ಬೆಂಗಳೂರು: ರಾಜ್ಯದಲ್ಲಿ ಸರ್ಕಾರಕ್ಕೆ ಕೋವಿಡ್ ವೈರಸ್ನಿಂದ ಶುರುವಾದ ಚಾಲೆಂಜ್, ಚಿಕಿತ್ಸೆಯಿಂದ ಹಿಡಿದು ಬೆಡ್ ವ್ಯವಸ್ಥೆವರೆಗೆ ಇತ್ತು. ಇದೀಗ ವ್ಯಾಕ್ಸಿನ್ ಹಂಚಿಕೆಗೆ ಟಫ್ ಚಾಲೆಂಜ್ ಶುರುವಾಗಿದ್ದು, ಅಸಲಿ ಸವಾಲ್ ಎದುರಾಗಿದೆ.
ವ್ಯಾಕ್ಸಿನ್ ಸ್ಟೋರೇಜ್, ಸಾಗಣಿಕೆಗೆ ಪಕ್ಕಾ ಪ್ಲಾನ್ ಆಗಿದ್ರೂ ಸಹ ಸಮಸ್ಯೆಯೊಂದು ಎದುರಾಗಿದೆ. ರಾಜ್ಯಕ್ಕೀಗ ಪಿಹೆಚ್ಸಿ ಸೆಂಟರ್ ( primary health care center)ಗಳದ್ದೇ ದೊಡ್ಡ ತಲೆನೋವು ಆಗಿದ್ದು, ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಲಸಿಕೆ ಹಂಚಿಕೆ ಕಷ್ಟ ಸಾಧ್ಯವಾಗಿದೆ.
ಮೊನ್ನೆ ನಡೆಸಿದ ಡ್ರೈರನ್ ವೇಳೆ ಸಮಸ್ಯೆ ಬಗ್ಗೆ ಆರೋಗ್ಯ ಇಲಾಖೆಗೆ ತಿಳಿದಿದೆ. ರಾಜ್ಯದಲ್ಲಿ ಸುಮಾರು 2,195 ಪಿಹೆಚ್ಸಿ ಸೆಂಟರ್ಗಳಿವೆ. ಅದರಲ್ಲಿ ವ್ಯಾಕ್ಸಿನ್ ಹಂಚಿಕೆಗೆ ಬೇಕಾದಷ್ಟು ಜಾಗ ಎಲ್ಲಾ ಕಡೆ ಸೌಲಭ್ಯವಿಲ್ಲ. ವ್ಯಾಕ್ಸಿನ್ ಹಂಚಿಕೆಗೆ ಕನಿಷ್ಟ ಮೂರು ಕೊಠಡಿಗಳ ಅವಶ್ಯಕತೆ ಇದೆ. ಬಹುತೇಕ ಪಿಹೆಚ್ಸಿಗಳಲ್ಲಿ ಮೂರು ಕೊಠಡಿಗಳ ಸೌಲಭ್ಯ ಸಿಗುವುದಿಲ್ಲ. ಒಂದು ವೇಳೆ ಮೂರು ಕೊಠಡಿಗಳ ಸೆಂಟರ್ ಅನ್ನು ಬಳಸಿಕೊಂಡರೂ ಬೇರೆ ರೋಗಿಗಳಿಗೆ ಚಿಕಿತ್ಸೆ ಕೊಡುವುದು ಕಷ್ಟವಾಗುತ್ತದೆ. ಇದೀಗ ಇದೇ ವಿಷಯದ ಬಗ್ಗೆ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ.
ಪಿಹೆಚ್ಸಿ ಬದಲಿಗೆ ಬೇರೆ ಯಾವ ಜಾಗಗಳನ್ನು ಬಳಸಿಕೊಳ್ಳಬೇಕು ಎಂಬ ಚಿಂತನೆ ನಡೆಯುತ್ತಿದೆ. ವ್ಯಾಕ್ಸಿನ್ ಹಂಚಿಕೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಈ ವಿಷಯಕ್ಕೂ ಇದೀಗ ಟೆನ್ಷನ್ ಹೆಚ್ಚಾಗಿದೆ. ಸದ್ಯ ಆರೋಗ್ಯ ಇಲಾಖೆ ಬೇರೆ ಜಾಗಗಳ ಹುಡುಕಾಟದಲ್ಲಿದೆ. ವ್ಯಾಕ್ಸಿನ್ ಹಂಚಿಕೆಗೆ ಡೀಪ್ ಫ್ರೀಜರ್ 3,495, ಐಸ್ ಲೈನ್ಸ್ ರೆಫ್ರಿಜರೇಟರ್ಸ್ 3,776, ವಾಕ್ ಇನ್ ಕೂಲರ್ಸ್ 9, ವಾಕ್ ಇನ್ ಫ್ರೀಜರ್ 5, ಕೋಲ್ಡ್ ಚೈನ್ ಪಾಯಿಂಟ್ಸ್ 2,870 ಹೊಂದಿದೆ. ಆದರೆ ಇವುಗಳನ್ನು ಪಿಹೆಚ್ಸಿ ಸೆಂಟರ್ಗಳಿಗೆ ತಂದು ಹಂಚಿಕೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಇದನ್ನು ಯಾವ ರೀತಿ ಇಲಾಖೆ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.