ಬೆಂಗಳೂರು : ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೀ ರೈಲು ಹಳಿ ತಪ್ಪಿದ್ದರಿಂದಾಗಿ ಸುಗಮ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ರೀ ರೈಲು ವಾಹನವನ್ನು ಸ್ಥಳದಿಂದ ಲಿಫ್ಟ್ ಮಾಡಲಾಗಿದೆ. ಕ್ರೇನ್ ಮೂಲಕ ಸಿಬ್ಬಂದಿ ರೀ ರೈಲನ್ನು ತೆರವುಗೊಳಿಸಿ ರಸ್ತೆಗಿಳಿಸಿದರು.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಮಾಹಿತಿ ನೀಡದ ಬಿಎಂಆರ್ಸಿಎಲ್ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ನಾಗಸಂದ್ರದಿಂದ ರೇಷ್ಮೆ ಸಂಸ್ಥೆಯ ಹಸಿರು ಮಾರ್ಗದಲ್ಲಿ ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ರೀ ರೈಲು ಹಳಿ ತಪ್ಪಿದ್ದರಿಂದ ಅನಿವಾರ್ಯವಾಗಿ ಉಭಯ ಹಳಿಗಳ ಮಧ್ಯೆ ಮೆಟ್ರೋ ಸಂಚಾರವನ್ನು ತಡೆಹಿಡಿಯಲಾಗಿತ್ತು. ಈ ಸಂಗತಿ ತಿಳಿಯದೇ ಹಲವು ಪ್ರಯಾಣಿಕರು ಯಶವಂತಪುರ ಮೆಟ್ರೋ ರೈಲು ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿವಿಧ ಕೆಲಸಗಳ ನಿಮಿತ್ತ ನಿಲ್ದಾಣದಲ್ಲಿ ನೆರೆದಿದ್ದ ಪ್ರಯಾಣಿಕರು ಮೆಟ್ರೋ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಹಳಿ ತಪ್ಪಿದ ಮೆಟ್ರೋ ರೀ ರೈಲು: ಇಂದು ಬೆಳಗ್ಗೆ ರಾಜಾಜಿನಗರದ ಬಳಿ ನಮ್ಮ ಮೆಟ್ರೋ ಗ್ರೀನ್ ಲೈನ್‌ನಲ್ಲಿ ರೀ ರೈಲು ಹಳಿ ತಪ್ಪಿದ್ದು, ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಸಕಾಲಕ್ಕೆ ನಿಗದಿತ ಸ್ಥಳ ತಲುಪಲು ಸಾಧ್ಯವಾಗದೆ ಪ್ರಯಾಣಿಕರು ಪರದಾಡಿದರು. ಇದೀಗ ರೀ ರೈಲನ್ನು ಸ್ಥಳದಿಂದ ಲಿಫ್ಟ್ ಮಾಡಲಾಗಿದೆ. ಇದಕ್ಕೂ ಮುನ್ನ ಒಂದು ಟ್ರ್ಯಾಕ್ನಲ್ಲಿ ಮಾತ್ರ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿದ್ದವು.
ಬೆಳಗ್ಗೆ ರೈಲು ಬರದೇ ತಡವಾಗುತ್ತಿರುವುದರ ಬಗ್ಗೆ ಪ್ರಯಾಣಿಕರು ಮೆಟ್ರೋ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ರಾಜಾಜಿನಗರ ಮೆಟ್ರೋ ನಿಲ್ದಾಣ ಬಳಿ ರೀ ರೈಲು ಹಳಿ ತಪ್ಪಿದ್ದರಿಂದ ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ಕುರಿತು ಮೊದಲೇ ಮಾಹಿತಿ ನೀಡದ್ದಕ್ಕೆ ಮೆಟ್ರೋ ಸಿಬ್ಬಂದಿ ಮೇಲೆ ಪ್ರಯಾಣಿಕರು ಗರಂ ಆದರು.
ಅಲ್ಲದೆ ಪ್ರಯಾಣಿಕರು ಟಿಕೆಟ್ ಪಡೆದು ಗಮ್ಯಸ್ಥಾನಕ್ಕೆ ತೆರಳಲು ಕಾಯುತ್ತಿದ್ದರು. ಟಿಕೆಟ್ ಪಡೆಯುವ ಮುನ್ನ ವಿಷಯ ತಿಳಿಸದ ಸಿಬ್ಬಂದಿ ವಿರುದ್ಧ ಕೆಂಡಾಮಂಡಲವಾದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರಯಾಣಿಕರು ಬಿಎಂಟಿಸಿ ಹಾಗೂ ಆಟೋ ಹತ್ತಿ ಕಚೇರಿಗಳಿಗೆ ಹೊರಟರು.
-
#GreenLine Metro services are back to normal 👍 https://t.co/ohnZRmEOmj pic.twitter.com/d8V4zFeGCw
— Bangalore Metro Updates (@WF_Watcher) October 3, 2023 " class="align-text-top noRightClick twitterSection" data="
">#GreenLine Metro services are back to normal 👍 https://t.co/ohnZRmEOmj pic.twitter.com/d8V4zFeGCw
— Bangalore Metro Updates (@WF_Watcher) October 3, 2023#GreenLine Metro services are back to normal 👍 https://t.co/ohnZRmEOmj pic.twitter.com/d8V4zFeGCw
— Bangalore Metro Updates (@WF_Watcher) October 3, 2023
ರಾಜಾಜಿನಗರ ಬಳಿ ರೀ ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಫೀಡರ್ ಬಸ್ಗಳನ್ನು ಬಿಎಂಟಿಸಿ ಒದಗಿಸಿತ್ತು. ಯಶವಂತಪುರದಿಂದ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ನಡೆಸಿದವು. ಪ್ರಯಾಣಿಕರಿಗೆ ಅನುಗುಣವಾಗಿ ಯಶವಂತಪುರ ಮೆಟ್ರೋ ನಿಲ್ದಾಣದಿಂದ ಬಸ್ ಸೇವೆ ಕಲ್ಪಿಸಲಾಗಿತ್ತು.ಇದೀಗ ಮೆಟ್ರೋ ಸಂಚಾರ ಸುಗಮಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಹಸಿರು ಮಾರ್ಗದಲ್ಲಿ ಸಂಚಾರ ವ್ಯತ್ಯಯ: ಮಾಹಿತಿ ನೀಡದ ಬಿಎಂಆರ್ಸಿಎಲ್ ವಿರುದ್ಧ ಪ್ರಯಾಣಿಕರ ಆಕ್ರೋಶ