ಬೆಂಗಳೂರು : ವ್ಯವಹಾರ ಮಾಡಲು ಆನ್ಲೈನ್ನಲ್ಲಿ ಹೂಡಿಕೆದಾರರನ್ನು ಹುಡುಕುತ್ತಿದ್ದ ವ್ಯಕ್ತಿಯೊಬ್ಬರಿಗೆ ಆನ್ಲೈನ್ ವಂಚಕರು ಬರೋಬ್ಬರಿ 20 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆ ನಗರದಲ್ಲಿ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶ ಮೂಲದ ವ್ಯಕ್ತಿ ಮೆಡಿಕಲ್ ಸ್ಟೋರ್ ಓಪನ್ ಮಾಡ್ತಿದ್ದೀನಿ ಸಹ ಹೂಡಿಕೆದಾರರು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿದ ಆನ್ಲೈನ್ ವಂಚಕರು ಆತನನ್ನು ಸಂಪರ್ಕಿಸಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದರು.
ಜೂನ್ 24ರಂದು ಇವರ ಮೀಟಿಂಗ್ ನಡೆದಿತ್ತು. ಭೇಟಿ ವೇಳೆ ಮೆಡಿಕಲ್ ಸ್ಟೋರ್ಗೆ ಬಂಡವಾಳ ಹೂಡುವುದಾಗಿ ಆನ್ಲೈನ್ ವಂಚಕರು ಚರ್ಚೆ ನಡೆಸಿದ್ದರು.
ಹೋಟೆಲ್‌ನಲ್ಲಿ ಭೇಟಿಯಾದಾಗ ವಂಚಕರು ನಮ್ಮ ಬಳಿ ಇಂಡಿಯನ್ ಕರೆನ್ಸಿ ಇಲ್ಲವೆಂದು ಒಂದು ಮಿಲಿಯನ್ ಡಾಲರ್ ಕೊಟ್ಟು, ವಂಚನೆಗಳಗಾದ ವ್ಯಕ್ತಿಯಿಂದ ಇಪ್ಪತ್ತು ಲಕ್ಷ ರೂ. ಪಡೆದುಕೊಂಡಿದ್ದರು ಎನ್ನಲಾಗ್ತಿದೆ.
ಓದಿ : COVID ಹೆಸರಲ್ಲಿ ಭಾರಿ ಮೋಸ.. ಹುಬ್ಬಳ್ಳಿಯಲ್ಲಿ ವೃದ್ಧೆಗೆ 15ಲಕ್ಷ ರೂಪಾಯಿ ವಂಚನೆ!
ಆದರೆ, ವಂಚಕರು ಕೊಟ್ಟ ಡಾಲರ್‌ಗಳನ್ನು ಎಕ್ಸ್ ಚೇಂಜ್ ಮಾಡಲಾಗದೆ ವಂಚನೆಗೊಳಗಾದ ವ್ಯಕ್ತಿ ಅದನ್ನು ಅವರಿಗೆ ವಾಪಸ್ ಕೊಟ್ಟು ನನ್ನ ಹಣ ನನಗೆ ಕೊಡಿ ಎಂದಿದ್ದರು. ಈ ವೇಳೆ ವಂಚಕರು ಎರಡು ಸಾವಿರ ಮುಖ ಬೆಲೆಯ ಇಪ್ಪತ್ತು ಲಕ್ಷ ರೂ. ನಕಲಿ ನೋಟು ನೀಡಿ ಸ್ಥಳದಿಂದ ಎಸ್ಕೇಪ್ ಆಗಿದ್ದರು.
20 ಲಕ್ಷ ರೂ. ಕೊಟ್ಟು ಮೋಸಹೋದ ವ್ಯಕ್ತಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ವಿಧಾನಸೌದ ಠಾಣೆ ಪೊಲೀಸರು, ಹುಡುಕಾಟ ನಡೆಸಿ ಇಬ್ಬರು ಆರೋಪಿಗಳಾದ ಬೆಯೇಕ್ ಸ್ಯಾಮ್ಯುಯೆಲ್ ರೌಲ್ ಮತ್ತು ಜಾನ್ ಎಂಬವರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.