ETV Bharat / state

ಅಪಘಾತದಲ್ಲಿ ಮಗನ ಮೆದುಳು ನಿಷ್ಕ್ರಿಯ: ಹೃದಯ ದಾನ ಮಾಡಿ ಮತ್ತೊಬ್ಬನ ಜೀವ ಉಳಿಸಿದ ಪೋಷಕರು! - bangalore news

ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ಯಶಸ್ವಿಯಾಗಿ ರವಾನೆ ಮಾಡಲಾಗಿದೆ.

transmitting-the-living-heart-through-the-green-corridor

author img

By

Published : Feb 12, 2020, 2:06 AM IST

Updated : Feb 12, 2020, 4:54 AM IST

ಆನೇಕಲ್‌: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಹೃದಯವನ್ನು ಯಶಸ್ವಿಯಾಗಿ ಗ್ರೀನ್ ಕಾರಿಡಾರ್ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೊಮ್ಮಸಂದ್ರದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕಳೆದ 9 ನೇ ತಾರೀಖಿನಂದು ಪಿರಿಯಾಪಟ್ಟಣದ ಕೊಪ್ಪ ಬಳಿ ಮದನ್ ರಾಜ್ (22) ಎಂಬ ಯುವಕನ ಮೆದುಳು ರಸ್ತೆ ಅಪಘಾತದಿಂದಾಗಿ ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆ ಕುಟುಂಬಸ್ಥರು ಯುವಕನ ಅಂಗಾಂಗಗಳನ್ನು ದಾನ ಮಾಡಿದ್ದರು.ಅಂತೆಯೇ ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯದಲ್ಲಿ ತುಮಕೂರು ಮೂಲದ ನವೀನ್ (39) ಎಂಬಾತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಮದನ್ ರಾಜ್ ಹೃದಯವನ್ನು ನವೀನ್ ಅವರಿಗೆ ಕಸಿ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯರು ಯಶಸ್ವಿಯಾಗಿದ್ದಾರೆ

ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ರವಾನೆ

ಈ ಜೀವಂತ ಹೃದಯವನ್ನು 2 ಗಂಟೆ 18 ನಿಮಿಷದಲ್ಲಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಯಶಸ್ವಿಯಾಗಿ ಸಾಗಿಸಲಾಯಿತು.

Last Updated : Feb 12, 2020, 4:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.