ETV Bharat / state

ಡಿಸಿಎಂ ಮುಂದೆ ವಿವಿಧ ಬೇಡಿಕೆ ಇಟ್ಟ ಸಾರಿಗೆ ಇಲಾಖೆ ನೌಕರರು.. ಈಡೇರಿಸ್ತಾರಾ ಪರಮೇಶ್ವರ್​? - ಸಾರಿಗೆ ಇಲಾಖೆ

ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ನಾಲ್ಕು ಅಧ್ಯಕ್ಷರನ್ನು ನೇಮಿಸುವ ಬದಲು ಒಬ್ಬರನ್ನೇ ನೇಮಕ ಮಾಡಿ. ಇನ್ನು ಸಾರಿಗೆ ಸಂಸ್ಥೆ ಸಂಪೂರ್ಣ ನಷ್ಟದಲ್ಲಿದ್ದು, ವಿದ್ಯಾರ್ಥಿಗಳ ಉಚಿತ ಪಾಸ್​ನಿಂದಾದ ನಷ್ಟವನ್ನು ಸಾರಿಗೆ ಸಂಸ್ಥೆಗೆ ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ವಿವಿಧ ಬೇಡಿಕೆಯನ್ನು ಡಿಸಿಎಂ ಮುಂದಿಟ್ಟ ಸಾರಿಗೆ ಇಲಾಖೆ ನೌಕರರ ಸಂಘಟನೆಗಳ ಮುಖಂಡರು
author img

By

Published : Jun 27, 2019, 2:35 PM IST

ಬೆಂಗಳೂರು: ಸಾರಿಗೆ ಇಲಾಖೆ ನೌಕರರ ಸಂಘಟನೆಗಳ ಮುಖಂಡರು ಇಂದು ಡಿಸಿಎಂ ಜಿ.ಪರಮೇಶ್ವರ್ ಅವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

ಡಿಸಿಎಂ ಅವರನ್ನು ಸದಾಶಿವನಗರದ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ನೇತೃತ್ವದ ನಿಯೋಗದಿಂದ ಮನವಿ ಸಲ್ಲಿಕೆ ಮಾಡಲಾಯಿತು.

ಸಾರಿಗೆ ನೌಕರರ ಮನವಿ ಪತ್ರ ಸ್ವೀಕರಿಸಿದ ಬಳಿಕ ಡಿಸಿಎಂ ಪರಮೇಶ್ವರ್ ಮಾತನಾಡಿ, ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ನಾಲ್ಕು ಅಧ್ಯಕ್ಷರನ್ನು ನೇಮಿಸುವ ಬದಲು ಒಬ್ಬರನ್ನೇ ನೇಮಿಸಿ. ಸಾರಿಗೆ ಸಂಸ್ಥೆ ಸಂಪೂರ್ಣ ನಷ್ಟದಲ್ಲಿದೆ. ವಿದ್ಯಾರ್ಥಿಗಳ ಉಚಿತ ಪಾಸ್​ನಿಂದಾದ ನಷ್ಟವನ್ನು ಸಾರಿಗೆ ಸಂಸ್ಥೆಗೆ ಸರ್ಕಾರವೇ ಭರಿಸಬೇಕು ಎಂಬಂತೆ ಕೆಲ ಬೇಡಿಕೆಗಳನ್ನ ನೌಕರರು ಇಟ್ಟಿದ್ದಾರೆ ಎಂದರು.

ಏನೇನು ಬೇಡಿಕೆ

  • ಸಾಮಾಜಿಕ ಹೊಣೆಗಾರಿಕೆಗಳ ಸಂಪೂರ್ಣ ವೆಚ್ಚವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಕೊಡಬೇಕು.
  • ವಿದ್ಯಾರ್ಥಿಗಳ ರಿಯಾಯಿತಿ ಪಾಸ್​ನ ಬಾಬ್ತಿನಲ್ಲಿ ಬಾಕಿ ಇರುವ ಹಣವನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಕೂಡಲೇ ಪಾವತಿಸಬೇಕು.
  • ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುವ ಸುಂಕವನ್ನು ಶೇ.50ರಷ್ಟು ಕಡಿಮೆ ಮಾಡಬೇಕು.
  • ನಾಲ್ಕೂ ನಿಗಮವನ್ನು ಒಂದುಗೂಡಿಸಬೇಕು ಅಲ್ಲದೇ ನಾಲ್ಕೂ ನಿಗಮದ ವಾಹನಗಳಿಗೆ ಹೆದ್ದಾರಿ ಸುಂಕ ರದ್ದು ಮಾಡಬೇಕು. ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಸಾರಿಗೆ ಸಂಸ್ಥೆ ನಷ್ಟದಲ್ಲಿದೆ:

ಡಿಸಿಎಂ ಪರಮೇಶ್ವರ್​ಗೆ ಮನವಿ ಸಲ್ಲಿಸಿದ ಅನಂತ ಸುಬ್ಬುರಾವ್ ಮಾತನಾಡಿ, ಸಾರಿಗೆ ಸಂಸ್ಥೆ ತುಂಬಾ ನಷ್ಟದಲ್ಲಿದೆ. ರೈತರನ್ನು ಬಿಟ್ರೆ ಸಾರಿಗೆ ನೌಕರರೇ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದು. ಈ ಬಗ್ಗೆ ಗಮನ ಹರಿಸಬೇಕು. ಸಾರಿಗೆ ಸಂಸ್ಥೆಯ ನೌಕಕರಿಗೆ ಹಿಂಸೆ ಆಗುತ್ತಿದೆ ಅದು ತಪ್ಪಬೇಕು. ಉತ್ತಮ ವಾತಾವರಣ ನಿರ್ಮಾಣ ಮಾಡಿ ಕೊಡಿ ಅಂತಾ ಹೇಳಿದ್ದೇವೆ ಎಂದರು.

Intro:newsBody:

ವಿವಿಧ ಬೇಡಿಕೆಯನ್ನು ಡಿಸಿಎಂ ಮುಂದಿಟ್ಟ ಸಾರಿಗೆ ಇಲಾಖೆ ನೌಕರರ ಸಂಘಟನೆಗಳ ಮುಖಂಡರು

ಬೆಂಗಳೂರು: ಸಾರಿಗೆ ಇಲಾಖೆ ನೌಕರರ ಸಂಘಟನೆಗಳ ಮುಖಂಡರು ಇಂದು ಡಿಸಿಎಂ ಜಿ.ಪರಮೇಶ್ವರ್ ಅವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಡಿಸಿಎಂ ಸದಾಶಿವನಗರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದ ನಿಯೋಗದಿಂದ ಮನವಿ ಸಲ್ಲಿಕೆ ಮಾಡಲಾಯಿತು.
ಸಾರಿಗೆ ನೌಕರರ ಮನವಿ ಪತ್ರ ಸ್ವೀಕರಿಸಿದ ಬಳಿಕ ಡಿಸಿಎಂ ಪರಮೇಶ್ವರ್ ಮಾತನಾಡಿ, ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ನಾಲ್ಕು ಅಧ್ಯಕ್ಷರ ನ್ನ ನೇಮಿಸುವ ಬದಲು ಒಬ್ಬರನ್ನೇ ನೇಮಿಸಿ. ಸಾರಿಗೆ ಸಂಸ್ಥೆ ಸಂಪೂರ್ಣ ನಷ್ಟದಲ್ಲಿದೆ. ವಿದ್ಯಾರ್ಥಿಗಳ ಉಚಿತ ಪಾಸ್ ನಿಂದಾದ ನಷ್ಟವನ್ನ ಸಾರಿಗೆ ಸಂಸ್ಥೆಗೆ ಸರ್ಕಾರವೇ ಭರಿಸಬೇಕು ಸೇರಿದಂತೆ ಕೆಲ ಬೇಡಿಕೆಗಳನ್ನ ನೌಕರರು ಇಟ್ಟಿದ್ದಾರೆ ಎಂದರು.
ನಾನು ಅವರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ನಾಲ್ಕೈದು ಸಾವಿರ ಬಸ್ ಗಳನ್ನ ರೀಪ್ಲೇಸ್ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಏನೇನು ಬೇಡಿಕೆ
ಸಾರಿಗೆ ಇಲಾಖೆ ನೌಕರರ ಸಂಘಟನೆಗಳ ಮುಖಂಡರು ನೀಡಿದ ಮನವಿ ಪತ್ರದಲ್ಲಿರುವ ಪ್ರಮುಖ ಬೇಡಿಕೆಗಳೆಂದರೆ, ಸಾಮಾಜಿಕ ಹೊಣೆಗಾರಿಕೆಗಳ ಸಂಪೂರ್ಣ ವೆಚ್ಚವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಕೊಡಬೇಕು, ವಿದ್ಯಾರ್ಥಿಗಳ ರಿಯಾಯಿತಿ ಪಾಸ್ನ ಬಾಬ್ತಿನಲ್ಲಿ ಬಾಕಿ ಇರುವ ಹಣವನ್ನ ಸಾರಿಗೆ ನಿಗಮಗಳಿಗೆ ಸರ್ಕಾರ ಕೂಡಲೇ ಪಾವತಿಸಬೇಕು. ಸಾರಿಗೆ ನಿಗಮಗಳು ಕರೀದಿಸುವ ಡೀಸೆಲ್ ಮೇಲೆ ರಾಜ್ಯ ಸರ್ಕಾರ ವಿಧಿಸುವ ಸುಂಕವನ್ನು ಶೇ.50ರಷ್ಟು ಕಡಿಮೆ ಮಾಡಬೇಕು. ನಾಲ್ಕೂ ನಿಗಮವನ್ನೂ ಒಂದುಗೂಡಿಸಬೇಕು, ನಾಲ್ಕೂ ನಿಗಮದ ವಾಹನಗಳಿಗೆ ಹೆದ್ದಾರಿ ಸುಂಕ ರದ್ದು ಮಾಡಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಸಾರಿಗೆ ಸಂಸ್ಥೆ ನಷ್ಟದಲ್ಲಿದೆ
ಡಿಸಿಎಂ ಪರಮೇಶ್ವರ್ ಗೆ ಮನವಿ ಸಲ್ಲಿಸಿದ ಅನಂತ ಸುಬ್ಬುರಾವ್ ಮಾತನಾಡಿ, ಸಾರಿಗೆ ಸಂಸ್ಥೆ ತುಂಬಾ ನಷ್ಟದಲ್ಲಿದೆ. ರೈತರನ್ನ ಬಿಟ್ರೆ ಸಾರಿಗೆ ನೌಕರರೇ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದು. ಈ ಬಗ್ಗೆ ಗಮನ ಹರಿಸಬೇಕು. ಸಾರಿಗೆ ಸಂಸ್ಥೆಯ ನೌಕಕರಿಗೆ ಹಿಂಸೆ ಆಗುತ್ತಿದೆ ಅದು ತಪ್ಪಬೇಕು. ಉತ್ತಮ ವಾತಾವರಣ ನಿರ್ಮಾಣ ಮಾಡಿ ಕೊಡಿ ಅಂತಾ ಹೇಳಿದ್ದೇವೆ ಎಂದರು.Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.