ದೊಡ್ಡಬಳ್ಳಾಪುರ : ಸ್ನೇಹಿತರ ಮಗುವಿಗೆ ಗೋಬಿ ಮಂಜೂರಿ ಕೊಡಿಸಲೆಂದು ಹೋದಾಗ ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಮಗು ಗಂಭೀರವಾಗಿ ಗಾಯಗೊಂಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಪಂಚಾಯತ್ ಮುಂಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತಿಪ್ಪಗಾನಹಳ್ಳಿಯ ಸಾಗರ್ (18) ಮತ್ತು ಹಾಡೋನಹಳ್ಳಿಯ ನಿವಾಸಿ (40) ಸಾವನ್ನಪ್ಪಿದ್ದಾರೆ.
ಮೃತ ಸಾಗರ್ ತಮ್ಮ ಸ್ನೇಹಿತರ ಮಗುವಿಗೆ ಗೋಬಿ ಮಂಜೂರಿ ಕೊಡಿಸಲು ಬೈಕ್ನಲ್ಲಿ ಹಾಡೋನಹಳ್ಳಿಯ ಗ್ರಾಮಕ್ಕೆ ಕರೆದುಕೊಂಡು ಹೋಗುವಾಗ ಎದುರಿಗೆ ಬರುತ್ತಿದ್ದ ನಂಜೇಗೌಡರ ಬೈಕ್ ಮಧ್ಯೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಸಾಗರ್ ಸಾವನ್ನಪ್ಪಿದ್ರೆ, ನಂಜೇಗೌಡ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ಈ ಘಟನೆಯಲ್ಲಿ ಮಗು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.