ETV Bharat / state

ಜನತೆಗೆ ಸಿಹಿ ಸುದ್ದಿ: ಇಬ್ಬರು ಕೊರೊನಾ ಸೋಂಕಿತರು ಗುಣಮುಖ, ನಾಳೆ ಬಿಡುಗಡೆ

ರಾಜ್ಯದಲ್ಲಿ 15 ಪ್ರಕರಣ ಕೊರೊನಾ ಪಾಸಿಟಿವ್ ಬಂದು ಆತಂಕ‌ ಸೃಷ್ಟಿಯಾಗಿರುವ ನಡುವೆಯೇ ಇಬ್ಬರು ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು ಅವರನ್ನು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.

SUDHAKAR
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್
author img

By

Published : Mar 19, 2020, 8:55 PM IST

ಬೆಂಗಳೂರು: ರಾಜ್ಯದಲ್ಲಿ 15 ಪ್ರಕರಣ ಕೊರೊನಾ ಪಾಸಿಟಿವ್ ಬಂದು ಆತಂಕ‌ ಸೃಷ್ಟಿಯಾಗಿರುವ ನಡುವೆಯೇ ಇಬ್ಬರು ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು ಅವರನ್ನು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಸಿಹಿ ಸುದ್ದಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಘೋಷಿಸಿದ್ದಾರೆ.

ಕೊರೊನಾ ಭೀತಿಯಲ್ಲಿದ್ದ ಜನತೆಗೆ ಸಿಹಿ ಸುದ್ದಿ: ಇಬ್ಬರು ಕೊರೊನಾ ಸೋಂಕಿತರು ಗುಣಮುಖ
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಂಕಿತರು ನಿಗದಿತ ಅವಧಿ ಮುಗಿದ ನಂತರ 24 ಗಂಟೆಯಲ್ಲಿ ಎರಡು ವರದಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳಿಸಲಾಗುತ್ತದೆ ಅದರಂತೆ ಪಿ- 2 ಮತ್ತು ಪಿ-5 ಸೋಂಕಿತರು ಗುಣಮುಖರಾಗಿದ್ದಾರೆ. ಅವರನ್ನು ನಾಳೆ ಮನೆಗೆ ಕಳಿಸಲಾಗುತ್ತದೆ ಎಂದರು. ಎಸ್ಎಸ್ಎಸ್ಸಿ ಪರೀಕ್ಷೆ ಬಗ್ಗೆ ನಾಳೆ ಶಿಕ್ಷಣ ಸಚಿವರು ಮಾಹಿತಿ ನೀಡಲಿದ್ದಾರೆ. ಸಾವಿರಾರು ಪರೀಕ್ಷೆ ಮಾಡಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದೆ ಬಂದಿವೆ. ಅವರಿಗೆ ಪರವಾನಗಿ ಸಿಕ್ಕಲ್ಲಿ, ಎ,ಬಿ,ಸಿ ವಲಯಲ್ಲಿನ ಅನೇಕರಿಗೆ ಪರೀಕ್ಷೆ ಮಾಡಿ‌ ಸಮುದಾಯದಲ್ಲಿ ರ್‍ಯಾಂಡಮ್ ಆಗಿ ತಪಾಸಣೆ ನಡೆಸಿ ರಾಜ್ಯದಲ್ಲಿ‌ ಸೋಂಕು‌ ಇದೆಯಾ ಎಂದು ತಿಳಿಯಲು ಸಹಕಾರಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಅಧೀನದಲ್ಲಿ ಕಾರ್ಯಪಡೆ ರಚಿಸಿದ್ದರೂ ಸೂಳೆಬಾವಿಯಲ್ಲಿ ಜಾತ್ರ ನಡೆದಿದ್ದು ಸರಿಯಲ್ಲ ಈ ಬಗ್ಗೆ ವರದಿ ಪಡೆಯಲಾಗುತ್ತದೆ ಎಂದರು. ಬಾರ್​​ಗಳಲ್ಲಿ ಶುಚಿತ್ವ ಇಲ್ಲ ಎನ್ನುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಬಾರ್ ಗಳಿಗೆ ತೆರಳಿಯೇ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ ಎಂದರು. ಸಂಪುಟ ಉಪ ಸಮಿತಿ ರಚನೆಯಾದ ನಂತರ ಮೊದಲ ಸಭೆ ಇಂದು ನಡೆಯಿತು. ಆರೋಗ್ಯ ಸಚಿವ ರಾಮುಲು ಅಧ್ಯಕ್ಷತೆಯ ಸಮಿತಿಯಲ್ಲಿ ಗೃಹ ಸಚಿವ ಬೊಮ್ಮಾಯಿ, ಅಶ್ವತ್ಥನಾರಾಯಣ್, ಹಾಗು ತಾವು ಇದ್ದು ಸುಧಾಕರ ಇದ್ದು, ಮಧ್ಯಾಹ್ನ 1.30 ಕ್ಕೆ ಸಭೆ ನಡೆಸಿ ಕೂಲಂಕಷವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಸಂಪುಟ ಉಪ ಸಮಿತಿ ಸಭೆಯ ನಿರ್ಧಾರಗಳು: ಮುಂದಿನ ಒಂದು ವಾರ ಪ್ರತ್ಯೇಕ ಮಾಡುವ ಕೆಲಸ ಹೆಚ್ಚಾಗಬೇಕು
• ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಿ ವಿಧಾನ ಸರಿಯಾಗಿ ಆಗಲು ಎಚ್ಚರ ವಹಿಸುವುದು.
• ಅಂತಾರಾಷ್ಟ್ರೀಯ ವಿಮಾನ ಭಾನುವಾರದಿಂದ ಒಂದು ವಾರ ಸಂಪೂರ್ಣ ನಿಷೇಧವಾಗಲಿದೆ ಹೀಗಾಗಿ ಈಗಾಗಲೇ ಬಂದಿರುವ 1.22 ಲಕ್ಷ ಜನರ ನಿಗಾಗೆ ಅನುಕೂಲ.
• ಶಂಕಿತರನ್ನಿ ಎ,ಬಿ,ಸಿ ಎಂದು ವಿಂಗಡಣೆ, ಎ ಸರ್ಕಾರಿ‌ ಆಸ್ಪತ್ರೆಯಲ್ಲಿ, ಬಿ, ಖಾಸಗಿ ಆಸ್ಪತ್ರೆ, ಸಿ, ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ
• ಮನೆಯಲ್ಲಿ ನಿಗಾದಲ್ಲಿ ಇರುವವರು ಹೊರ ಬಾರದಂತೆ ನೋಡಿಕೊಳ್ಳಲು ಆರೋಗ್ಯ ಸಹಾಯಕರು, ಪೇದೆ, ಗೃಹ ರಕ್ಷಕ‌ದಳದ ಸಿಬ್ಬಂದಿ ಇರಬೇಕು ಎಂದು ನಿರ್ಧಾರ.
• ಪಬ್ ಮುಚ್ಚಲು‌ ಹೇಳಿದ್ದೇವೆ, ಕೆಲ ಕಡೆ ಮುಚ್ಚಿಲ್ಲ ಇವರು ಖಡಾಖಂಡಿತವಾಗಿ ಮುಚ್ಚಲೇಬೇಕು, ಇಲ್ಲವೇ ಕಾನೂನು ರೀತಿ ಕ್ರಮ,ಪರವಾನಗಿ ರದ್ದಿನ‌ ಎಚ್ಚರಿಕೆ ನೀಡಲಾಗುತ್ತದೆ.
• ಕೇಂದ್ರ ಸರ್ಕಾರ ಈಗಾಗಲೇ 10 ವರ್ಷಕ್ಕಿಂತ ಕಡಿಮೆ 65 ವರ್ಷ ವಯಸ್ಸಿನ ನಂತರದವರು ಮನೆಯಿಂದ ಹೊರಬರಬೇಡಿ, ಮನೆಯಲ್ಲೇ ಅಂತರ ಕಾಯ್ದುಕೊಳ್ಳಿ ಎಂದು ಸೂಚಿಸಲಾಗಿದೆ.
• ರೈಲ್ವೆ, ಡೊಮೆಸ್ಟಿಕ್ ವಿಮಾನ ಸೇವೆಯಲ್ಲಿ ಕೂಡ ಅವಶ್ಯಕತೆ ಇದ್ದ ಕಡೆ ಮಾತ್ರ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಮಾತ್ರ, ಅಗತ್ಯ ಇರಿವವರು ಮಾತ್ರ ಪ್ರಯಾಣಿಸಿ ಮನವಿ
• ಕ್ರಮಗಳನ್ನು ಮತ್ತಷ್ಟು‌ಗಟ್ಟಿಯಾಗಿ ತೆಗೆದುಕೊಳ್ಳಲಾಗುತ್ತದೆ.
• ಸಂಪುಟ ಉಪ ಸಮಿತಿ ಈಗಾಗಲೇ ಬಿಬಿಎಂಪಿಗೆ ಸೂಚನೆ ನೀಡಿದ್ದು ಎಲ್ಲ ಆಸ್ಪತ್ರೆ, ಸುತ್ತಮುತ್ತ ಪ್ರದೇಶ, ಜನಸಂದಣಿ ಇರುವ ಜಾಗದಲ್ಲಿ ಸ್ವಚ್ಚತೆ ಕಾಪಾಡಲು‌‌ ಸೂಚನೆ ನೀಡಲಾಗಿದೆ. 10 ಸಿಬ್ಬಂದಿ ಬಳಸಿಕೊಳ್ಳಲಿದ್ದಾರೆ.
• ವೈದ್ಯಕೀಯ ಇಲಾಖೆಯ ಎಲ್ಲಾ ಹೌಸ್ ಸರ್ಜನ್ ಗಳ ಬಳಕೆ ಒಂದು ತಿಂಗಳ ಕಾಲ ಬಳಕೆ.
• ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚು ಜನರು ಬಂದು ಪೂಜೆ ನಿಗ್ರಹ ಮಾಡಲು ನಿರ್ಧಾರ, ಇದರಲ್ಲಿ ದುರುದ್ದೇಶ ಇಲ್ಲ, ಎಲ್ಲಾ ಧರ್ಮಗಳು ಕೂಡ ಒಂದು ಸಾಲಿನ ನಿರ್ಣಯ ಘೋಷಿಸಬೇಕು.
• ಸಂತೆ,ಜಾತ್ರೆ, ಮದುವೆ, ನಿಶ್ಚಿತಾರ್ಥ ಸಂಪೂರ್ಣ ನಿಷೇಧವಾಗಬೇಕು, ಈಗಾಗಲೇ ನಿಗದಿಯಾಗಿದ್ದರೆ ನೂರಕ್ಕೂ ಕಡಿಮೆ ಜನ ಇರಬೇಕು.
• ದಿನಾಂಕ ಮುಂದೆ ಹಾಕಿ ಇಲ್ಲವೇ ಕಡಿಮೆ ಜನರನ್ನು ಸೇರಿಸಿ ಸಮಾರಂಭ ಮಾಡಿ
• ಶುಚಿತ್ವಕ್ಕೆ ಹೆಚ್ಷಿನ ಗಮನ ನೀಡಿ,ಸ್ಯಾನಿಟೈಸರ್ ಬಳಸಿ,ರೋಗದ ಲಕ್ಷಣ ಇಲ್ಲದವರು ಮಾಸ್ಕ್ ಧರಿಸಿ
• ಹೈಲೆವೆಲ್ ಟೆಕ್ನಿಕಲ್ ಕಮಿಟಿ ರಚಿಸಲಾಗಿದೆ, 8 ಜನ ತಜ್ಞರ ನೇಮಕ ಏನೇ ಖರೀಸಿ ಮಾಡಿದರೂ ಅವರ ಸಮಿತಿ ಮೂಲಕ ಮಾಡಲಾಗುತ್ತದೆ
• ಐಟಿ ಕಂಪನಿ ವರ್ಕ್ ಫ್ರಂ ಹೋಂ ಕಡ್ಡಾಯ• ಅವಶ್ಯಕತೆ ಇದ್ದಲ್ಲಿ ಮಾತ್ರ ಜನ ಬರಬೇಕು, ಸಾರ್ವಜನಿಕರು ಎರಡು ವಾರ ತಡೆದು ಸರ್ಕಾರಿ ಕಚೇರಿಗಳಿಗೆ ಬನ್ನಿ
• ಪಾಸಿಟಿವ್ ಇದ್ದವರಲ್ಲಿ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದಾರೆ, ಅವರನ್ನು ನಾಳೆ ಮನೆಗೆ ಕಳಿಸಲಾಗುತ್ತದೆ
ಸುದ್ದಿಗೋಷ್ಟಿಯಲ್ಲಿ ಕಕ್ಕಾಬಿಕ್ಕಿಯಾದ ಸಚಿವ ಸುಧಾಕರ್:
ಶುಚಿತ್ವದ ಬಗ್ಗೆ ಮಾತಾಡುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸುದ್ದಿಗೋಷ್ಟಿಯಲ್ಲೆ ಎಕ್ಸಪೈರಿ ಯಾಗಿರೋ ವಾಟರ್ ಬಾಟಲ್ ವಿತರಣೆ ಮಾಡಿದ ಘಟನೆ ನಡೆಯಿತು.

ಈ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಕ್ಕಾಬಿಕ್ಕಿಯಾದ ಸಚಿವ ಸುಧಾಕರ್, ನಂತರ ಚೇತರಿಸಿಕೊಂಡು ನಾನು ಅದಕ್ಕೆ ಕುಡಿದಿಲ್ಲ ಎಂದರು ನಂತರ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅಧಿಕಾರಿಗಳಿಗೆ ಏನ್ರಿ ಇದು ಎಂದು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.