ಬೆಂಗಳೂರು: ಟಿಟಿಕೆ ಪ್ರೆಸ್ಟೀಜ್, 2020ರ ಸೆಪ್ಟೆಂಬರ್ ತಿಂಗಳ ನಂತರದಿಂದ ತಯಾರಾಗುವ ಉತ್ಪನ್ನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದಿಲ್ಲ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಮೂರು ವರ್ಷಗಳಿಂದ ಟಿಟಿಕೆ ಪ್ರೆಸ್ಟೀಜ್ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದಂತೆ ಕಾರ್ಯ ನಿರ್ವಹಿಸುತ್ತಿದ್ದು, ಚೀನಾ ಮೂಲ ತಯಾರಿಕೆ ಉತ್ಪನ್ನಗಳಿಂದ ದೂರ ಸರಿದಿತ್ತು. ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಖರೀದಿಸಲು ಆರಂಭಿಸಿದೆ.
ಕೇವಲ 104 ಉತ್ಪನ್ನಗಳನ್ನು ಚೀನಾದಿಂದ ಖರೀದಿಸುತ್ತಿದ್ದು, ಕಳೆದ ತಿಂಗಳು ಲಡಾಖ್ ಗಡಿಯಲ್ಲಿ ಚೀನಾ ಸೈನಿಕರು ಹಾಗೂ ಭಾರತೀಯ ಸೈನಿಕರ ನಡುವೆ ಚಕಮಕಿ ನಡೆದಾಗ ಕಂಪನಿಯು ತನ್ನ ಆಮದು ನೀತಿಯನ್ನು ಬದಲಿಸುವ ಕಠಿಣ ನಿರ್ಧಾರ ತೆಗೆದುಕೊಂಡಿತ್ತು.
ಪ್ರಧಾನಮಂತ್ರಿಗಳ ಆತ್ಮನಿರ್ಭರ ಭಾರತ ಕನಸಿನ ಅನುಗುಣವಾಗಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಒದಗಿಸುವುದು ಟಿಟಿಕೆ ಕಂಪನಿಯ ಧ್ಯೇಯವಾಗಿದೆ. ಶೇ. 5ಕ್ಕಿಂತ ಕಡಿಮೆ ಉತ್ಪನ್ನಗಳನ್ನು ಹೊರ ರಾಷ್ಟ್ರಗಳಿಂದ ಖರೀದಿಸುವುದೇ ಟಿಟಿಕೆ ಪ್ರೆಸ್ಟ್ರಿಜ್ ಗುರಿಯಾಗಿದೆ ಎಂದು ಕಂಪನಿ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಟಿಟಿಕೆ ಪ್ರಸ್ಟಿಜ್‌ನ ವ್ಯವಸ್ಥಾಪಕ ನಿರ್ದೇಶಕ ಚಂದು ರಾತ್ರೋ, “ಒಂದು ಬ್ರಾಂಡ್ ಆಗಿ ನಮಗೆ ಭಾರತದ ಪರಂಪರೆ ಹಾಗೂ ಸಂಸ್ಕೃತಿಯ ಬಗ್ಗೆ ಹೆಮ್ಮೆ ಇದೆ. ಕಳೆದ ಅನೇಕ ವರ್ಷಗಳಿಂದ ಭಾರತ-ಚೀನಾ ಗಡಿಯಲ್ಲಿ ರಾವತ್ ಘಟನೆ ನಡೆದಾಗಿನಿಂದ ಚೀನಾ ದೇಶದ ಮೇಲೆ ನಿರ್ಭರವಾಗುವುದನ್ನು ನೀವು ತಗ್ಗಿಸತ್ತಾ ಬಂದಿದ್ದು. ಇದೀಗ ನಡೆದ ಘಟನೆಯಿಂದಾಗಿ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಎಲ್ಲಾ ರೀತಿಯಲ್ಲೂ ತಯಾರಾದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿ, ಭಾರತದ ಉತ್ಪನ್ನಗಳಿಂದ ತಯಾರಿಸುವಂತೆ ಮಾಡಲು ನಾವು ಸಾಕಷ್ಟು ಪರಿಶ್ರಮ ಪಡುತ್ತಿದ್ದೇವೆ' ಎಂದರು.