ಬೆಂಗಳೂರು: ರಾಜಧಾನಿಯಲ್ಲಿ ಸಂಜೆಯಾದರೆ ಎಡಬಿಡದೆ ಮಳೆ ಸುರಿಯುತ್ತಿದೆ. ನಗರದ ಬಹುತೇಕ ಕಡೆ ಮರಗಳು ಧರೆಗುರುಳುತ್ತಿವೆ. ಇದೀಗ, ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಿಎಂಟಿಸಿ ಬಸ್ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ.
ದೀಪಾಂಜಲಿ ನಗರ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಬೆಳಗ್ಗೆ 10 ಗಂಟೆಯ ಸುಮಾರಿಗೆ ಗೊರಗುಂಟೆ ಪಾಳ್ಯದಿಂದ ರಾಜ್‌ಕುಮಾರ್ ಸಮಾಧಿ ಬಳಿ ಚಲಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿತು. ಈ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ನಂತರ ಮರದ ರೆಂಬೆ ಕೊಂಬೆಗಳನ್ನು ತೆರವುಗೊಳಿಸಲಾಯಿತು.
ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮೋದಿ ಆಸ್ಪತ್ರೆ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಆರು ವಾಹನಗಳು ಜಖಂ ಆಗಿವೆ. ಎರಡು ಕಾರು, ಒಂದು ಟ್ರಕ್, ಎರಡು ಟು ವೀಲರ್, ಒಂದು ಆಟೋ ಮೇಲೆ ಮರ ಬಿದ್ದಿದೆ. ಹೀಗಾಗಿ, ನವರಂಗ ಸಿಗ್ನಲ್, ಮೋದಿ ಆಸ್ಪತ್ರೆ ರಸ್ತೆ, ಮಲ್ಲೇಶ್ವರಂ, ಸಂಪೂರ್ಣ ಜಾಮ್ ಆಗಿತ್ತು.
ಇದನ್ನೂ ಓದಿ: 'ದಿಂಗಾಲೇಶ್ವರ ಶ್ರೀಗಳು ಕಮಿಷನ್ ಬಗ್ಗೆ ದಾಖಲೆ ಕೊಡಲಿ, ಸಂಪೂರ್ಣ ತನಿಖೆ ಮಾಡ್ತೇವೆ'