ETV Bharat / state

ಡೆಲಿವರಿ ಕೊಡುವ ಯುವಕನ ಜತೆ ಟೋಯಿಂಗ್ ಸಿಬ್ಬಂದಿ ದುರ್ವತನೆ : ಪ್ರಕರಣದ ತನಿಖೆಗೆ ರವಿಕಾಂತೇಗೌಡ ಆದೇಶ

ಇಂದಿರಾನಗರದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಡಿ ಹಿಂದೆ ಓಡಿ ಬಂದರೂ ಬಿಡದೇ ಟೋಯಿಂಗ್ ಸಿಬ್ಬಂದಿ ಡೆಲಿವರಿ ಮಾಡುವ ಯುವಕನ ವಾಹನವನ್ನು ತೆಗೆದುಕೊಂಡು ಹೋಗಿತ್ತು. ಈ ಕುರಿತಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಡಾ.ಬಿ ಆರ್ ​​ರವಿಕಾಂತೇಗೌಡ ಆದೇಶಿಸಿದ್ದಾರೆ..

Traffic Police commissioner order for investigating towing case
ಟೋಯಿಂಗ್ ಸಿಬ್ಬಂದಿ ದುರ್ವತನೆ ಪ್ರಕರಣದ ತನಿಖೆಗೆ ರವಿಕಾಂತೇಗೌಡ ಆದೇಶ
author img

By

Published : Jan 30, 2022, 4:53 PM IST

Updated : Jan 30, 2022, 7:21 PM IST

ಬೆಂಗಳೂರು : ಡೆಲಿವರಿ ಮಾಡುವ ಯುವಕ ಅಂಗಲಾಚಿದರೂ ವಾಹನ ಕೊಡದೆ ಟೋಯಿಂಗ್ ಸಿಬ್ಬಂದಿ ದುರ್ವತನೆ ತೋರಿದ್ದ ಪ್ರಕರಣದ ತನಿಖೆಗೆ ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಡಾ.ಬಿ.ಆರ್​​​.ರವಿಕಾಂತೇಗೌಡ ಆದೇಶಿಸಿದ್ದಾರೆ.

ಟೋಯಿಂಗ್ ವಾಹನದ ಈ ಅಮಾನವೀಯ ಘಟನೆ ಜೀವನ್ ಭೀಮಾನಗರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗೆ ಆದೇಶಿಸಲಾಗಿದೆ.

ವಿಚಾರಣೆ ಮುಕ್ತಾಯವಾಗುವವರೆಗೂ ಟೋಯಿಂಗ್ ವಾಹನದ ಸೇವೆಯನ್ನು ಅಮಾನತ್ತಿನಲ್ಲಿಡಲಾಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಎಎಸ್​ಐರನ್ನು ಟೋಯಿಂಗ್ ಕರ್ತವ್ಯದಿಂದ ಹಿಂಪಡೆದು ಬೇರೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

order copy
ಆದೇಶದ ಪ್ರತಿ

ಇದನ್ನೂ ಓದಿ: ಬೆಂಗಳೂರಿನಲ್ಲಿ ಟೋಯಿಂಗ್​​ ಕಿರಿಕ್ ಆರೋಪ​​​​: ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಆಕ್ರೋಶ

ಶನಿವಾರ ಇಂದಿರಾನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಆನ್‌ಲೈನ್‌ ವಸ್ತುಗಳನ್ನು ಡೆಲಿವರಿ ಮಾಡುವ ಯುವಕನೊಬ್ಬ ತನ್ನ ವಾಹನ ನಿಲ್ಲಿಸಿ ವಸ್ತುಗಳನ್ನು ಕೊಡಲು ಹೋಗಿದ್ದರು. ವಾಪಸ್‌ ಬಂದಾಗ ಟೋಯಿಂಗ್‌ ಸಿಬ್ಬಂದಿ ದ್ವಿಚಕ್ರ ವಾಹನವನ್ನು ತಮ್ಮ ವಾಹನಕ್ಕೆ ತುಂಬಿಕೊಂಡಿದ್ದಾರೆ.

ಅದನ್ನು ಕಂಡ ಆತ ಕೂಡಲೇ ವಾಹನ ಹಿಡಿದುಕೊಂಡು ನಿಲ್ಲಿಸುವಂತೆ ಗೋಳಾಡಿದ್ದಾನೆ. ಆದರೂ ಟೋಯಿಂಗ್‌ ಸಿಬ್ಬಂದಿ ವಾಹನ ನಿಲ್ಲಿಸಿಲ್ಲ. ವಾಹನ ಸವಾರ ವಾಹನ ಬಿಡಿಸಿಕೊಳ್ಳಲು ಓಡುತ್ತಿರುವ ದೃಶ್ಯ ಸಂಚಾರ ಪೊಲೀಸರ ಅಮಾನವೀಯ ವರ್ತನೆಗೆ ಸಾಕ್ಷಿಯಾಗಿತ್ತು. ಈ ವಿಡಿಯೋ ವೈರಲ್‌ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 30, 2022, 7:21 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.