ಬೆಂಗಳೂರು: ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ಕರ್ಫ್ಯೂ 6ನೇ ದಿನಕ್ಕೆ ಕಾಲಿಟ್ಟಿದ್ದು, ಎಂದಿನಂತೆ ವಾಹನ ಸವಾರರು ರಸ್ತೆಗಿಳಿದಿದ್ದಾರೆ.
ಸೋಮವಾರ ಆದ ಕಾರಣ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ಕಂಡು ಬರುತ್ತಿದೆ. ನಗರದ 8ನೇ ಮೈಲಿ, ಜಾಲಹಳ್ಳಿ ಕ್ರಾಸ್, ಯಶವಂತಪುರದ ಬಳಿ ಟ್ರಾಫಿಕ್ ಕಿರಿ ಕಿರಿ ಶುರವಾಗಿದ್ದು, ಅನಗತ್ಯ ಓಡಾಟ ಬೇಡವೆಂದು ಸರ್ಕಾರ ಆದೇಶ ನೀಡಿದ್ದರೂ ವಾಹನ ಸವಾರರು ಡೋಂಟ್ ಕೇರ್ ಎನ್ನುತ್ತಿದ್ದಾರೆ.
ಪೊಲೀಸರು ವಾಹನಗಳನ್ನು ತಡೆದು ಸೀಜ್ ಮಾಡುತ್ತಿದ್ದರೂ ಸಹ ಜನರು ರಸ್ತೆಗಿಳಿಯುತ್ತಿದ್ದು, ರಾಜಧಾನಿಯ ಕೆಲ ಸಿಗ್ನಲ್ ಸಂಪೂರ್ಣ ಜಾಮ್ ಆಗಿರುವ ದೃಶ್ಯ ಕಂಡು ಬಂದಿದೆ.
ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಭಾರಿ ದುರಂತ: ಚಾಮರಾಜನಗರ ಡಿಸಿಗೆ ಸಿಎಂ ತರಾಟೆ