ETV Bharat / state

'ದಿವಂಗತ ನ್ಯಾ.ಎಚ್​.ಎನ್. ನಾರಾಯಣರಿಂದ ಹಲವು ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಲಭ್ಯವಾಗಿತ್ತು': ಪ್ರಸನ್ನ ಬಾಲಚಂದ್ರ ವರಾಳೆ - ದಿವಂಗತ ನಿವೃತ್ತ ನ್ಯಾಯಮೂರ್ತಿ ಎಚ್​ ಎನ್ ನಾರಾಯಣ

ಹೈಕೋರ್ಟ್​ನಲ್ಲಿ ಮಂಗಳವಾರ ದಿವಂಗತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾರಾಯಣ ಅವರ ಸ್ಮರಣಾರ್ಥವಾಗಿ ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

high-court
ಹೈಕೋರ್ಟ್​
author img

By ETV Bharat Karnataka Team

Published : Dec 20, 2023, 7:23 AM IST

ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ 1994 ರಿಂದ ಸಮಾರು 9 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ದಿವಂಗತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾರಾಯಣ ಅವರು ತಮ್ಮ ಸೇವಾ ಅವಧಿಯಲ್ಲಿ ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಸಮರ್ಪಕವಾಗಿ ಇತ್ಯರ್ಥ ಗೊಳಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್​ನ ಕೋರ್ಟ್ ಹಾಲ್-1ರಲ್ಲಿ ಹಮ್ಮಿಕೊಂಡಿದ್ದ ದಿವಂಗತ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾರಾಯಣ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಎಚ್.ಎನ್. ನಾರಾಯಣ ಅವರಿಗೆ ನ್ಯಾಯಾಂಗದ ಅರಿವು ಅಪಾರವಾಗಿತ್ತು ಎಂದು ತಿಳಿಸಿದರು.

ನ್ಯಾ. ನಾರಾಯಣ ಅವರ ಮುಖಂಡತ್ವದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯ ಅನುವಾದನ ಕುರಿತ ವರದಿ ಸಲ್ಲಿಸಲು ಸಮಿತಿ ರಚಿಸಿದ್ದು, ಈ ವರದಿಯನ್ನು ಪೂರ್ಣ ಪೀಠ ಅಂಗೀಕರಿಸಿದ್ದು ವಿಶೇಷವಾಗಿತ್ತು ಎಂದರು. ದಿವಂಗತ ಎಚ್.ಎನ್ ನಾರಾಯಣ ಅವರು ತುಮಕೂರು ಜಿಲ್ಲೆಯ ನೆಲಮಂಗಲ ತಾಲೂಕಿನ ದೊಡ್ಡಬೆಳೆ ಗ್ರಾಮದಲ್ಲಿ 1941 ರಲ್ಲಿ ಜನಿಸಿದ್ದರು. ಇವರು ಮೈಸೂರಿನ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಮೊದಲನೆಯ ವರ್ಷದ ಕಾನೂನು ವಿದ್ಯಾಭ್ಯಾಸವನ್ನು ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಪೂರೈಸಿ, ತುಮಕೂರಿನ ವಿದ್ಯೋದಯ ಮಹಾ ವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡರು.

ನ್ಯಾಯಮೂರ್ತಿಗಳಾದ ಎಚ್​.ಎನ್​. ನಾರಾಯಣ ಅವರು ನಮ್ಮ ರಾಜ್ಯ ವಕೀಲರ ಪರಿಷತ್ತಿನಲ್ಲಿ 1969 ರಂದು ವಕೀಲ ವೃತ್ತಿ ಆರಂಭಿಸಿದರು. 1969 ರಲ್ಲಿ ತುಮಕೂರಿನ ಸುಪ್ರಸಿದ್ಧ ಹಿರಿಯ ವಕೀಲರು ಹಾಗೂ ವಿದ್ಯೋದಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾಗಿದ್ದ ಎಚ್​.ಎಸ್. ಶೇಷಾದ್ರಿ ಅವರ ಕಚೇರಿಯಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. 1973 ರಲ್ಲಿ ಸ್ವತಂತ್ರವಾಗಿ ವೃತ್ತಿ ಪ್ರಾರಂಭಿಸಿ ನುರಿತ ನ್ಯಾಯವಾದಿಗಳಾಗಿ ಜನ ಮನ್ನಣೆಯನ್ನು ಗಳಿಸಿದರು.

ಇವರು ವಿದ್ಯಾಭ್ಯಾಸ ಮಾಡಿದ ಕಾಲೇಜಿನಲ್ಲಿಯೇ ತುಮಕೂರಿನ ವಿದ್ಯೋದಯ ಕಾನೂನು ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಅತ್ಯುತ್ತಮ ಸೇವೆ ಗುರುತಿಸಿದ ಕರ್ನಾಟಕ ಸರ್ಕಾರ 1981ರಲ್ಲಿ ಇವರನ್ನು ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಿತು. ಬಳಿಕ 1983 ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕೊಂಡು ಧಾರವಾಡ, ಬೆಂಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುತ್ತಾರೆ ಎಂದು ವಿವರಿಸಿದರು. ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಸಂತಾಪ ಸೂಚಿಸಿದರು. ಹೈಕೋರ್ಟ್​ನ ನ್ಯಾಯಮೂರ್ತಿಗಳು, ವಕೀಲರು, ಉಪಸ್ಥಿತರಿದ್ದರು.

ಇದನ್ನೂ ಓದಿ: ಕಳ್ಳರನ್ನು ಹಿಡಿದು ಹಲ್ಲೆ ನಡೆಸಿ ಕೊಲೆ ಆರೋಪ: ಗ್ರಾಮ ಪಂಚಾಯತ್ ಸದಸ್ಯನಿಗೆ ಹೈಕೋರ್ಟ್ ಜಾಮೀನು ಮಂಜೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.