಾರಿಗೆ ಹೆಚ್ಚಿದೆಯೋ ಅವರಿಗೆ ಟಿಕೆಟ್ ನೀಡುವಂತೆ ಹೇಳಿದ್ದೇನೆ. ಸಹೋದರ ರಾಮಚಂದ್ರ ಜಾಧವ್ ಅಥವಾ ಪುತ್ರ ಅವಿನಾಶ್ ಜಾಧವ್ ಸೇರಿದಂತೆ ಯಾರಿಗೆ ಬೇಕಾದರೂ ಪಕ್ಷ ಟಿಕೆಟ್ ಕೊಡಬಹುದು. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಸಿಗಬೇಕು ಅಷ್ಟೇ ಎಂದರು.

ನಮ್ಮ ಚುನಾವಣೆ ಚೆನ್ನಾಗಿ ಆಗಿದೆ. ನಾವು ಗೆಲ್ಲುತ್ತೇವೆ. ಮೇ.23ರ ನಂತರ ಮೈತ್ರಿ ಸರ್ಕಾರ ಪತನ ಆಗುತ್ತದೆ. ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ ಎಂದು ಭವಿಷ್ಯ ನುಡಿದರು.

ಇನ್ನೊಂದೆಡೆ ಮತ್ತೋರ್ವ ಆಕಾಂಕ್ಷಿ ಸುನೀಲ್ ವಲ್ಯಾಪುರೆ ಕೂಡ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಈ ಬಾರಿ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಟಿಕೆಟ್ ಕೈ ತಪ್ಪುವ ಆತಂಕಕ್ಕೆ ಸಿಲುಕಿರುವ ವಲ್ಯಾಪುರೆ ಕೊನೆ ಕ್ಷಣದ ಪ್ರಯತ್ನವನ್ನೂ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ವಲ್ಯಾಪುರೆ, ನಾನೂ ಕೂಡ ಟಿಕೆಟ್ ಆಕಾಂಕ್ಷಿ, ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಟಿಕೆಟ್ ಕೈ ತಪ್ಪಿದರೆ ಪಕ್ಷ ಬಿಡಲ್ಲ ಚಿಂಚೊಳಿ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದಿದ್ದೀನಿ ಎಂದರು.

Intro:ಬೆಂಗಳೂರು: ಎರಡು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟರೂ ಪಕ್ಷದಲ್ಲಿ ಲಾಭಿ ನಿಂತಿಲ್ಲ, ಜಾಧವ್ ಹಾಗು ವಲ್ಯಾಪುರೆ ನಡುವೆ ಫೈಟ್ ಇನ್ನೂ ಮುಂದುವರೆದಿದೆ.ಟಿಕೆಟ್ ಗಾಗಿ‌ ಕೊನೆ ಕ್ಷಣದ ಕಸರತ್ತು ನಡೆಸಲಾಗುತ್ತಿದೆ.Body:ಇಂದು ಬೆಳಗ್ಗೆ ಬಿಎಸ್'ವೈ ನಿವಾಸಕ್ಕೆ ಭೇಟಿ ಉಮೇಶ್ ಜಾಧವ್ ಭೇಟಿ ನೀಡಿದರು.ಪುತ್ರನಿಗೆ ಟಿಕೆಟ್ ಕೊಡಿಸಿದರೆ ಕುಟುಂಬದಲ್ಲಿ ವೈಶ್ಯಮ ಆಗುವ ಭೀತಿ ಇದೆ, ಆದರೆ ಭವಿಷ್ಯದ ರಾಜಕೀಯ ದೃಷ್ಟಿಯಿಂದ ಪುತ್ರ ಅವಿನಾಶ್ ಗೆ ಟಿಕೆಟ್ ಸಿಕ್ಕರೆ ಉತ್ತಮ ಎನ್ನುವ ಅಭಿಪ್ರಾಯ ಉಮೇಶ್ ಜಾಧವ್ ಗೆ ಇದೆ ಮತ್ತೊಂದೆಡೆ ಸಹೋದರ ರಾಮಚಂದ್ರನ್ ಜಾಧವ್ ಕೂಡ ಇದ್ದಾರೆ ಹೀಗಾಗಿ ಇಂದು ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ನಂತರ ಮಾಧ್ಯಮಗಳಿಂದಿಗೆ ಮಾತನಾಡಿದ ಉಮೇಶ್ ಜಾಧವ್,ಚಿಂಚೋಳಿ ಉಪಚುನಾವಣೆಯಲ್ಲಿ‌ ಅಭ್ಯರ್ಥಿ ಆಯ್ಕೆ ಸಂಬಂಧ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇನೆ‌.ಜನರ ಒಲವು ಯಾರಿಗೆ ಹೆಚ್ಚಿದೆಯೋ ಅವರಿಗೆ ಟಿಕೆಟ್ ನೀಡುವಂತೆ ಹೇಳಿದ್ದೇನೆ.ಸಹೋದರ ರಾಮಚಂದ್ರಜಾದವ್ ಅಥವಾ ಪುತ್ರ ಅವಿನಾಶ್ ಜಾದವ್ ಸೇರಿದಂತೆ ಯಾರಿಗೆ ಬೇಕಾದರೂ ಪಕ್ಷ ಟಿಕೆಟ್ ಕೊಡಬಹುದು.ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಸಿಗಬೇಕು ಅಷ್ಟೇ ಎಂದರು.

ನಮ್ಮ ಚುನಾವಣೆ ಚೆನ್ನಾಗಿ ಆಗಿದೆ.ನಾವು ಗೆಲ್ಲುತ್ತೇವೆ.ಮೇ.23ರ ನಂತರ ಮೈತ್ರಿ ಸರ್ಕಾರ ಪತನ ಆಗುತ್ತದೆ.ಇಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ.ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದು ಖಚಿತ ಎಂದು ಭವಿಷ್ಯ ನುಡಿದರು.

ಇನ್ನೊಂದೆಡೆ ಮತ್ತೋರ್ವ ಆಕಾಂಕ್ಷಿ ಸುನೀಲ್ ವಲ್ಯಾಪುರೆ ಕೂಡ ಯಡಿಯೂರಪ್ಪ ಅವರನ್ನು ಭೇಟಿದರು.ಈ ಬಾರಿ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.ಟಿಕೆಟ್ ಕೈ ತಪ್ಪುವ ಆತಂಕಕ್ಕೆ ಸಿಲುಕಿರುವ ವಲ್ಯಾಪುರೆ ಕಾಲ ನೆ ಕ್ಷಣದ ಪ್ರಯತ್ನವನ್ನೂ ನಡೆಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ವಲ್ಯಾಪುರೆ, ನಾನೂ ಕೂಡ ಟಿಕೆಟ್ ಆಕಾಂಕ್ಷಿ, ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ ಟಿಕೆಟ್ ಕೈ ತಪ್ಪಿದರೆ
ಪಕ್ಷ ಬಿಡಲ್ಲ ಚಿಂಚೊಳಿ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದಿದ್ದೀನಿ ಎಂದರು.Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.