ETV Bharat / state

ಒಂದೇ ಕುಟುಂಬದ ಇಬ್ಬರು ಕೋವಿಡ್​ಗೆ​‌ ಬಲಿ: ಅಂತ್ಯ ಸಂಸ್ಕಾರಕ್ಕೆ ಪಾಲಿಕೆ ಸದಸ್ಯ ಶಿವರಾಜ್ ಸಹಾಯ ಹಸ್ತ - ಬೆಂಗಳೂರಿನಲ್ಲಿ ಕೋವಿಡ್​ ಪ್ರಕರಣ ಹೆಚ್ಚಳ

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತಗುಲಿದ್ದ ಒಂದೇ ಕುಟುಂಬದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

two of the same family dies due to corona
ಒಂದೇ ಕುಟುಂಬದ ಇಬ್ಬರು ಕೋವಿಡ್​ಗೆ​‌ ಬಲಿ
author img

By

Published : Apr 19, 2021, 2:45 PM IST

ಬೆಂಗಳೂರು: ‌ಕೊರೊನಾ ಮಹಾಮಾರಿಗೆ ಸಿಲಿಕಾನ್​ ಸಿಟಿ ಮಂದಿ ತತ್ತರಿಸಿದ್ದಾರೆ. ನಗರದಲ್ಲಿ ಕೊರೊನಾ ಎರಡನೇ ಅಲೆ ಮತ್ತಷ್ಟು ತೀವ್ರವಾಗಿದ್ದು, ಒಂದೇ ಕುಟುಂಬದ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

ಶಂಕರಮಠ ವಾರ್ಡ್-75ರ ಗೃಹಲಕ್ಷ್ಮೀ ಬಡಾವಣೆಯಲ್ಲಿ ಒಂದೇ ಕುಟುಂಬದ ಐದು ಜನರಿಗೆ ಕೊರೊನಾ ಸೋಂಕು ಹರಡಿತ್ತು. ಮೊನ್ನೆಯಷ್ಟೆ 55 ವರ್ಷದ ಸೋಂಕಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದರು. ಇಂದು ಆ ಮಹಿಳೆಯ 59 ವರ್ಷದ ಪತಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಯ ಶವವನ್ನ ಕುಟುಂಬದವರಿಗೆ ನೀಡದೇ ಆಸ್ಪತ್ರೆಯವರೇ ದಫನ್ ಮಾಡುತ್ತಿದ್ದ ಕಾರಣ ಪಾಲಿಕೆ ಮಾಜಿ ಸದಸ್ಯ ಶಿವರಾಜು ಶಂಕರಮಠದ ಪ್ರಿಸ್ಟೀನ್ ಆಸ್ಪತ್ರೆಗೆ ಭೇಟಿ ನೀಡಿ, ನೊಂದ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಿ ,ಅಂತ್ಯ ಸಂಸ್ಕಾರ ನಡೆಸಲು ನೆರವು ನೀಡಿದ್ದಾರೆ.

two of the same family dies due to corona
ಒಂದೇ ಕುಟುಂಬದ ಇಬ್ಬರು ಕೋವಿಡ್​ಗೆ​‌ ಬಲಿ

ಇದೇ ವೇಳೆ ಮಾತನಾಡಿದ ಅವರು, ನಿಮ್ಮ ಜೀವ ನಿಮ್ಮ ಕೈಯಲ್ಲಿದೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೈಯನ್ನು ಆಗಾಗ ಸೋಪು ಅಥವಾ ಸ್ಯಾನಿಟೈಸರ್​ನಿಂದ ಸ್ವಚ್ಛಗೊಳಿಸಿ. ಮತ್ತು ಕೊವಿಡ್-19 ಲಸಿಕೆ ಹಾಕಿಸಿಕೊಳ್ಳಿ‌ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.