ETV Bharat / state

ನಾಳೆ ಬೆಳಗ್ಗೆ ಸಚಿವ ಸಂಪುಟ ರಚನೆ: ಸಿಎಂ ಬಿಎಸ್​ವೈ ಸ್ಪಷ್ಟನೆ

ಪ್ರವಾಹದ ಹಿನ್ನೆಲೆ ತಡವಾಗಿದ್ದ ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ರಚನೆಗೆ ಮುಹೂರ್ತ ನಾಳೆ ಫಿಕ್ಸ್​​ ಆಗಿದೆ.

ಸಿಎಂ ಬಿಎಸ್​ವೈ
author img

By

Published : Aug 19, 2019, 12:17 PM IST

ಬೆಂಗಳೂರು: ಮಂಗಳವಾರ ಬೆಳಗ್ಗೆ 10-30 ರಿಂದ 11-30ರ ಒಳಗೆ ಸಚಿವ ಸಂಪುಟ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಈಗಾಗಲೇ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ರಾಜಭವನದಲ್ಲೇ ಪ್ರಮಾಣವಚನ ಸ್ವೀಕರಿಸಲಾಗುವುದು. ಇದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾದ ಬಗ್ಗೆ ಈಗಾಗಲೇ ರಾಜಭವನದ ಜೊತೆ ಮಾಹಿತಿ ಪಡೆಯಲಾಗಿದೆ. ನಾಳೆ ಸಚಿವ ಸಂಪುಟ ರಚನೆ ಬಳಿಕ, ಮಂತ್ರಿ ಮಂಡಲದ ಸಭೆ ಕರೆಯಲಾಗುವುದು ಎಂದು ಬಿಎಸ್​ವೈ ತಿಳಿಸಿದರು.

ನಾಳೆ ಬೆಳಗ್ಗೆ ಸಚಿವ ಸಂಪುಟ ರಚನೆ

ಹೆಚ್​ಡಿಕೆ ಆರೋಪಕ್ಕೆ ಸಿಎಂ ಯಡಿಯೂರಪ್ಪ ತಿರುಗೇಟು ನೀಡಿ, ಕುಮಾರಸ್ವಾಮಿ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಏನ್ ಮಾಡಿದ್ರು ಅಂತ ಇಡೀ ಜಗತ್ತಿಗೇ ಗೊತ್ತಿದೆ. ನನ್ನ ಬಾಯಿಂದ ಯಾಕೆ ಹೇಳ್ಬೇಕು. ಅವರ ಹೇಳಿಕೆ ಬಗ್ಗೆ ನಾನು ಉತ್ತರ ಕೊಡಲ್ಲ ಎಂದರು.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಟೆಲಿಗ್ರಾಫ್ ಕಾಯ್ದೆ ಪ್ರಕಾರ ಟೆಲಿಫೋನ್ ಕದ್ದಾಲಿಕೆ ಶಿಕ್ಷಾರ್ಹ ಅಪರಾಧ. ಟೆಲಿಫೋನ್ ಕದ್ದಾಲಿಕೆ ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾಗಾಗಿ ಈ ಪ್ರಕರಣವನ್ನು ಯಡಿಯೂರಪ್ಪ ಸಿಬಿಐ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

Intro:kn_bng_03_bsy_shettar_byte_7202707

Body:kn_bng_03_bsy_shettar_byte_7202707

Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.