ಬೆಂಗಳೂರು: ಮೇ 21 ಆದರೂ ಸಾರಿಗೆ ಸಿಬ್ಬಂದಿಗೆ ಏಪ್ರಿಲ್ ತಿಂಗಳ ವೇತನವನ್ನು ನೀಡಲಾಗಿಲ್ಲ. ಜನತಾ ಕರ್ಫ್ಯೂ, ಲಾಕ್ಡೌನ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ರಾಜ್ಯ ಸಾರಿಗೆ ನಿಗಮಗಳು ನಷ್ಟದಲ್ಲಿವೆ.
ಕೊರೊನಾ ಹೊಡೆತಕ್ಕೆ ಸಾರಿಗೆ ನಿಗಮಗಳು ಇಲ್ಲಿಯವರೆಗೆ 5,000 ಕೋಟಿ ರೂ ನಷ್ಟ ಅನುಭವಿಸಿವೆ. ಈ ನಷ್ಟದ ಹಣವನ್ನು ತುಂಬಲು ಕಳೆದ ಬಾರಿ ವೇತನಕ್ಕೆ 2,133 ಕೋಟಿ ರೂ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಇದೀಗ ಮತ್ತೆ 975 ಕೋಟಿ ಹಣ ನೀಡುವಂತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರದ ಕದ ತಟ್ಟಿವೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ವೇತನಕ್ಕೆ 975 ಕೋಟಿ ಹಣ ನೀಡುವಂತೆ ಕೆ.ಎಸ್.ಆರ್.ಟಿ.ಸಿಯಿಂದ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಏಪ್ರಿಲ್, ಮೇ, ಜೂನ್ ತಿಂಗಳ ಹಣ ಬಿಡುಗಡೆ ಮಾಡಬೇಕು ಎಂದು ಕೋರಲಾಗಿದೆ.
ಇದನ್ನೂ ಓದಿ: ತೆಲುಗು ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ‘ಚಿರು’ ಆಕ್ಸಿಜನ್ ಬ್ಯಾಂಕ್ ಆರಂಭಿಸಲು ನಿರ್ಧಾರ