ಬೆಂಗಳೂರು: ಎರಡು ರಾಷ್ಟ್ರೀಯ ಪಕ್ಷಗಳು 2023ಕ್ಕೆ ದೇವೇಗೌಡರ ಮನೆ ಬಾಗಿಲಿಗೆ ಬರುವ ಕಾಲ ಬರುತ್ತದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2023ಕ್ಕೆ ಜೆಡಿಎಸ್ ಪಕ್ಷ ಇರುವುದಿಲ್ಲ ಎನ್ನುತ್ತಾರೆ. ರಾಜ್ಯದಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ನಮಗೆ ಹಿಂದಿನ ಸೋಲು ಮುಂದಿನ ಗೆಲುವಿಗೆ ಹೆದ್ದಾರಿ. ಎರಡು ರಾಷ್ಟ್ರೀಯ ಪಕ್ಷಗಳು 2023ಕ್ಕೆ ದೇವೇಗೌಡರ ಮನೆ ಬಾಗಿಲಿಗೆ ಬರುವ ಕಾಲ ಬರಲಿದೆ. ಜನರ ಮನೆ ಬಳಿ ಹೋಗಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತೇನೆ ಎಂದರು.
ಕೊಳಚೆ ಪ್ರದೇಶಗಳಿಗೆ ಅಕ್ಕಿ, ಸೀಮೆಣ್ಣೆ ನೀಡಿದೆ. ಅವರಿಗೆ ಕಾರ್ಡ್ ಕೊಡಬೇಕಿತ್ತು. ಆದರೆ, ಅವರೆಲ್ಲಾ ಇರುವ ಜಾಗ ಅವರದ್ದು ಆಗಿರಲಿಲ್ಲ. ಮಹಿಳೆಯರಿಗೆ ಮೀಸಲಾತಿ ನೀಡಿದ್ದು ನಾವು. ನಾನು ಮುಖ್ಯಮಂತ್ರಿಯಾಗಬೇಕಾದರೆ ಸಂಘರ್ಷವಾಗಿತ್ತು. ನಾನು ಬಿಟ್ಟು ಹೋದ ಮೇಲೆ ಇವರು ಏನು ಮಾಡಿದ್ದಾರೆ ಎನ್ನುವುದು ಬೇಡ. ನಾವು 150 ಸ್ಥಾನ ಗಳಿಸುತ್ತೇವೆ, ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಾರೆ. ತಮಿಳುನಾಡಿನಲ್ಲಿ ಏನಾಯಿತು. ದೆಹಲಿಯಲ್ಲಿ, ಒಡಿಶಾದಲ್ಲಿ ಒಂದು ಸೀಟ್ ಇದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಸೇರಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ವಕೀಲರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸೋತಿದ್ದವರನ್ನು ಮತ್ತೆ ಗೆಲ್ಲಿಸಬೇಕು ಎಂಬ ಪಣ ತೊಟ್ಟಿದ್ದಾರೆ. ಇವರೆಲ್ಲರಿಗೂ ನಾನು ಸ್ವಾಗತ ಕೋರುತ್ತೇನೆ. ನಾರಾಯಣಸ್ವಾಮಿಯವರ ಮನೆಗೆ ಹೋಗಿದ್ದೆ, ಅವರ ದೇವರ ಭಕ್ತಿ ನನ್ನ ಮನಸ್ಸಿನ ಮೇಲೆ ಪರಿಣಾಮ ಆಯ್ತು. ಅವರ ಪತ್ನಿ ತಮ್ಮ ಕುಟುಂಬದ ಶ್ರೇಯಾಭಿವೃದ್ಧಿಗೆ ಪೂಜೆ ಮಾಡ್ತಾರೆ.
ನಾನು ನಾರಾಯಣ ಅವರಿಗೆ ಎಂಎಲ್ಎಗೆ ಸ್ಪರ್ಧಿಸಬೇಡಿ ಎಮ್ಎಲ್ಸಿ ಮಾಡ್ತೀನಿ ಅಂತ. ಆದರೆ ಅವರು ಎಂಎಲ್ಎಗೆ ನಿಂತರು ಎಂದು ಹೇಳಿದರು.
ಜೆಡಿಎಸ್ ಮುಖಂಡ ನಾರಾಯಣಸ್ವಾಮಿ ಮಾತನಾಡಿ, ದಿನೇಶ್ ಗುಂಡುರಾವ್ ಅವರು ಇಲ್ಲಿ ಸಹಾಯ ಮಾಡಿಲ್ಲ.ಅವರಿಗೆ ಬಡವರ ಹಸಿವು ಗೊತ್ತಾಗಲ್ಲ. ಯಾಕಂದ್ರೆ ಅವರು ಮಾಜಿ ಸಿಎಂ ಮಗ. ಅವರಿಗೆ ಏನು ಗೊತ್ತಾಗುತ್ತೆ ನಮ್ಮ ಕಷ್ಟ. ಬಡವರ ಸೇವೆ ಮಾಡಿದರೆ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
2018 ರ ಚುನಾವಣೆ ಎರಡು ತಿಂಗಳು ಇತ್ತು. ನಾನು ನಿನ್ನನ್ನು ಎಂಎಎಲ್ಸಿ ಮಾಡ್ತೀನಿ ಅಂದ್ರು ದೇವೇಗೌಡರು. ಆದರೆ, ನಾನು ಅವರ ಮಾತು ಕೇಳದೆ ಎಂಎಲ್ಎ ಆಗಬೇಕೆಂದು ಚುನಾವಣೆಗೆ ನಿಂತೆ. ಅವರು ಬೇಜಾರಾಗದೇ ಕಾರ್ಯಕ್ರಮಗಳಿಗೆ ಬಂದರು. ಆದರೆ ಜಮೀರ್ ಅಹ್ಮದ್ ಅವರು ಕೊನೆ ರಾತ್ರಿ ಮನೆ ಮನೆಗೆ ಹೋಗಿ ನಮ್ಮ ಪಕ್ಷದ ಬಗ್ಗೆ ಜನರಿಗೆ ತಪ್ಪು ಗ್ರಹಿಕೆ ಮೂಡಿಸಿದರು. ಹಾಗಾಗಿ, ಕೇವಲ 5000 ಮತಗಳಲ್ಲಿ ನಾನು ಸೋತೆ ಎಂದರು.
ಇದನ್ನು ಓದಿ:ನನ್ನ ಜತೆ ಖರ್ಗೆ, ಹೆಚ್ ಡಿಕೆಯೊಂದಿಗೆ ಸಿಎಂ ಬೊಮ್ಮಾಯಿ ಮಾತಾಡಿದಾರೆ.. ಅಡ್ಡಗೋಡೆ ಮೇಲೆ ಹೆಚ್ಡಿಡಿ ದೀಪ