ETV Bharat / state

'ಕೈ'ವಾಡದಿಂದ ದಾರಿ ತಪ್ಪಿದ ಸಾರಿಗೆ ಸಿಬ್ಬಂದಿ; ಡಿಸಿಎಂ ಲಕ್ಷ್ಮಣ ಸವದಿ ಟೀಕೆ

ಸಾರಿಗೆ ನೌಕರರು ದಾರಿ ತಪ್ಪಲು 'ಕೈ'ವಾಡವೇ ಕಾರಣ. ಇಂತಹ ರಾಜಕೀಯ ಪ್ರೇರಿತ ದಾಳಗಳನ್ನು ನಮ್ಮ ಸಾರಿಗೆ ಸಿಬ್ಬಂದಿ ಅರ್ಥಮಾಡಿಕೊಳ್ಳಬೇಕು. ಕಳೆದ ಮೂರು ದಿನಗಳಿಂದ ಮುಷ್ಕರ ನಡೆಯುತ್ತಿದ್ದರೂ ಅತ್ಯಂತ ಸಹನೆಯಿಂದ ಸರ್ಕಾರ ಹೆಜ್ಜೆ ಇಟ್ಟಿದೆ. ಆದರೂ ಸಹ ಮುಷ್ಕರನಿರತರು ಇದನ್ನು ಅರ್ಥಮಾಡಿಕೊಳ್ಳದೆ ಒಣಪ್ರತಿಷ್ಠೆಗೆ ಇಳಿದಿದ್ದರಿಂದ ಈಗ ಪರಿತಪಿಸುವಂತಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.

Transport Strike : DCM Laxman Savadi Allegations On Congress Party Leaders
ಡಿಸಿಎಂ ಲಕ್ಷ್ಮಣ ಸವದಿ
author img

By

Published : Apr 10, 2021, 7:18 PM IST

Updated : Apr 10, 2021, 7:23 PM IST

ಬೆಂಗಳೂರು : ಮುಷ್ಕರನಿರತ ಸಾರಿಗೆ ನೌಕರರಿಗೆ ತಿಳಿವಳಿಕೆ ನೀಡಿ ಅವರನ್ನು ತಕ್ಷಣ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸುವುದನ್ನು ಬಿಟ್ಟು ಇಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕಾಂಗ್ರೆಸ್‍ ಮುಖಂಡರು ನಮ್ಮ ಸರ್ಕಾರದ ಮೇಲೆಯೇ ಗೂಬೆ ಕೂರಿಸುತ್ತಾ ರಾಜಕೀಯ ಲಾಭಗಳಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮ ಹೇಳಿಕೆ ನೀಡಿರುವ ಡಿಸಿಎಂ, 6ನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೆ ಅನ್ವಯಿಸಬೇಕು ಎಂದು ಈಗ ಮೊಸಳೆ ಕಣ್ಣೀರು ಸುರಿಸುವ ವಿರೋಧ ಪಕ್ಷಗಳು, ಹಿಂದೆ ತಾವೇ ಅಧಿಕಾರದಲ್ಲಿದ್ದಾಗ ವೇತನ ಆಯೋಗದ ಶಿಫಾರಸುಗಳಂತೆ ಎಂದಾದರೂ ನಮ್ಮ ಸಾರಿಗೆ ನೌಕರರಿಗೆ ವೇತನಗಳನ್ನು ನೀಡಿದ ಇತಿಹಾಸವಿದೆಯೇ? ಹಿಂದೆ ಹಲವು ದಶಕಗಳ ಕಾಲ ಆಡಳಿತ ನಡೆಸಿದ ಇದೇ ಪ್ರತಿಪಕ್ಷಗಳು ಎಂದಾದರೂ ಸಾರಿಗೆ ನಿಗಮಗಳ ನೌಕರರಿಗೆ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಸಂಬಳ ನೀಡಿದ ದಾಖಲೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 4ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: 118 ಬಿಎಂಟಿಸಿ ಸಿಬ್ಬಂದಿ ಕೆಲಸದಿಂದ ವಜಾ

ಕೋವಿಡ್-ಲಾಕ್​ಡೌನ್‍ ಸಂಕಷ್ಟದಿಂದಾಗಿ ಸಾರಿಗೆ ನೌಕರರಿಗೆ ಸಂಬಳ ನೀಡುವುದಕ್ಕೂ ಕಷ್ಟವಾದಾಗ ಮುಖ್ಯಮಂತ್ರಿ ಯಡಿಯೂರಪ್ಪ ಸುಮಾರು 2 ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಮೊತ್ತವನ್ನು ಸರ್ಕಾರದಿಂದ ನಾಲ್ಕೂ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದ್ದು ಒಂದು ದಾಖಲೆಯಾಗಿದೆ. ಕೇವಲ ಒಂದೇ ವರ್ಷದಲ್ಲಿ ಇಷ್ಟೊಂದು ಬೃಹತ್ ಮೊತ್ತವನ್ನು ಹಿಂದೆ ಯಾವುದೇ ಸರ್ಕಾರವೂ ಸಾರಿಗೆ ನಿಗಮಗಳಿಗೆ ನೀಡಿದ ನಿದರ್ಶನಗಳಿಲ್ಲ. ಈ ಬಗ್ಗೆ ವಿರೋಧ ಪಕ್ಷದವರೇ ಅತ್ಮಾವಲೋಕನ ಮಾಡಿಕೊಂಡು ಮಾತನಾಡಿದರೆ ಒಳ್ಳೆಯದು. ಸಾರಿಗೆಯಂತಹ ಸಾರ್ವಜನಿಕ ಹಿತದೃಷ್ಟಿಯ ವಿಷಯಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದು ಎಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರ ಸಾರಿಗೆ ನೌಕರರ ಬಹುತೇಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದರೂ ಕೆಲವು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಸಾರಿಗೆ ನೌಕರ ಬಾಂಧವರು ಮುಷ್ಕರದ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಈ ಮುಷ್ಕರವನ್ನು ತಪ್ಪಿಸಲು ಸಾರಿಗೆ ನೌಕರ ಮುಖಂಡರ ಜೊತೆ ಹಲವು ಸುತ್ತಿನ ಮಾತುಕತೆಗಳನ್ನು ನಾವು ನಡೆಸಿದ್ದರೂ ಸಹ ಈ “ಕೈ”ವಾಡದಿಂದ ಮುಷ್ಕರ ನಡೆದು ಅಮಾಯಕ ಜನರು ತೀವ್ರ ತೊಂದರೆ ಎದುರಿಸುವಂತಾಯಿತು. ಇಂತಹ ದುರಿತದ ಕಾಲದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸರಿದಾರಿಗೆ ತರಲು ನಮ್ಮ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಪ್ರತಿಪಕ್ಷಗಳು ಕೈಜೋಡಿಸುವುದನ್ನು ಬಿಟ್ಟು ವಿನಾ ಕಾರಣ ರಾಜಕೀಯ ಪ್ರಚೋದನೆ ನೀಡುವ ಹೇಳಿಕೆಯಲ್ಲೇ ಕಾಲಕಳೆಯುತ್ತಿರುವುದು ಬೇಸರದ ಸಂಗತಿ. ಈ ಎಲ್ಲಾ ವಿದ್ಯಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿರುವ ಸಾರ್ವಜನಿಕರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬುದು ನನ್ನ ನಂಬಿಕೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ಮುಷ್ಕರ ಸಂಬಂಧ ಇನ್ನು ಮಾತನಾಡುವ ಪ್ರಶ್ನೇಯೇ ಇಲ್ಲ.. ಸಂಧಾನದ ಬಾಗಿಲು ಮುಚ್ಚಿದ ಸಿಎಂ!

ಬೆಂಕಿ ಬಿದ್ದು ಜನ ಕಂಗಾಲಾಗಿರುವಾಗ ಬೆಂಕಿಯನ್ನು ಶಮನ ಮಾಡಬೇಕೇ ಹೊರತು ಇದೇ ಬೆಂಕಿಯಲ್ಲಿ ಒಲೆ ಹಚ್ಚಿ ಅಡುಗೆ ಮಾಡುವುದಲ್ಲ. ಆದರೆ, ಕೆಲವು ಕಾಂಗ್ರೆಸ್ ಮುಖಂಡರ ವರ್ತನೆಯನ್ನು ನೋಡಿದರೆ ಅವರು ಕೋಡಿಹಳ್ಳಿಯಂತವರ ಜೊತೆ ಶಾಮೀಲಾಗಿ ಅಡುಗೆ ತಯಾರಿಸಲು ಹವಣಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಆದರೆ, ಇಂತಹ ರಾಜಕೀಯ ಪ್ರೇರಿತ ದಾಳಗಳನ್ನು ನಮ್ಮ ಸಾರಿಗೆ ಸಿಬ್ಬಂದಿ ಅರ್ಥಮಾಡಿಕೊಳ್ಳಬೇಕು. ಹಿಂದೆ ಮಹಾರಾಷ್ಟ್ರದಲ್ಲಿ ಜವಳಿ ಕಾರ್ಮಿಕರ ಚಳವಳಿಯಲ್ಲಿ ಹೊರಗಿನ ಶಕ್ತಿಗಳು ಪಾಲ್ಗೊಂಡು ಕಾರ್ಮಿಕರ ಹಿತಾಸಕ್ತಿ ಮಣ್ಣುಪಾಲಾಗಿ ಇಡೀ ಜವಳಿ ಉದ್ಯಮಗಳೇ ವಿನಾಶದ ಅಂಚಿಗೆ ತಲುಪಿದಂತಹ ಕಹಿ ಘಟನೆಯಿಂದ ನಮ್ಮ ಸಾರಿಗೆ ನೌಕರರು ಪಾಠ ಕಲಿತುಕೊಳ್ಳದಿದ್ದರೆ ಅವರಿಗೂ ಅಪಾಯ ಮತ್ತು ಅವರನ್ನು ಸಲಹುತ್ತಿರುವ ನಿಗಮಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನುಅರಿತುಕೊಳ್ಳಬೇಕು ಎಂದು ಸವದಿ ಕಿವಿಮಾತು ಹೇಳಿದ್ದಾರೆ.

ಈ ಮುಷ್ಕರದಿಂದಾಗಿ ಸಾರ್ವಜನಿಕರು ಸಾರಿಗೆ ನೌಕರರ ಹಠಮಾರಿ ಧೋರಣೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಅನೇಕ ಚಾಲಕರು ಮತ್ತು ನಿರ್ವಾಹಕರು ತಾವು ಕೆಲಸಕ್ಕೆ ಮರಳಲು ಸಿದ್ಧರಿದ್ದರೂ ಕೆಲವು ಕಾರ್ಮಿಕ ಮುಖಂಡರು ತಮಗೆ ಬೆದರಿಕೆವೊಡ್ಡಿ ಅಡೆತಡೆಮಾಡುತ್ತಿದ್ದಾರೆ ಎಂದು ನಮ್ಮಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ “ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಖುಷಿಪಡುವ” ಪಟ್ಟಭದ್ರರನ್ನು ಬಂಧಿಸುವುದು ಅನಿವಾರ್ಯವಾಗಿತ್ತು. ಕಾನೂನು, ಶಿಸ್ತುಪಾಲನೆಗಾಗಿ ಮತ್ತು ಶಾಂತಿಸುವ್ಯವಸ್ಥೆಗಾಗಿ ಪೊಲೀಸರು ಕೈಗೊಂಡ ಈ ಕ್ರಮ ಅತ್ಯಂತ ಸಮರ್ಪಕವಾಗಿದೆ. ಕಾನೂನಿನ ಎದುರು ಎಲ್ಲರೂ ಸಮಾನರು. ಕಳೆದ ಮೂರು ದಿನಗಳಿಂದ ಮುಷ್ಕರ ನಡೆಯುತ್ತಿದ್ದರೂ ಅತ್ಯಂತ ಸಹನೆಯಿಂದ ಸರ್ಕಾರ ಹೆಜ್ಜೆ ಇಟ್ಟಿದ್ದರೂ ಮುಷ್ಕರನಿರತರು ಇದನ್ನು ಅರ್ಥಮಾಡಿಕೊಳ್ಳದೆ ಒಣಪ್ರತಿಷ್ಠೆಗೆ ಇಳಿದಿದ್ದರಿಂದ ಈಗ ಪರಿತಪಿಸುವಂತಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಾರಿಗೆ ಸಂಸ್ಥೆ ಖಾಸಗೀಕರಣಕ್ಕೆ ಬಿಡುವುದಿಲ್ಲ, ಸರ್ಕಾರ ದಾರಿ ತಪ್ಪಿದರೆ ಬೇರೆ ರೀತಿ ಹೋರಾಟ: ಕೋಡಿಹಳ್ಳಿ ಎಚ್ಚರಿಕೆ

ಹಲವು ಪ್ರತಿರೋಧಗಳ ನಡುವೆಯೂ ನಮ್ಮ ನಿರೀಕ್ಷೆಯಂತೆ ಇಂದು 1,400ಕ್ಕೂ ಹೆಚ್ಚು(ಮಧ್ಯಾಹ್ನದ ಹೊತ್ತಿಗೆ) ಬಸ್​​​ಗಳು ಸಂಚಾರಕ್ಕೆ ಇಳಿದಿದ್ದವು. ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದೆ ಬಂದು ಹೀಗೆ ಸೇವೆ ಸಲ್ಲಿಸಿದ ಸಾರಿಗೆ ಸಿಬ್ಬಂದಿಗೆ, ಅಧಿಕಾರಿಗಳಿಗೆ ಅವರು ಅಭಿನಂದಿಸಿದ್ದಾರೆ. ಈ ಹಬ್ಬದ ಸಂದರ್ಭದಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಹೆಚ್ಚಿನ ಬಸ್​ ಮತ್ತಿತರ ವಾಹನಗಳನ್ನು ಸೇವೆಗೆ ಒದಗಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಸಹಕರಿಸಿದ ಖಾಸಗಿ ವಾಹನ ಮಾಲೀಕರಿಗೂ ಸವದಿ ಧನ್ಯವಾದ ಅರ್ಪಿಸಿದ್ದಾರೆ.

Last Updated : Apr 10, 2021, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.