ETV Bharat / state

ಕೋವಿಡ್​ ನಡುವೆ ಟ್ರಾಫಿಕ್ ನಿಯಮ ಉಲ್ಲಂಘನೆ ಹೆಚ್ಚಳ.. ಹುಷಾರು, ಮನೆಗೇ ಬರ್ತವೆ ಚಲನ್‌ಗಳು!! - Violation of the Covid rule

ಸಿಗ್ನಲ್ ಬಳಿಯ ‌ಸಿಸಿಟಿವಿ ಕ್ಯಾಮೆರಾ, ಡಿಜಿಟಲ್ ತಂತ್ರಜ್ಞಾನ‌ ಮುಖಾಂತರ ವಾಹನ ಸವಾರ ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ಸೀಟ್‌ಬೆಲ್ಟ್ ಧರಿಸದೆ ಓಡಾಟ, ವ್ಹೀಲಿಂಗ್, ನಿಯಮಕ್ಕಿಂತ ಅತಿ ವೇಗದಲ್ಲಿ ಚಾಲನೆ, ಹೀಗೆ‌ ವಿವಿಧ ನಿಯಮಗಳನ್ನು ಉಲ್ಲಂಘನೆ ಮಾಡುವವರ ಮೇಲೆ ಸುಮಾರು 1 ಲಕ್ಷ ಪ್ರಕರಣ ದಾಖಲಿಸಿ‌ ದಂಡ ಕೂಡ ಜಾರಿ ಮಾಡ್ತಿದ್ದೀವಿ..

Traffic police send challan to driver's home for traffic rule violation
ಕೋವಿಡ್​ ನಡುವೆ ಟ್ರಾಫಿಕ್ ನಿಯಮ ಉಲ್ಲಂಘನೆ ಜೋರು: ಮನೆಗೇ ಚಲನ್​ ಕಳುಹಿಸುತ್ತಿರುವ ಪೊಲೀಸರು
author img

By

Published : Aug 5, 2020, 6:15 PM IST

ಬೆಂಗಳೂರು : ಕೊರೊನಾ ನಡುವೆಯೂ ವಾಹನ ಸವಾರರ ಓಡಾಟವೇನೂ ಕಡಿಮೆಯಿಲ್ಲ. ಆದರೆ, ಟ್ರಾಫಿಕ್ ಪೊಲೀಸರಲ್ಲಿ ಕೂಡ ಕೊರೊನಾ ಸೋಂಕು ಹೆಚ್ಚಾಗ್ತಿರುವ ಕಾರಣ ಸದ್ಯ ಸಿಗ್ನಲ್ ಬಳಿ ಯಾವುದೇ ವಾಹನಗಳನ್ನು ತಡೆಯದೇ ತುಸು ವಿರಾಮ ನೀಡಲಾಗಿದೆ.

ಹಾಗಂತಾ, ರೂಲ್ಸ್‌ ಬ್ರೇಕ್‌ ಮಾಡಿ ವಾಹನ ಸವಾರರು ತಪ್ಪಿಸಿಕೊಳ್ಳೋಕಾಗಲ್ಲ. ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ನಂಬರ್​​ಗಳನ್ನು ನೋಟ್ ಮಾಡಿಕೊಳ್ಳಲಾಗುತ್ತಿದೆ. ಆ ಬಳಿಕ ವಾಹನ ಮಾಲೀಕರ ಮನೆಗೆ ದಂಡದ ಚಲನ್‌ಗಳನ್ನ ಕಳುಹಿಸಲಾಗುತ್ತಿದೆ. ನಗರದ ಟ್ರಾಫಿಕ್ ಪೊಲೀಸರು ತಂತ್ರಜ್ಞಾನ ಬಳಕೆಯ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ

ಈ ಕುರಿತು ಈಟಿವಿ ಭಾರತ್ ಜೊತೆ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಲಾಕ್​​​ಡೌನ್ ಮುಗಿದ ಬಳಿಕ ಜನ-ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಪೊಲೀಸರಲ್ಲಿ ಕೊರೊನಾ ಪತ್ತೆಯಾಗಿದೆ. ಹೀಗಾಗಿ ವಾಹನ ಸವಾರರು ದಂಡ ವಿಧಿಸುವವರು ಇಲ್ಲವೆಂದು ರಾಜಾರೋಷವಾಗಿ ನಿಯಮ ಉಲ್ಲಂಘನೆ ಮಾಡಬೇಡಿ. ಸದ್ಯ ಸಿಟಿಯಲ್ಲಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ‌‌ ಮೇಲೆ ಪೊಲೀಸರು ತಂತ್ರಜ್ಞಾನದ ಮೂಲಕ ದಂಡ ವಿಧಿಸುತ್ತಿದ್ದಾರೆ.

ಸದ್ಯ ತಂತ್ರಜ್ಞಾನ ಬಹಳ ಮುಂದುವರೆದಿದೆ‌‌‌. ಹೀಗಾಗಿ, ಸಿಗ್ನಲ್ ಬಳಿ‌ ಇರುವ ‌ಸಿಸಿಟಿವಿ ಕ್ಯಾಮೆರಾ, ಡಿಜಿಟಲ್ ತಂತ್ರಜ್ಞಾನ‌ ಮುಖಾಂತರ ವಾಹನ ಸವಾರ ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ತ್ರಿಬಲ್ ರೈಡಿಂಗ್, ಸೀಟ್‌ಬೆಲ್ಟ್ ಧರಿಸದೆ ಓಡಾಟ, ವ್ಹೀಲಿಂಗ್, ನಿಯಮಕ್ಕಿಂತ ಅತಿ ವೇಗದಲ್ಲಿ ಚಾಲನೆ, ಹೀಗೆ‌ ಬೇರೆ ಬೇರೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ಮೇಲೆ ಸುಮಾರು 1 ಲಕ್ಷ ಪ್ರಕರಣ ದಾಖಲಿಸಿ‌ ದಂಡವನ್ನೂ ಕೂಡ ಜಾರಿ ಮಾಡ್ತಿದ್ದೀವಿ ಎಂದಿದ್ದಾರೆ.

ಬಹುತೇಕ ವಾಹನ ಸವಾರರು ಕುಡಿದು ವಾಹನ ಚಾಲನೆ ಮಾಡುತ್ತಿರುತ್ತಾರೆ. ಒಂದು ವೇಳೆ ಮದ್ಯ ಸೇವನೆ ಮಾಡಿರುವುದು ತಿಳಿದು ಬಂದರೆ ರಕ್ತದ ಮಾದರಿ ಪರೀಕ್ಷೆ ನಡೆಸಿ ದಂಡ ವಿಧಿಸಲಾಗುವುದು ಎಂದಿದ್ದಾರೆ‌.

ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರೊಂದಿಗೆ ಈಟಿವಿ ಸಂದರ್ಶನ

ಸಾರ್ವಜನಿಕರಿಗೆ ಕಿವಿಮಾತು : ಜನರ ಜೀವನ ಸಹಜ‌ ಸ್ಥಿತಿಗೆ ಬರುತ್ತಿದಂತೆ ಟ್ರಾಫಿಕ್ ಹೆಚ್ಚಾಗುತ್ತದೆ. ಈ ವೇಳೆ ಪ್ರಮುಖ ಸಿಗ್ನಲ್ ಬಳಿ‌ 10.15 ಸೆಕೆಂಡ್​​​ಗೆ ವಾಹನಗಳನ್ನು ನಿಲ್ಲಿಸಲಾಗುತ್ತದೆ. 10.15 ಸೆಕೆಂಡ್ ವಾಹನ ಸಿಗ್ನಲ್ ಬಳಿ ನಿಲ್ಲುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ಪ್ರತಿಯೊಬ್ಬರು ಮನೆಯಿಂದ ವಾಹನದಲ್ಲಿ ಹೊರಡುವಾಗ ಹೆಲ್ಮೆಟ್ ಜೊತೆ ಮಾಸ್ಕ್, ರಸ್ತೆ ಬದಿಗಳಲ್ಲಿ ಉಗಿಯೋದು, ಸಾರ್ವಜನಿಕ ಪಾರ್ಕಿಂಗ್ ಬಳಿ‌ ನಿಯಮ ಉಲ್ಲಂಘನೆ ‌ಮಾಡಬೇಡಿ ಎಂದಿದ್ದಾರೆ.

ಟ್ರಾಫಿಕ್ ಇಲಾಖೆಯಲ್ಲಿ ಹೆಚ್ಚಿದ ಸೋಂಕು : ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಣೆ ಮಾಡುವ ಟ್ರಾಫಿಕ್ ಇಲಾಖೆಯ 170ಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿ ಬಹುತೇಕರು ಗೆದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ, 59ವರ್ಷ ಮೇಲ್ಪಟ್ಟ ಇಬ್ಬರು ಮೃತಪಟ್ಟಿದ್ದು, ಈ ವಿಚಾರ ಟ್ರಾಫಿಕ್ ಇಲಾಖೆಯಲ್ಲಿ ಬಹಳ ನೋವಿದೆ. ಆದರೆ, ಉಳಿದ ಸಿಬ್ಬಂದಿ ಬಹಳ ಧೈರ್ಯದಿಂದ ಕೆಲಸ‌ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ನಿಯಮ ಉಲ್ಲಂಘನೆ ‌ಮಾಡಿದರೆ ನಾವು ದಂಡ ವಿಧಿಸಲು ಸಿದ್ಧ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.