ಬೆಂಗಳೂರು: ಸೈಬರ್ ಅಪರಾಧ ಪ್ರಕರಣ ನಗರದಲ್ಲಿ ಹೆಚ್ಚಾಗುತ್ತಿರುವ ಕಾರಣ ನಗರ ಪೊಲೀಸ್ ಆಯುಕ್ತರು ಎಚ್ಚೆತ್ತು ಸಿಟಿಯಲ್ಲಿರುವ ಸೈಬರ್ ಪೊಲೀಸ್ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಟ್ರೈನಿಂಗ್ ನೀಡುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಮಾತನಾಡಿ, ದೇಶದಲ್ಲೇ ಮೊದಲ ಸೈಬರ್ ಠಾಣೆ ಓಪನ್ ಮಾಡಿದ್ದೇ ಕರ್ನಾಟಕ. ಸದ್ಯ ನಗರ ಟೆಕ್ನಿಕಲ್ ಆಗಿ ಬೆಳಿಯುತ್ತಿರುವುದರಿಂದ ಸೈಬರ್ ಅಪರಾಧ ಕೂಡ ಹೆಚ್ಚುತ್ತಿದೆ. ಒಂದೇ ಠಾಣೆಯಿಂದ ಸೈಬರ್ ಅಪರಾಧ ಪತ್ತೆ ಹಚ್ಚಲು ಸಾಧ್ಯವಿಲ್ಲ. ಹೀಗಾಗಿ ನಗರದ ಪ್ರತಿ ಡಿವಿಜನ್ನಲ್ಲಿ ಸೆನ್ ಠಾಣೆ (ಸೈಬರ್ ಕ್ರೈಂ- ಎಕಾನಾಮಿಕ್-ನಾರ್ಕೋಟಿಕ್ಸ್) ಓಪನ್ ಆಗಿದೆ. ಇದರಲ್ಲಿ ಓರ್ವ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಹಾಗೆ ಇತರೆ ಸಿಬ್ಬಂದಿ ಸೈಬರ್ ಅಪರಾಧ ಪತ್ತೆ ಹಚ್ಚುವ ಜವಾಬ್ದಾರಿ ಹೊತ್ತಿರುತ್ತಾರೆ ಎಂದರು.
ಸೆನ್ ಪೊಲೀಸ್ ಠಾಣೆಗಳಲ್ಲಿ ಇರುವ ಅಧಿಕಾರಿಗಳಿಗೆ ಹಾಗೆ ಸಿಬ್ಬಂದಿಗೆ ಸೈಬರ್ ಅಪರಾಧ ಹೇಗೆ ನಡೆಯುತ್ತದೆ, ಸೈಬರ್ ಅಪರಾಧ ಎಂದರೇನು? ಅದನ್ನ ಪತ್ತೆ ಹಚ್ಚಲು ಯಾವ ರೀತಿ ಸಿಬ್ಬಂದಿ ಅಲರ್ಟ್ ಆಗಿರಬೇಕು ಎಂಬುದರ ಬಗ್ಗೆ ಟ್ರೈನಿಂಗ್ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಸೈಬರ್ ಅಪರಾಧ ಮಾಡುವವರು ಯಾರು? : ಸೈಬರ್ ಅಪರಾಧಗಳನ್ನು ಯಾರು ಮಾಡುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸೈಬರ್ ಅಪರಾಧವನ್ನು ಪಕ್ಕದ ಮನೆಯಲ್ಲಿದ್ದುಕೊಂಡೇ ಮಾಡಿದ್ರೂ ನಮಗೆ ಕುರುಹುಗಳೇ ಸಿಗಲ್ಲ. ಯಾಕೆಂದರೆ, ಅಷ್ಟು ಎಕ್ಸ್ಪರ್ಟ್ ಆಗಿರ್ತಾರೆ ಖದೀಮರು. ಸೈಬರ್ ಅಪರಾಧ ಮಾಡಲು ಬಹಳಷ್ಟು ಸಾಧನ ಇದೆ. ಈ ಕೃತ್ಯಗಳನ್ನು ಮಾಡುವವರು ಬಹುತೇಕ ಬೆಂಗಳೂರು, ನೋಯ್ಡ, ಗುಜಾರಾತ್ ಹೀಗೆ ಹಲವು ಕಡೆ ಯಾರಿಗೂ ಅನುಮಾನ ಬಾರದ ರೀತಿ ತಮ್ಮ ಕೈಚಳಕ ತೋರಿಸ್ತಾರೆ ಎಂದರು.
ಯಾವರೀತಿ ಅಪರಾಧ ಮಾಡ್ತಾರೆ?: ಈ ಖದೀಮರ ಟಾರ್ಗೆಟ್ ಮೊಬೈಲ್ ಬ್ಯಾಂಕಿಂಗ್, ಎಟಿಎಂ, ಡೆಬಿಟ್ ಕಾರ್ಡ್, ಓಎಲ್ಎಕ್ಸ್, ಮ್ಯಾಟ್ರಿಮೊನಿಯಲ್ ಇಮೇಲ್ನ ಡೇಟಾ ಕಳ್ಳತನ ಮಾಡ್ತಾರೆ. ಹೀಗಾಗಿ ಪರ್ಸನಲ್ ವಿಚಾರಗಳನ್ನು ಶೇರ್ ಮಾಡಬೇಡಿ ಎಂದು ಕಿವಿ ಮಾತು ಹೇಳಿದರು.
ಪೊಲೀಸರು ಅಪರಾಧ ಪತ್ತೆ ಹಚ್ಚಲು ಯಾಕೆ ಹಿಂದೇಟು : ಪೊಲೀಸರಿಗೆ ಮೊದಲು ಸೈಬರ್ ಅಪರಾಧ ಯಾವ ರೀತಿ ನಡೆಯುತ್ತಿದೆ ಅನ್ನೋದು ತಿಳಿಯುತ್ತಿರಲಿಲ್ಲ. ಸದ್ಯ ಯಾವ ರೀತಿಯ ಸೈಬರ್ ಅಪರeಧ ಎಂಬುದರ ಕುರಿತು ಈಗ ಗೊತ್ತಾಗುತ್ತಿದೆ. ಸೈಬರ್ ಅಪರಾಧವನ್ನು ಆರಂಭದ ಹಂತದಲ್ಲೇ ಯಾವ ರೀತಿ ಹೆಡೆಮುರಿ ಕಟ್ಟಬೇಕು ಎಂಬುದರ ಕುರಿತು ಫ್ಲಾನಿಂಗ್ನಲ್ಲಿದ್ದೇವೆ ಎಂದು ತಿಳಿಸಿದರು.