ETV Bharat / state

ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಕಿಲಾಡಿ ಜೋಡಿ ಅರೆಸ್ಟ್​ - ಬೆಂಗಳೂರು ಇಬ್ಬರು ಬೈಕ್​ ಕಳ್ಳರ ಬಂಧನ

ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅರೆಸ್ಟ್​
ಅರೆಸ್ಟ್​
author img

By

Published : Jan 15, 2022, 10:47 AM IST

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ವ್ಹೀಲಿಂಗ್ ಮಾಡಿದ ಬಳಿಕ ಮಾರಾಟ ಮಾಡುತ್ತಿದ್ದ ಕಿಲಾಡಿ ಜೋಡಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್.ಟಿ.ನಗರದ ನಿವಾಸಿ ಸೈಯದ್ ಇಮ್ರಾನ್ (27) ಮತ್ತು ಸೈಯದ್ ಅಜಂ(33) ಬಂಧಿತರು. ಆರೋಪಿಗಳಿಂದ 8 ಲಕ್ಷ ರೂ. ಮೌಲ್ಯದ 10 ವಿವಿಧ ಕಂಪನಿಯ ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ. ಜೊತೆಗೆ ಇವರ ಬಂಧನದಿಂದ ವೈಯಾಲಿ ಕಾವಲ್, ಚಾಮರಾಜಪೇಟೆ, ಅಶೋಕನಗರ, ವಿವೇಕನಗರ, ಹಲಸೂರು, ಕಮರ್ಷಿಯಲ್ ಸ್ಟ್ರೀಟ್, ಹುಳಿಮಾವು ಠಾಣೆಯಲ್ಲಿ ದಾಖಲಾಗಿದ್ದ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ವ್ಹೀಲಿಂಗ್ ಮಾಡಿ ಪೆಟ್ರೋಲ್ ಖಾಲಿ ಆಗುತ್ತಿದ್ದಂತೆ ನಿರ್ದಿಷ್ಟ ಸ್ಥಳವೊಂದರಲ್ಲಿ ವಾಹನ ನಿಲ್ಲಿಸುತ್ತಿದ್ದರು. ಬಳಿಕ ದಾಖಲೆಗಳನ್ನು ನಂತರ ಕೊಡುವುದಾಗಿ ಅತಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ: ಭಾರತೀಯ ಸೇನಾ ದಿನ: ಶುಭ ಕೋರಿದ ಮೋದಿ, ಕೋವಿಂದ್.. ವೀರ ಯೋಧರಿಗೆ 3 ಪಡೆಗಳ ಮುಖ್ಯಸ್ಥರಿಂದ ನಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.