ETV Bharat / state

ರಂಜಾನ್, ಖೇಲೋ ಇಂಡಿಯಾ, ಅಮಿತ್ ಶಾ ಆಗಮನ: ಬೆಂಗಳೂರಿನ ಕೆಲವೆಡೆ ಸಂಚಾರ ಮಾರ್ಗ ಬದಲಾವಣೆ - ಬೆಂಗಳೂರಿನಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ವಾಹನ ಸಂಚಾರ ಮಾರ್ಗ ಬದಲಾವಣೆ

ಇಂದು ರಂಜಾನ್ ಹಬ್ಬ. ಹೀಗಾಗಿ, ನಗರದ ಕೆಲವೆಡೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗೆಯೇ ಖೇಲೋ ಇಂಡಿಯಾ, ಅಮಿತ್ ಶಾ ಆಗಮನದ ಹಿನ್ನೆಲೆಯಲ್ಲಿ ಕೆಲವೆಡೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ಸಂಚಾರ
ವಾಹನ ಸಂಚಾರ
author img

By

Published : May 3, 2022, 6:43 AM IST

Updated : May 3, 2022, 10:16 AM IST

ಬೆಂಗಳೂರು: ರಂಜಾನ್ ಹಬ್ಬದ ಕಾರಣ ಇಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಗರದ ಪೂರ್ವ ಸಂಚಾರ ವಿಭಾಗದ ವ್ಯಾಪ್ತಿಯ ಕೆಲವು ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೆಯೇ ಖೇಲೋ ಇಂಡಿಯಾ ಸಮಾರೋಪ ಸಮಾರಂಭ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ ಹಿನ್ನೆಲೆಯಲ್ಲಿ ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರ್‌ಬಾ ರಸ್ತೆ ಹಾಗೂ ಮಲ್ಯ ಆಸ್ಪತ್ರೆ ರಸ್ತೆ ಹಾಗೂ ಏರ್​ಪೋರ್ಟ್​ ರಸ್ತೆ ತಲುಪಲು ಬದಲಿ ಮಾರ್ಗ ಬಳಸುವಂತೆ ಟ್ರಾಫಿಕ್ ಪೊಲೀಸರು ಕೋರಿದ್ದಾರೆ

ಬನ್ನೇರುಘಟ್ಟ ಮುಖ್ಯರಸ್ತೆಯ ಸಾಗರ್ ಜಂಕ್ಷನ್​ನಿಂದ ಜಿ.ಡಿ.ಮರ ಜಂಕ್ಷನ್​ವರೆಗೆ ಹಾಗೂ ಶಿಲ್ಪಾ ಜಂಕ್ಷನ್‌ನಿಂದ ಸಾಗರ್ ಜಂಕ್ಷನ್ ವರೆಗೆ ಎಲ್ಲ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಜಿ.ಡಿ.ಮರ ಜಂಕ್ಷನ್‌ನಿಂದ ಶಿಲ್ಪಾ ಜಂಕ್ಷನ್​ವರೆಗೆ, ಮಾಸ್ಕ್ ರಸ್ತೆ, ಎಂ.ಎಂ.ರಸ್ತೆ, ಮಿಲ್ಲರ್ಸ್‌ ರಸ್ತೆಯಲ್ಲಿ (ಕಂಟೋನ್‌ಮೆಂಟ್ ರೈಲ್ವೇ ಅಂಡರ್ ಬ್ರಿಡ್ಜ್​​ನಿಂದ ಹೇನ್ಸ್ ಜಂಕ್ಷನ್‌ವರೆಗೆ) ಸಂಚಾರಕ್ಕೆ ಅವಕಾಶವಿಲ್ಲ. ನಾಗವಾರ ಮುಖ್ಯರಸ್ತೆ ಮತ್ತು ಟ್ಯಾನರಿ ಮುಖ್ಯರಸ್ತೆಯಲ್ಲಿ ನಾಗವಾರ ಜಂಕ್ಷನ್​ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಭಾಗಶಃ ಸಂಚಾರ ನಿರ್ಬಂಧಿಸಲಾಗಿದೆ. ನಿಷೇಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

(ಇದನ್ನೂ ಓದಿ: ಕಿಡ್ನಾಪ್, ಕೊಲೆ ಬೆದರಿಕೆ ಪ್ರಕರಣ: ಬಳ್ಳಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬಂಧನ)

ಕಂಠೀರವ ಕ್ರೀಡಾಂಗಣದ ಸುತ್ತ ಸಂಚಾರ ದಟ್ಟಣೆ ಸಾಧ್ಯತೆ, ಬದಲಿ ಮಾರ್ಗ ಬಳಸಲು ಕೋರಿಕೆ... ಖೇಲೋ ಇಂಡಿಯಾ-2021 ರ ಸಮಾರೋಪ ಸಮಾರಂಭದ ಹಿನ್ನೆಲೆಯಲ್ಲಿ ರಾಜಾ ರಾಮ್ ಮೋಹನ್ ರಾಯ್ ರಸ್ತೆ, ಕಸ್ತೂರ್‌ಬಾ ರಸ್ತೆ ಹಾಗೂ ಮಲ್ಯ ಆಸ್ಪತ್ರೆ ರಸ್ತೆಗಳನ್ನು ಬಳಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ನಗರ ಸಂಚಾರಿ ಪೊಲೀಸ್ ವಿಭಾಗ ಕೋರಿದೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಹಲವು ಗಣ್ಯರು, ಆಹ್ವಾನಿತರು ಹಾಗೂ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ ಹಾಗೂ ಕಾಲೇಜು ಬಸ್‌ಗಳಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂದಿದೆ. ಕಂಠೀರವ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ವಿನಂತಿಸಿದೆ.

Traffic in bengaluru
ಬೆಂಗಳೂರಿನ ಕೆಲವೆಡೆ ಸಂಚಾರ ಮಾರ್ಗ ಬದಲಾವಣೆ

ಏರ್​ಪೋರ್ಟ್​ಗೆ ಬದಲಿ ಮಾರ್ಗ: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು, ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಏರ್​​ಪೋರ್ಟ್ ಮೂಲಕ ಹಲವು ಗಣ್ಯರು ಆಗಮಿಸುವ ಹಿನ್ನಲೆ ಏರ್​ಪೋರ್ಟ್ ರಸ್ತೆಯಲ್ಲಿ ವಾಹನಗಳ ದಟ್ಟನೆ ಇರುವುದರಿಂದ ಬದಲಿ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಪ್ರಯಾಣಿಕರಲ್ಲಿ ಮಾನವಿ ಮಾಡಿದ್ದಾರೆ. ಇಂದು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:30ರ ವರೆಗೂ ಏರ್​ಪೋರ್ಟ್ ರಸ್ತೆಯಲ್ಲಿ ಗಣ್ಯರ ಸಂಚಾರ ಇರುವುದರಿಂದ ವಾಹನಗಳ ದಟ್ಟನೆ ಇರಲಿದೆ, ಬಳ್ಳಾರಿ ರಸ್ತೆಯನ್ನು ಬದಲಿ ಮಾರ್ಗವಾಗಿ ಬಳಸುವುದು ಸೂಕ್ತ ಎಂದು ಸಂಚಾರ ಉತ್ತರ ವಿಭಾಗದ ಪೊಲೀಸರು ಪ್ರಯಾಣಿಕಲ್ಲಿ ಮನವಿ ಮಾಡಿದ್ದಾರೆ.

Last Updated : May 3, 2022, 10:16 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.